Showing posts with label GK. Show all posts
Showing posts with label GK. Show all posts

Sunday, 4 August 2024

ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಸಂದೇಶಗಳು - 01 | K P Poornachandra Tejasvi Quotes

 ಕೆ. ಪಿ ಪೂರ್ಣಚಂದ್ರ ತೇಜಸ್ವಿಯವರ ಕೆಲವು ಪರಿಸರ ಸಂಬಂಧಿತ ಸಂದೇಶಗಳು:

1. ಈ ಜೀವ ಸಮುಚ್ಚಯದಲ್ಲಿ ಕ್ರಿಮಿಕೀಟಗಳು ಪಶುಪಕ್ಷಿಗಳು ತೋರಿಸುತ್ತಿರುವಷ್ಟು ಹೊಂದಾಣಿಕೆ ಮತ್ತು ಸಾಮರಸ್ಯಗಳನ್ನು ವಿವೇಕಿ ಮತ್ತು ಬುದ್ಧಿವಂತನಾದ ಮಾನವ ತೋರಿಸಲು ಸಾಧ್ಯವಿಲ್ಲವೇ? ಎನ್ನುವುದೇ ಈಗ ನಮ್ಮ ಮುಂದೆ ಇಕಾಲಜಿ ಇಟ್ಟಿರುವ ಪ್ರಶ್ನೆ.

2. ಈ ಜಗತ್ತು ವಿಸ್ಮಯಗಳ ಅಕ್ಷಯ ಪಾತ್ರೆ

3. ನಮ್ಮ ಸದ್ಯದ ಜೀವನಕ್ರಮ ಮತ್ತು ವಿಕಾಸದ ಒತ್ತಡಗಳು ನಮ್ಮನ್ನು ಎಲ್ಲಿಗೆ ಒಯ್ಯುತ್ತಿವೆಯೋ ಬಲ್ಲವರಾರು?

4. ಪರಿಸರ ಅನ್ನೋದು ಏನು? ಮನುಷ್ಯನ ಸಮಾಜ ಅನ್ನೋದು ಮತ್ತು ಮನುಷ್ಯನ ಆತ್ಮ ಅನ್ನೋದು ಈ ಮೂರು ಹಾಳಾದರು ಒಟ್ಟಿಗೆ ಹಾಳಾಗೋದು; ಉದ್ಧಾರ ಆದರೂ ಒಟ್ಟಿಗೆ ಉದ್ಧಾರ ಆಗೋದು!

5. ಕಾಲದೊಂದಿಗೆ ಸಂಸ್ಕೃತಿ ಬದಲಾಗುತ್ತಾ ಇರುತ್ತದೆ . ಬೇಕಾದದ್ದನ್ನು ಇಟ್ಟುಕೊಳ್ಳುತ್ತದೆ. ಬೇಡವಾದದ್ದನ್ನು ಬಿಡುತ್ತದೆ‌.

6. ಜೀವನ ಮಟ್ಟವನ್ನು ನಿರಂತರವಾಗಿ ಏರಿಸಬೇಕೆನ್ನುವ ದುರಾಸೆಯಲ್ಲಿ ಪ್ರಕೃತಿದತ್ತವಾದ ಸಂಪನ್ಮೂಲಗಳನ್ನೆಲ್ಲಾ ಮನುಷ್ಯ ಯದ್ವಾತದ್ವಾ ಲೂಟಿ ಮಾಡುತ್ತಿದ್ದಾನೆ.

7. ಯಾಂತ್ರಿಕ ಬದುಕು ಮನುಷ್ಯನನ್ನು ತನ್ನ ಪರಿಸರದಿಂದ ಹಾಗೂ ಕೌಟುಂಬಿಕ ಮಾನವೀಯ ವಾತಾವರಣದಿಂದ ಪ್ರತ್ಯೇಕಿಸುತ್ತಾ ತಾನೊಂದು ವಿಶ್ವಸಮಾಜದ ಅಂಶ ಎನ್ನುವ ತಿಳುವಳಿಕೆ ಮರೆಯಾಗುತ್ತಾ ಇದೆ. ಸಜೀವ ಜಗತ್ತಿನ ಸರ್ವ ಚರಾಚರ ವಸ್ತುಗಳೊಂದಿಗೇ ತಾನು ಬದುಕಬೇಕೆಂಬ ಅರಿವು ಮಾಯವಾಗುತ್ತಿದೆ. ಇದರಿಂದಾಗಿ ಆಧುನಿಕ ನಾಗರಿಕತೆಯ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

