ಎಳ್ಳು ಬೆಲ್ಲ ಸವಿಯುತ್ತಾ
ಕಬ್ಬಿನ ಸಿಹಿಯ ಹೀರುತ್ತಾ
ದ್ವೇಷ ಅಸೂಯೆ ಮರೆಯುತ್ತಾ
ಸವಿ ಮಾತುಗಳನ್ನು ನುಡಿಯುತ್ತಾ
ಮಕರ ಸಂಕ್ರಾಂತಿಗೆ ಸ್ವಾಗತ ಕೋರೋಣ.
ಮೂಡಣದ ಅರಮನೆಯ ಕದವು ತೆರೆದು
ಪಡುವಣದ ಕತ್ತಲೆಯ ಪರದೆ ಸರಿದು
ಹೊಂಬಣ್ಣದ ರವಿಯ ಕಿರಣ ಹರಿದು
ಕೆಂಬಣ್ಣದ ತಂಬೆಳಕ ಸುರಿದು
ತಂಪಾದ ತಂಗಾಳಿ ಸುಳಿದು
ಇಂಪಾದ ರಾಗ ಮಿಡಿದು
ಹೂಕಂಪು ಸೂಸಿ
ಹೇಳುತಿದೆ
ನಿಮಗೆ
"ಮಕರ ಸಂಕ್ರಾಂತಿ ಹಬ್ಬದ ಶುಭಾಷಯಗಳು "