Saturday 4 April 2020

ಕುವೆಂಪು ನುಡಿ-ಕಿಡಿ-೧ (Kuvempu Quotes)


v ಜಾತಿ ಮತ ಬಿಡಿ, ಮಾನವತೆಗೆ ಜೀವ ಕೊಡಿ

v ಕಡಲಿನ ಎದುರು ಹನಿಗೆ ಪ್ರದರ್ಶನ ಸಲ್ಲದು.

v ಉತ್ಸಾಹವೆಂಬುದು ಕಲ್ಲಿದ್ದಲ ಒಳಗಿನ ಕಾವಾಗಬೇಕೆ ಹೊರತು ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು.

v ತನ್ನ ತಾನ್ ಇಲ್ಲಗೈವುದು ಎಲ್ಲ ಸಾಧನೆಯ ಕೊನೆಯ ಗುರಿ

v ಸೃಷ್ಟಿ ಸೌಂದರ್ಯವನ್ನು ಪ್ರೀತಿಸುವುದೇ ಸೃಷ್ಟಿಕರ್ತನ ನಿಜವಾದ ಪೂಜೆ

v ಪಾಪಿಗುದ್ದಾರಮಿಹುದೌ ಸೃಷ್ಟಿಯ ಬ್ರುಹದ್ವಿಶ್ವವ್ಯೂಹದೊಳ್

v ಸುಂದರ ವನ ಸಂಸ್ಕೃತಿಯ ಮುಂದೆ ನಾಗರೀಕ ಸಂಸ್ಕೃತಿಯು ದಾರಿದ್ರ್ಯವೇ ದಿಟ.

v ಗಿರಿವನ ಪ್ರೇಮ ಸುಮ್ಮನೆ ಅಲ್ಲ, ಅದಕೂ ದೈವ ಕೃಪೆ ಬೇಕು

v ನಿನ್ನ ಸಂಸ್ಕೃತಿಗೆ ನೀನಾದರೆ ಅನ್ಯ, ಅದಾವ ಸಂಸ್ಕೃತಿಗೆ ನೀ ಮಾನ್ಯ?

v ಸೂರ್ಯೋದಯ ಅಸ್ತಮಾನಗಳಿಗೆ ಮೈಚೆಲ್ಲಿ ಪಾವನಗೊಳ್ವುವು ಗಿರಿಶಿಖರಂಗಳ್..

v ತೊರೆ ಅವಿದ್ಯೆಯಂ ಆಗೋ ಕಾಣ್ ಕಣ್ ತೆರೆದುದತೀಂದ್ರಿಯಕೆ..

**
ಕವಿಯಮನ ನಂದನವನ
ಆನಂದದ ರಸನಿಕೇತನ
ಅಲ್ಲಿ ಪಾಪವೂ ಪುಣ್ಯದ ವಾಹನ
ಅಲ್ಲಿ ದುಃಖವೂ ಸುಖದ ಜವಾನ
ಅಲ್ಲಿ ಸಾವೂ ಅಮೃತಾಯಾನ
 (:-ಮಂತ್ರಾಕ್ಷತೆ ಕವನ ಸಂಕಲನ)



:- ವಿಶ್ವಮಾನವ ವಿವೇಕಾನಂದ ಮತ್ತು ಕುವೆಂಪು ವಿಚಾರ ವೇದಿಕೆ.

ಒಲವು-ಚೆಲುವು (ಕಿರುಗವನಗಳು)

ಮುದ್ದು ಒಲವೆ, ಮನದ ಗೆಲುವೆ
ವರವಾಗಿ ನೀನು ಬರುವೆಯಾ!
ಒಲವ ಗೆದ್ದು ವಿಕಾಸ ಪಡೆದು
ಬದುಕ ಉಜ್ವಲಗೊಳಿಸೆಯಾ
ವಿರಹ ಅಳಿಸಿ ಸೊಗದಿ ನೆಲೆಸಿ
ಮೊಗದಿ ನಗುವ ತರುವೆಯಾ
ಸಾಕು ನೋವು, ಬೇಕು ಚೆಲುವು
ಮಯೂರಿಯಂತೆ ನಲಿವೆಯಾ...


ಬೃಂದಾವನದ ಏ ಚೆಲುವೆ..!
ಗೋಪಿಕಾ ಪ್ರೇಮದೊಲವೆ..!
ಮಾಧವನನೆ ಪ್ರೇಮ ಬಂಧನದಲಿರಿಸಿದೆ
ನಿಜ ಪ್ರೇಮದ ಅರ್ಥವ ಜಗಕೆ ಸಾರಿದೆ..
ಮನ-ಮನ ಪ್ರೀತಿಗೆ ಮಾದರಿ ಒಲವಾದೆ
ಜಗದಂತ್ಯದವರೆಗೊ ಅಮರ ತ್ಯಾಗಿಯಾದೆ!
ಮದುವೆಯ ಬಂಧ, ದೇಹ ಸಂಬಂಧ
ಮೀರಿದ ಮನಸುಗಳ ಮೀಲನಾನುಬಂಧ
ಆತ್ಮಗಳ ಐಕ್ಯತೆ ಸೊಗ ಪರಮಾನಂದ
ಕಲಿಯಲಿ ಕಲಿಯುಗ ನಿಮ್ಮ ಪ್ರೇಮದಿಂದ!