8. ಪರಿಸರವನ್ನು ಉಳಿಸ್ಬೇಕು ಅಂತಿದ್ದರೆ, ಮಕ್ಕಳಿಗೆ ಶಿಕ್ಷಣ ಕೊಡುವುದೇ ಅತ್ಯುತ್ತಮ ವಿಧಾನ. ಯಾಕೆಂದರೆ ಈ ದೊಡ್ಡವರ ಬುದ್ಧಿ ಬದಲಾಯಿಸುವುದು ವಿಪರೀತ ಕಷ್ಟ. ಎಷ್ಟು ಹೇಳಿದ್ರೂ ಅರ್ಥ ಆಗೋದಿಲ್ಲ. ಅದೇ ಮಕ್ಕಳಿಗೆ ಅವರ ಟೀಚರ್ ಹೇಳಿಬಿಟ್ರು ಅಂದ್ರೆ ವೇದವಾಕ್ಯ ಅದು.

9. ವಿಶ್ವಪರಿಸರ ಸಂರಕ್ಷಣೆಯ ಹೋರಾಟಕ್ಕೆ ನಮ್ಮ ಓಬೀರಾಯನ ಕಾಲದ ನ್ಯಾಯ ಸಂಹಿತೆಗಳು ಮತ್ತು ಅಂಥದೇ ದೃಷ್ಟಿಕೋನವಿರುವ ನ್ಯಾಯಾಂಗಗಳು ಬಹು ದೊಡ್ಡ ಅಡ್ಡಿಯಾಗಿದ್ದಾರೆ. ಕಾಲ ಮೀರುವ ಮೊದಲೇ ನ್ಯಾಯಾಂಗ ಇದನ್ನು ತಿಳಿದು ತಾನೆ ಸ್ವತಃ ಏನಾದರೂ ಮಾಡದಿದ್ದರೆ ಬಹು ದೊಡ್ಡ ಅಪಕೀರ್ತಿಗೆ ಒಳಗಾಗಬೇಕಾಗುತ್ತದೆ.

10. ಆಹಾರದ ಪಿರಮಿಡ್ಡಿನ ಯಾವೊಂದು ಜೀವಸಂತಾನದ ಅಳಿವೂ ಕೊನೆಗೆ ಮುಂಬರಲಿರುವ ತನ್ನ ನಿರ್ವಂಶದ ಮುನ್ನುಡಿಯೇ ಎಂದು ಮಾನವನಿಗೆ ನಿಧಾನವಾಗಿ ಅರಿವಾಗುತ್ತಿದೆ.

11. ಇಕಾಲಜಿ ಎಂದರೆ ಇಡೀ ಜೀವಸ್ತರದ ಪರಸ್ಪರ ಸಂಬಂಧ, ಅವಲಂಬನೆಗಳ ಅಭ್ಯಾಸ. ಇಡೀ ವಿಶ್ವದ ಜೀವಸಮಸ್ತವನ್ನೂ ಅದರ ಪರಿಸರವನ್ನೂ ಒಂದು ವ್ಯಕ್ತಿತ್ವವನ್ನಾಗಿ ಕಾಣುವ ದರ್ಶನ.

ಕೆ. ಪಿ. ಪೂರ್ಣಚಂದ್ರ ತೇಜಸ್ವಿ

ಭಾರತೀಯ ಸಾಧಕರು - 01 | Achievers of India -01

 ಸಾಧಕರು: ಡಾ. ಎ.ಪಿ. ಜೆ ಅಬ್ದುಲ್ ಕಲಾಂ.

ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿಗಳು, ಲೇಖಕರು, ಚಿಂತಕರು ಆಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಎಲ್ಲಾ ವಯಸ್ಸಿನ ಮತ್ತು ಎಲ್ಲಾ ಹಿನ್ನೆಲೆಯ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅವರ ಬದ್ಧತೆ ಮತ್ತು ದೇಶಕ್ಕೆ ಅವರ ಸೇವೆ ಅವರಿಗೆ "ದೇಶದ ಕ್ಷಿಪಣಿ ಮನುಷ್ಯ ( Missile Man of India) ಎಂಬ ಬಿರುದನ್ನು ತಂದು ಕೊಟ್ಟಿದೆ.

ಬಾಲ್ಯ ಜೀವನ:

ಡಾ. ಎ.ಪಿ. ಜೆ ಅಬ್ದುಲ್ ಕಲಾಂ ಅವರು, ಅಕ್ಟೋಬರ್‌ 15,1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು, ಅವುಲ್ ಫಕೀರ್ ಜೈನಯಲಾಬ್ದೀನ್ ಅಬ್ದುಲ್ ಕಲಾಂ. ಇವರ ತಂದೆಯ ಹೆಸರು ಜೈನುಲಬ್ದೀನ್‌, ತಾಯಿ ಆಶೀಮಾ. ತಂದೆ ದೋಣಿಯ ಚಲಾಯಿಸುವ ವೃತ್ತಿ ಮಾಡುತ್ತಿದ್ದರೇ, ತಾಯಿ ಗೃಹಣಿ. ಇವರಿಗೆ ಐದು ಮಂದಿ ಸಹೋದರರು. ಅದರಲ್ಲಿ ಅಬ್ದುಲ್‌ ಕಲಾಂ ಅವರೇ ಚಿಕ್ಕವರು.


ವಿದ್ಯಾಭ್ಯಾಸ:

ಅಬ್ದುಲ್‌ ಕಲಾಂ ಅವರ ವಿದ್ಯಾರ್ಥಿ ಜೀವನವು ಕಷ್ಟಗಳು ಮತ್ತು ಹೋರಾಟಗಳಿಂದ ಕೂಡಿತ್ತು. ಆರಂಭಿಕ ದಿನಗಳಲ್ಲಿ ಅವರು ಮನೆ ಮನೆಗೆ ತೆರಳಿ ಪತ್ರಿಕೆಗಳನ್ನು ಮಾರಟ ಮಾಡುತ್ತಿದ್ದರು. ಅಬ್ದುಲ್‌ ಕಲಾಂ ಅವರ ಬದ್ಧತೆ ಮತ್ತು ಶಿಕ್ಷಣದ ಮೇಲಿನ ಪ್ರೀತಿ ಈ ಎಲ್ಲಾ ಕಷ್ಟಗಳನ್ನು ಎದುರಿಸಿ, ಮುಂದೇ ವಿಜ್ಞಾನಿಯಾಗಿ, ಭಾರತದ ಸಾಂವಿಧಾನಿಕ ಹುದ್ದೆ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವಂತೆ ಮಾಡಿತು. ಈ ಮೂಲಕ ಯುವ ಪೀಳಿಗೆಗೆ ಸ್ಪೋರ್ತಿ ಮತ್ತು ರೋಲ್‌ ಮಾಡೆಲ್‌ ಆಗಿ ಉಳಿದಿದ್ದಾರೆ.

ಅಬ್ದುಲ್‌ ಕಲಾಂ ಅವರು ಶ್ವಾರ್ಟ್ಜ್ ಮೆಟ್ರಿಕ್ಯುಲೇನ್‌ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಅವರು, ನಂತರ ತಿರುಚಿರಾಪಳ್ಳಿಯಲ್ಲಿ ಸೇಂಟ್‌ ಜೋಸೆಫ್ಸ್‌ ಕಾಲೇಜಿಗೆ ಸೇರಿಕೊಂಡರು. ಅಲ್ಲಿಂದ ನಂತರ 1954 ರಲ್ಲಿ ಮದ್ರಾಸ್‌ ವಿಶ್ವವಿದ್ಯಾನಿಲಯದಿಂದ ಬೌತಶಾಸ್ತ್ರ ಪದವಿಯನ್ನು ಪಡೆದುಕೊಂಡರು. ನಂತರ ಮದ್ರಾಸ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್‌ಗೆ ತೆರಳಿದರು.


