Monday 30 April 2018

ತಮ್ಮನಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಬರೆದ ಸಾಲುಗಳು

ಜನ್ಮ ದಿನದ ಶುಭಾಶಯಗಳು ಪ್ರೀತಿಯ ತಮ್ಮನಿಗೆ

‘ತಮ್ಮ’ ಎಂಬೆರಡಕ್ಷರದ ಸಹೋದರ ಪ್ರಾಣ

ಪ್ರಸನ್ನ ವದನ ತಿಲಕ ನಾಮ ಹೊಂಗಿರಣ

ವೀರನಂ ಕಥೆ ಕೇಳಿ ಅದೆ ಪೆಸರ ಮಾಡಿಕೊಂಡೆ ನೀ ನಾಮಕರಣ!!

ಗುರುಕೋಟಿ ಪ್ರಿಯಪಾತ್ರ ಏ ಕಿರಣ

ಗುರುವಂ ಚಕಿತಗೊಳಿಸಿದ ಮಾತಿನ ಬಾಣ

ಇಂದಿಗೂ ನೆನೆವರಯ್ಯ ಆ ಪದ ಬಾಣ ಓ ಜಾಣ!!

ವೀರ ಹನುಮನ ಭಕ್ತ- ಅವನಂತೆ

ನಿನ್ನಲೂ ಇಹುದು ಅದ್ಭುತ ಶಕ್ತಿ ಕಾಣ|

ಬಯಸಿಹಳು ನಮ್ಮ ಭಾರತ ಮಾತೆ

ಆ ಶಕ್ತಿ ಚೈತನ್ಯದಾ ನಿನ್ನ ಸೇವಾ ಗುಣ|

ಇನ್ನೇಕೆ ತಡ! ಸಾಗಲಿ ಉದಯೋನ್ಮುಕ ಆ ನಿನ್ನ ಸ್ಪೂರ್ತಿ ಪಯಣ….

ಜಾಣ ಬಾಣ ಕಿರಣ ಏ ತಿಲಕ ಹೊಂಗಿರಣ..

ಸಂತೋಷ ಸಮೃದ್ದಿ ಚೈತನ್ಯ ನೆಮ್ಮದಿ ಜೊತೆಗೂಡಿ

ಶುಭವಾಗಲಿ ಯಶಸ್ಸು ನಿನ್ನದಾಗಲೆಂದು ಹರಸುವೆವು ಬೇಡುವೆವು ಓ ಮಿತ್ರ ಪ್ರಾಣ.

ಜನ್ಮ ದಿನದ ಶುಭಾಶಯಗಳು ಪ್ರೀತಿಯ ತಮ್ಮನಿಗೆ....


  :-ಕೃತಿ (ಕೃಷ್ಣತಿಲಕ್)

Tuesday 24 April 2018

ವಾಲ್ಮೀಕಿಯ ಭಾಗ್ಯ: ಕುವೆಂಪು

ನನ್ನ ಗುರುಗಳಾದ ಜ್ಞಾನೇಶ್ವರರ ಜ್ಞಾನಲೋಕ ಬ್ಲಾಗ್ ನಲ್ಲಿ ವಿಹರಿಸುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಪುಸ್ತಕ ವಾಲ್ಮೀಕಿಯ ಭಾಗ್ಯ.
ಕೆ ವಿ ಪುಟ್ಟಪ್ಪ (ಕುವೆಂಪುವಿರಚಿತ ಒಂದು ಪುಟ್ಟ ಸಮೃದ್ಧ ನಾಟಕ.
 ನಾಟಕದಲ್ಲಿ ಪಾತ್ರಗಳು ಮೂರೇ  (ಪಾತ್ರಗಳುಸೀತಾಲಕ್ಷ್ಮಣ (ಸೌಮಿತ್ರಿ), ವಾಲ್ಮೀಕಿ.) ಆದರೂ  ಪಾತ್ರಗಳಿಂದ ಹೊರಹೊಮ್ಮುವ ಭಾವ ಸಂದೇಶ ಮಾತ್ರ ಅಪರಿಮಿತ
ಶ್ರೀ ರಾಮಚಂದ್ರನ ಪಿಸುಣ್ಗೆ ಕಿವಿಗೊಟ್ಟ ಕಟ್ಟಾಣತಿಯಂತೆ ಸೌಮಿತ್ರಿಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ಅರಣ್ಯದಲ್ಲಿ ಬಿಟ್ಟು ಹೋಗುವ ಹೃದಯ ವಿದ್ರಾವಕವಾದ ಸನ್ನಿವೇಶವನ್ನು ಕುವೆಂಪು ಅವರು ಅಮೋಘವಾಗಿ ಚಿತ್ರಿಸಿದ್ದಾರೆ. 
ಶ್ರೀ ರಾಮನು ಸೀತೆಯನ್ನು ಕಾಡಿಗೆ ಕಳುಹಿಸಿದ್ದಕ್ಕೆ ಲೋಕಾಪವಾದದ ನಿವಾರಣೆ, ರಘುಕುಲದ ಕೀರ್ತಿ ಸಂರಕ್ಷಣೆ , ಶ್ರೀ ರಾಮ ಸ್ವಕೀರ್ತಿಪಾಲನೆ ಮೊದಲಾದ ಕಾರಣಗಳಿದ್ದರೂ, ನಾಟಕದಲ್ಲಿ ವಾಲ್ಮೀಕಿಯ ಭಾಗ್ಯವಾಗಿ ಮೂಡಿಬಂದಿದೆ.
ಗಂಗಾತೀರದ ಘೋರಅರಣ್ಯದಲ್ಲಿ ಸೀತೆಯೊಬ್ಬಳನ್ನೇ ಬಿಟ್ಟುಹೋಗುವ ನಡುವೆ ನಡೆಯುವ ದೃಶ್ಯ 
ಹೃದಯಂಗಮವಾಗಿದೆನಾಟಕದ ಕೊನೆಯಲ್ಲಿ ವಾಲ್ಮೀಕಿಯ ನೀನೆನ್ನ ಮಹಾಕಾವ್ಯದ ಸವಿಗಣ್ಣಲ್ತೆಕಥನಾಯಕಿಯಲ್ತೆ?
ವಾಲ್ಮೀಕಿಯ ಭಾಗ್ಯಮಲ್ತೆ ? ಮಾತುಗಳೊಂದಿಗೆ ನಾಟಕ ತೆರೆಗೊಳ್ಳುತ್ತದೆ.