:-ಕೃತಿ

Friday 3 April 2020

ಅದೇನು ಪ್ರೇಮ!


ದ್ವಾಪರಯುಗದಲಿ ಕಾದಿದೆ ನೀನು!
ಕಲಿಯುಗದಲು ಕರೆಯುತಿಹೆ ಏನು?
ನಿನಗಲ್ಲದೆ ಇನ್ಯಾರಿಗೆ ಮುಕುಂದ
ನಿನ್ನೊಲವಲಿ ಪಡುವನು ಬಹು ಆನಂದ
ಬೇಸರ ಬೇಡ, ಬರುವನು ನೋಡ
ಪ್ರೆಮಧಾರೆಯನವನಿಗೆ ಹರಿಸಿ ನೀ ನೋಡ
ವಿಕಾಸದ ಒಲವು ದೇವರ ವರವು
ಪಸರಿಸಲಿ ಜಗಕೆ ಬಾಂಧವ್ಯ ಪರಿಮಳವು|
ಅಂದಿನ ಅಗಲಿಕೆ, ಅನುಭವಿಸಿದ ವಿರಹ
ಇಂದಿನ ಬೆಸುಗೆ, ಚೈತನ್ಯದ ಸ್ನೇಹಾ
ಏನೀ ಬಂಧನ ನಿಮ್ಮೀ ಪ್ರೇಮಾನುಬಂಧನ
ಸರ್ವಕಾಲಕು ನಿಮ್ಮ ಬದುಕೇ ಬೃಂದಾವನ
ನಿನ್ನನು ಪಡೆದ ಕೃಷ್ಣನೇ ಧನ್ಯ!
ಅವನ ಹೃದಯವ ಗೆದ್ದ ನೀನೇ ಮಾನ್ಯ!


:-ಕೃತಿ

ಪ್ರಕೃತಿ-ಚಿಂತನಾ

ಕೋವಿಡ್-೧೯ (Corona virus India lockdown ಸಮಯದಲ್ಲಿ ಗೀಚಿದ ಕವನ)

ಓ ಮನುಜಾ….
ಏನಾಗುತಿದೆ, ಏನಾಗಲಿದೆ
ಕೊಲ್ಲುತಿದೆ, ಕುಣಿದಾಡುತಿದೆ
ಕಾಣದ ಜೀವಿಯು ಬಂದು
ಮನುಕುಲವನ್ನೇ ಸೋಲಿಸಿದೆ||
ಓ ಮನುಜಾ….
ಇನ್ನಾದರೂ ಕಲಿ ನೀ ಬುದ್ದಿ
ಇಡು ನೀ ಪ್ರಕೃತಿಯಾ ಶುದ್ದಿ
ನಾನು, ನನಗಷ್ಟೇ ಎಂಬುದ ಬಿಡು
ಇಂದೂ ಬಳಸಿ, ಮುಂದಕು ಉಳಿಸು
ನಿನ್ನುಳಿವು ನಿನ್ನ ಕೈಲಿದೆ ನೋಡು..
ಓ ಮನುಜಾ….
ಧರೆ ಎಂಬುದು ನಿನ್ನದೊಬ್ಬನದಲ್ಲ
ಸಕಲಜೀವರಾಶಿಗದು ಬೇಕಲ್ಲ
ಇದರಲಸಮಾನತೆ ಯಾಕೆ ಮಾಡಿದೆ
ನಿನ್ನಯ ಸ್ವಾರ್ಥವೇ ನಿನ್ನನು ತಿಂದಿದೆ
ಕಲಿಯಬಾರದೆ ನೀ ಇದರಿಂದೆ....
ಓ ಮನುಜಾ….
ಚಿಂತಿಸಿ ನೋಡು,  ಮ೦ಥಿಸಿ ನೋಡು
ಮಾನವೀಯತೆಯ ಬದುಕಲಿ ಓಡು
ಸುಸ್ಥಿರ ವಿಕಾಸ ಜೀವನ ಪಾಡು
ಇದುವೇ ನಿನ್ನಯ ರಕ್ಷಣ ಮಂತ್ರ
ಅನ್ಯತಾ ಬೇರಿಲ್ಲಾ ತಂತ್ರ….
ಓ ಮನುಜಾ….

:-ಕೃತಿ

ಪುರಾತನದಿಂದ ವರ್ತಮಾನದವರೆಗೂ ಗಮನ ಸೆಳೆದಿರುವ ಚಾತಕ ಪಕ್ಷಿ - Jacobin Cuckoo!!

ಏನೆಂದು ಬಣ್ಣಿಸಲಿ ನಿನ್ನ ಮಹಿಮೆಯ ಓ ಚಾತಕ ಪಕ್ಷಿಯೇ!? ಪುರಾಣದಲಿ ಜಾನಪದದಲಿ ಕಾಳಿದಾಸ ತುಳಸೀದಾಸ ಕುವೆಂಪುರಾದಿಯಾಗಿ ಕವಿವರ್ಯರ ವಿರಹ ಕಾವ್ಯ ಸಾಲುಗಳಲಿ ಮೆರೆಯುತಿರುವ ಉಪ...