ಅಬ್ದುಲ್‌ ಕಲಾಂ ಅವರ ಮಹತ್ವದ ಸಾಧನೆಗಳು:

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಾರತದ ಎರಡು ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಗಳಾದ ರಕ್ಷಾಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನೇತೃತ್ವ ವಹಿಸಿದ್ದರು.

ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವನ್ನು(ಎಸ್‌ಎಲ್‌ವಿ) ಅಭಿವೃದ್ಧಿ ಪಡಿಸುವ ಯೋಜನೆಗೆ ಡಾ. ಕಲಾಂ ಅವರು ಇಸ್ರೋದಲ್ಲಿ ಸ್ತಳೀಯ ಉಪಗ್ರಹ ಉಡಾವಣಾ ವಾಹನದ ಅಭಿವೃದ್ಧಿಗೆ ಯೋಜನಾ ನಿರ್ದೇಶಕರಾಗಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದರು.

ಜುಲೈ 1980 ರಲ್ಲಿ  ಕಲಾಂ ಅವರ ಮಾರ್ಗದರ್ಶನದಲ್ಲಿ ಭಾರತದ ಎಸ್‌ಎಲ್‌ವಿ-3 ರೋಹಿಣಿ ಉಪಗ್ರಹವನ್ನು ಭೂಮಿಯ ಸಮೀಪ ಕಕ್ಷೆಯಲ್ಲಿ ಯಶಸ್ವಿಯಾಗಿ ನಿಯೋಜಿಸಿ, ಭಾರತವನ್ನು ವಿಶೇಷ ಬಾಹ್ಯಾಕಾಶ ಕ್ಲಬ್‌ನ ಸದಸ್ಯರನ್ನಾಗಿ ಮಾಡಿದರು.

ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರು ಪ್ರೋಖ್ರಾನ್‌ನಲ್ಲಿ ಅನೇಕ ಪರಮಾಣು ಪರೀಕ್ಷೆಗಳ ನೇತೃತ್ವ ವಹಿಸಿದ್ದರು. ಅಂದಿನ ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರರಾಗಿ, ಪ್ರೋಖ್ರಾನ್-II ಪರಮಾಣು ಪರೀಕ್ಷೆಗಳ ಮುಖ್ಯಸ್ಥರಾಗಿ ಪ್ರಮುಖ ಪಾತ್ರ ವಹಿಸಿದ್ದರು.

ಅಬ್ದುಲ್‌ ಕಲಾಂ ಅವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. 

ಅಬ್ದುಲ್‌ ಕಲಾಂ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. "ವಿಂಗ್ಸ್‌ ಆಫ್‌ ಫೈರ್" ಎಂಬುದು ಇವರ ಆತ್ಮಕಥೆಯಾಗಿದೆ. ಇವರು ಇಂಡಿಯಾ ಮೈ ಡ್ರೀಮ್, ಇಂಡಿಯಾ 2020, ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇ‍ಗಳನ್ನು ಹಾಕಿಕೊಟ್ಟಿದ್ದಾರೆ. ಮೈ ಜರ್ನಿ, ಟಾರ್ಗೆಟ್‌ ತ್ರಿ ಬಿಲಿಯನ್‌ ಇವು ಅವರ ಪ್ರಸಿದ್ದ ಪುಸ್ತಕಗಳಾಗಿವೆ.


ಕಲಾಂ ರವರಿಗೆ ದೊರಕಿರುವ ಪ್ರಶಸ್ತಿಗಳು:

ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಒಲೆದು ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ದೇಶದ ಐಕ್ಯತೆಯ ಇಂದಿರಾ ಗಾಂಧಿ ಪ್ರಶಸ್ರಿ, ರಾಮಾನುಜನ್ ಪ್ರಶಸ್ತಿ, ವೀರ್ ಸಾವರ್ಕರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ. 1997 ರಲ್ಲಿ ಅಬ್ದುಲ್ ಕಲಾಂ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಯಿತು. ಇದಲ್ಲದೇ 1990ರಲ್ಲಿ ಪದ್ಮ ವಿಭೂಷಣ ಹಾಗೂ 1981 ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ.