ಪುಸ್ತಕವನ್ನು ಆರ್ಕೈವ್ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಲು  ಕೊಂಡಿ ಬಳಸಿ: http://bit.ly/2hdEIzK


Sunday 15 April 2018

ಸರ್ವಜ್ಞನ ವಚನಗಳು 2

ಸರ್ವಜ್ಞನ ವಚನಗಳು ಮುಂದುವರೆದಿದೆ...

22. ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು 
ಅಧಮ ತಾನಾಡಿ ಕೊಡದವನು ಸರ್ವಜ್ಞ  II

23. ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ 
ದುರ್ಜನರ ಸಂಗ ಬಚ್ಚಲ
ಕೊಚ್ಚೆಯಂತಿಹದು ಸರ್ವಜ್ಞ II

24. ಸಾಲವನು ಕೊಂಬಾಗ  ಹಾಲೋಗರುಂಡಂತೆ
ಸಾಲಿಗರು ಕೊಂಡು ಎಳೆವಾಗ
ಕಿಬ್ಬದಿಯ  ಕೀಲು ಮುರಿದಂತೆ ಸರ್ವಜ್ಞ II

25. ಎಲ್ಲ  ಬಲ್ಲವರಿಲ್ಲ  ಬಲ್ಲವರು ಬಹಳಿಲ್ಲ
ಬಲವಿಲ್ಲ  ಬಲ್ಲವರಿದ್ದು 
ಸಾಹಿತ್ಯ ಎಲ್ಲರಿಗಲ್ಲ  ಸರ್ವಜ್ಞ II

26. ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ?
ಜಾತಿ - ವಿಜಾತಿ ಎನಬೇಡ , ದೇವನೊಲಿ
ದಾತದೇ  ಜಾತ ಸರ್ವಜ್ಞ||

27. ನಡೆವುದೊಂದೇ ಭೂಮಿ , ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು , ಕುಲಗೋತ್ರ
ನಡುವೆಯೆತ್ತಣದು ಸರ್ವಜ್ಞ||


28. ಆರು ಬೆಟ್ಟವನೊಬ್ಬ ಹಾರಬಹುದೆಂದರೆ
ಹಾರಬಹುದೆಂದು ಎನಬೇಕು , ಮೂರ್ಕನೊಡ
ಹೋರಾಟ ಸಲ್ಲ ಸರ್ವಜ್ಞ||



ಪುರಾತನದಿಂದ ವರ್ತಮಾನದವರೆಗೂ ಗಮನ ಸೆಳೆದಿರುವ ಚಾತಕ ಪಕ್ಷಿ - Jacobin Cuckoo!!

ಏನೆಂದು ಬಣ್ಣಿಸಲಿ ನಿನ್ನ ಮಹಿಮೆಯ ಓ ಚಾತಕ ಪಕ್ಷಿಯೇ!? ಪುರಾಣದಲಿ ಜಾನಪದದಲಿ ಕಾಳಿದಾಸ ತುಳಸೀದಾಸ ಕುವೆಂಪುರಾದಿಯಾಗಿ ಕವಿವರ್ಯರ ವಿರಹ ಕಾವ್ಯ ಸಾಲುಗಳಲಿ ಮೆರೆಯುತಿರುವ ಉಪ...