ಸರಳತೆ ಮತ್ತು ಉನ್ನತ ಚಿಂತನೆಗೆ ಹೆಸರಾಗಿದ್ದ ಇವರು, ಉಪನ್ಯಾಸ ನೀಡುತ್ತಲೇ ಜುಲೈ 27, 2015 ರಲ್ಲಿ ಶಿಲ್ಲಾಂಗ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಕೊನೆಯುಸಿರೆಳೆದರು. ಇಂದಿಗೂ ಇವರನ್ನು ಅತ್ಯುತ್ತಮ ಮಾನವರಲ್ಲಿ ಒಬ್ಬರಾಗಿ ನೆನಪಿಸಿಕೊಳ್ಳಲಾಗುತ್ತದೆ ಮತ್ತು ಪ್ರಪಂಚದಾದ್ಯಂತ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದಾರೆ.

Sunday, 11 March 2018

ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಸಂವಿಧಾನದ ತಿದ್ದುಪಡಿಗಳು

ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಸಂವಿಧಾನದ ತಿದ್ದುಪಡಿಗಳು:
೧) ಮೂಲಭೂತ ಕರ್ತವ್ಯ ಸೇರ್ಪಡೆ, ಸಮಾಜವಾದಿ ಜಾತ್ಯಾತೀತ, ಸಮಗ್ರವಾದಿ ಪದಗಳನ್ನು ಪ್ರಸ್ತಾವನೆಗೆ ಸೇರ್ಪಡೆ: 42 ನೇ ತಿದ್ದುಪಡಿ 1976
೨) ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ಕೈಬಿಟ್ಟಿದ್ದು: 44 ನೇ ತಿದ್ದುಪಡಿ 1978
೩) ಮತದಾನ ವಯಸ್ಸನ್ನು 21 ರಿಂದ 18 ಕ್ಕೆ ಇಳಿಕೆ: 61 ನೇ ತಿದ್ದುಪಡಿ 1989
೪) ರಾ. ಪ. ಜಾ ಮತ್ತು ಪ. ಪಂ ಆಯೋಗ ಅವಕಾಶ : 65 ನೇ ತಿದ್ದುಪಡಿ 1990
೫) ಗ್ರಾಮಪಂಚಾಯಿತಿ: 73 ನೇ ತಿದ್ದುಪಡಿ, ನಗರ ಸಂಸ್ಥೆಗಳು: 74 ನೇ ತಿದ್ದುಪಡಿ 1992
೬) 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ : 86 ನೇ ತಿದ್ದುಪಡಿ 2002
೭) ಸರ್ವ ಶಿಕ್ಷಣ ಅಭಿಯಾನ : 93 ನೇ ತಿದ್ದುಪಡಿ 2005
೮) ಹೈಕ. ವಿಶೇಷ ಮೀಸಲಾತಿ: 98 ನೇ ತಿದ್ದುಪಡಿ 2013
ಇತ್ತೀಚೆಗಿನ ತಿದ್ದುಪಡಿಗಳು:
  • 99 ನೇ ತಿದ್ದುಪಡಿ  2015: NJAC-national Judicial Appointment
  • 100 ನೇ ತಿದ್ದುಪಡಿ 2015: ಭಾರತ - ಬಾಂಗ್ಲಾ ಗಡಿ ಪ್ರದೇಶಗಳ ಹಸ್ತಾಂತರ
  • 101 ನೇ ತಿದ್ದುಪಡಿ 2017: GST 

Monday, 3 April 2017

ಪ್ರಬಂಧ: ಕಪ್ಪುಹಣ (Essay on Black Money in kannada)

          ಪ್ರಬಂಧ: ಕಪ್ಪುಹಣ (ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಒಂದು ಸಣ್ಣ ಕಾಣಿಕೆ!)

      ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶವಾಗಿದ್ದು, ಅಪಾರ . ಸಂಪನ್ಮೂಲಗಳನ್ನು ಹೊಂದಿರುವ ಕೆಲವೇ ದೇಶಗಳಲ್ಲೊಂದಾಗಿದೆ. 120 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶ, ಸ್ವಾತಂತ್ರ ಬಂದು 70 ವರ್ಷಗಳೇ ಕಳೆದರೂ ಇನ್ನೂ ಅನೇಕ ಸಾಮಾಜಿಕ ಪಿಡುಗುಗಳು, ರಾಷ್ಟ್ರ ಅಭಿವೃದ್ದಿ ಮಾರಕ ಶಕ್ತಿಗಳಿಂದಾಗಿ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೇ ಆಗಿದೆ.
ಇಂತಹ ಅನೇಕ ಮಾರಕ ಶಕ್ತಿಗಳಲ್ಲಿ ಕಪ್ಪು ಹಣವೂ ಒಂದು. ಕಪ್ಪುಹಣವು, ದೇಶದ ಅಭಿವೃದ್ದಿಗೆ ಅಡ್ಡಗಾಲಕುತ್ತಿರುವ ಕಪ್ಪು ಚುಕ್ಕೆಯೇ ಆಗಿದೆ. ಸರ್ವೋಚ್ಚ ನ್ಯಾಯಾಲಯವು ಕಪ್ಪು ಹಣವನ್ನು ರಾಷ್ಟ್ರೀಯ ಸಂಪತ್ತಿನ ಲೂಟಿ ಎಂದೇ ಖಾರವಾಗಿ ಹೇಳಿದೆ.

           ಕಪ್ಪುಹಣವೆನ್ನುವುದು ಅಕ್ರಮವಾಗಿ ಸಂಪಾದಿಸಿದ ಸಂಪತ್ತು, ಅನೈತಿಕವಾಗಿ ಗಳಿಸಿದ ಸ್ವತ್ತು, ತೆರಿಗೆ ವಂಚಿಸಿ ಸಂಗ್ರಹಿಸಿಟ್ಟ ಕಾಳಧನವಾಗಿದೆ. ಇದು ಬೇನಾಮಿ ಖಾತೆಗಳಲ್ಲಿ, ಗುಪ್ತ ಸ್ತಳಗಳಲ್ಲಿ ಇಟ್ಟ ಹಣ ಮಾತ್ರವಲ್ಲದೆ, ಷೇರುಗಳು, ವಿವಿಧ ಭದ್ರತೆಗಳು, ರಿಯಲ್ ಎಸ್ಟೇಟ್ -ಮನೆ ಅಂಗಡಿಗಳು, ನಿವೇಶನ-ಕಾರುಗಳು, ಒಡವೆ ಆಭರಣಗಳು ಮತ್ತು ಇತರೆ ದಾಸ್ತಾವೇಜುಗಳ ಸ್ವರೂಪವನ್ನೂ ಸಹ ಹೊಂದಿದೆ. ಇತ್ತೀಚೆಗಿನ ಅಂದಾಜಿನಂತೆ ಭಾರತದಲ್ಲಿ ಸುಮಾರು ೨೦೦ ಮಿಲಿಯನ್ ಕೋಟಿ ರೂ ಕಪ್ಪು ಹಣವಿದೆಯೆಂದೂ, ಹಾಗೂ ಪ್ರತೀ ವರ್ಷ ೨೦೦ ಕೋಟಿ ಕಪ್ಪು ಹಣ ಸೃಷ್ಟಿಯಾಗುತ್ತಿದೆ ಎಂದು ಅಂದಾಜಿಸಲಾಗಿತ್ತು.

        ಆದಾಯ ತೆರಿಗೆ ಮತ್ತು ಮಾರಾಟ ತೆರಿಗೆಗಳನ್ನು ವಂಚಿಸಿ ಸಂಗ್ರಹಿಸಲ್ಪಟ್ಟ ಈ ಕಪ್ಪು ಹಣ ಭಾರತದ ಆರ್ಥಿಕತೆಯ ಮೇಲೆ ಅನೇಕ ಋಣ ಪರಿಣಾಮವನ್ನು ಬೀರುತ್ತಿದೆ. ಕಪ್ಪು ಹಣವನ್ನುದೇಶದ್ರೋಹಿ ಕೆಲಸಗಳಿಗೆ, ದುಷ್ಟ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಇದರಿಂದಾಗಿ  ಭ್ರಷ್ಟಾಚಾರ ಹೆಚ್ಚಿ ಸಾಮಾಜಿಕ ಮತ್ತು ರಾಜಕೀಯ ಸ್ವಾಸ್ಥ್ಯ ಹಾಳಾಗುತ್ತಿದೆ.
ಈ ಕಪ್ಪು ಹಣವನ್ನು ನಿಯಂತ್ರಿಸಲು ಸರ್ಕಾರ ಅನೇಕ ಕಾರ್ಯಗಳನ್ನು ಕೈಗೊಂಡರೂ ಕಪ್ಪು ಹಣವನ್ನು ತಡೆಗಟ್ಟುವುದು ಕಷ್ಟಕರವಾಗಿದೆ. ಇತ್ತೀಚೆಗೆ ಸರಕಾರವು ಕಪ್ಪು ಹಣವನ್ನು ಮಟ್ಟ ಹಾಕಲು ಸರಳೀಕೃತ ಆದಾಯ ತೆರಿಗೆ ಪಾವತಿ ವ್ಯವಸ್ಥೆ, ೫೦೦ ಮತ್ತು ೧೦೦೦ ರೂ ಗಳ ನೋಟು ಅನಗಧೀಕರಣ, ಡಿಜಿಟಲ್ ಇಂಡಿಯಾ ಎಂಬ ಅನೇಕ ಯೋಜನೆಗಳ ಜೊತೆಗೆ, ವಿವಿಧ ದೇಶಗಳೊಂದಿಗೆ ಕಪ್ಪುಹಣ ಮಾಹಿತಿ ವಿನಿಮಯದಂತಹ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದೆ.

         ಸರ್ಕಾರದ ಈ ಕಾರ್ಯಕ್ರಮಗಳ ಜೊತೆ ಜೊತೆಗೆ ಭಾರತೀಯರಾದ ನಾವುಗಳು ಸ್ವ ಪ್ರೇರಣೆಯಿಂದ ನಮ್ಮ ಆಸ್ತಿ ಸಂಪತ್ತುಗಳಿಗೆ ಆದಾಯ ತೆರಿಗೆ ಪಾವತಿಸುವುದರ ಮೂಲಕ ಕಪ್ಪು ಹಣಕ್ಕೆ ಕಡಿವಾಣ ಹಾಕಿ, ನಮ್ಮ ದೇಶದ ಆರ್ಥಿಕ ಅಭಿವೃದ್ದಿಗೆ ಶ್ರಮಿಸೋಣ. ಸ್ವಾಸ್ಥ್ಯ ಸಮಾಜ ನಿರ್ಮಿಸುವುದರ ಮೂಲಕ ನಮ್ಮ ದೇಶವನ್ನು ಭ್ರಷ್ಟಾಚಾರ ಮತ್ತು ಕಪ್ಪುಹಣ ಮುಕ್ತ ದೇಶಾವ್ನಾಗಿಸೋಣ. ಎಲ್ಲರೂ ಮನಸ್ಸು ಮಾಡಿ ದೇಶಪ್ರೇಮದಿಂದ ಶ್ರಮಿಸಿದ್ದೆ ಆದರೆ ಅಸಾಧ್ಯವಾದುದು ಯಾವುದು ಇಲ್ಲ ಎಂಬುದು ನನ್ನ ಅಭಿಪ್ರಾಯ.

Sunday, 26 March 2017

ಷಡ್ದರ್ಶನಗಳು.

ಷಡ್ದರ್ಶನಗಳು.

ಸಂಖ್ಯಾಶಾಸ್ತ್ರ: ಕಪಿಲ
ನ್ಯಾಯಶಾಸ್ತ್ರ: ಗೌತಮ
ಯೋಗಶಾಸ್ತ್ರ: ಪತಂಜಲಿ
ವೈಶೇಷಿಕ ಶಾಸ್ತ್ರ: ಕನದ
ಪೂರ್ವಮೀಮಾಂಸ: ಜೈಮಿನಿ
ಉತ್ತರಮೀಮಾಂಸ: ಬಾದರಾಯಣ

Saturday, 25 March 2017

ಭಾರತದ ಪ್ರಮುಖ ಕ್ಯಾಲೆಂಡರ್ ಗಳು.

ಭಾರತದ ಪ್ರಮುಖ ಕ್ಯಾಲೆಂಡರ್ ಗಳು.

ವಿಕ್ರಮ ಸಂವತ್ಸರ: ಕ್ರಿ. ಪೂ 58-57
ಶಾಲಿವಾಹನ ಶಕ: ಕ್ರಿ.ಶ  78
ಗುಪ್ತ ಶಕ: ಕ್ರಿ ಶ 319
ಹರ್ಷ ಶಕ: ಕ್ರಿ. ಶ  606
ಹಿಜರತ್ ಶಕ: ಕ್ರಿ. ಶ 622

Important Indian Calender's:

Vikrama samvatsara: BCE 58-57
Shalivahana shaka: AD or CE 78
Gupta  shaka: CE 319
Harsha shaka: CE 606
Hijarat shaka: CE 622


Note: Style guides for academic texts on religion generally prefer BCE/CE to BC/AD. The terms "Common Era", "Anno Domini", "Before the Common Era", and "Before Christ" in contemporary English can be applied to dates that rely on either the Julian calendar or the Gregorian calendar.

GK 1

ಜ್ಞಾನಪೀಠ ಪ್ರಶಸ್ತಿ.

1961: ಸ್ಥಾಪನೆ..

ಪ್ರಥಮವಾಗಿ : 1965: ಜಿ. ಶಂಕರ ಕುರುಪ್-ಮಲಯಾಳಿ
1966: ಉಮಾ ಶಂಕರ್ ಜೋಶಿ (ಗುಜರಾತಿ)
1967: ಕುವೆಂಪುರವರು (ಕನ್ನಡ)ಮತ್ತು ಉಮಾಶಂಕರ ರವರು (ಗುಜರಾತಿ)

- ಕನ್ನಡಕ್ಕೆ 8 ಪ್ರಶಸ್ತಿಗಳು ಸಂದಿವೆ.
- ಆಶಾಪೂರ್ಣ ದೇವಿ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ. 1976 (ಬೆಂಗಾಲಿ)
-ಇತ್ತೀಚೆಗೆ 2016 ರಲ್ಲಿ ಶಂಕ ಘೋಷ್ (ಬಂಗಾಳಿ) ರವರಿಗೆ ಸಂದಿದೆ.

ಕನ್ನಡದಲ್ಲಿ ಪಡೆದವರ ಮಾಹಿತಿ ಕೆಳಗಿನಂತಿದೆ:

  1. Kuvempu for Shri Ramayana Darshanam


  2. Dha. Raa. Bendhre for Naaku thanthi


  3. Shivaram Karanth for Mookajjiya Kanasugalu


  4. Masti Venkatesh Iyengar for Chikkaveera Raajendhra


  5. Vi. Kru. Gokak for Bhaaratha Sindhhu Rashmi


  6. Girish Karnad for his works in Kannada


  7. U. R. Ananthamurthy for his works in Kannada


  8. Chandrashekar Kambar for his contribution to the literature field.




ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು

ಸರ್ವರಿಗೂ ಸ್ವಾಮಿ ವಿವೇಕಾನಂದರ ದಿನಾಚರಣೆಯ /ರಾಷ್ಟ್ರೀಯ ಯುವ ದಿನದ ಶುಭಾಶಯಗಳು 💐 ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು ನಿಮಗಾಗಿ. ಇಂದಿನ ಜಗತ...