Sunday, 15 April 2018

ಸರ್ವಜ್ಞನ ವಚನಗಳು 2

ಸರ್ವಜ್ಞನ ವಚನಗಳು ಮುಂದುವರೆದಿದೆ...

22. ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು 
ಅಧಮ ತಾನಾಡಿ ಕೊಡದವನು ಸರ್ವಜ್ಞ  II

23. ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ 
ದುರ್ಜನರ ಸಂಗ ಬಚ್ಚಲ
ಕೊಚ್ಚೆಯಂತಿಹದು ಸರ್ವಜ್ಞ II

24. ಸಾಲವನು ಕೊಂಬಾಗ  ಹಾಲೋಗರುಂಡಂತೆ
ಸಾಲಿಗರು ಕೊಂಡು ಎಳೆವಾಗ
ಕಿಬ್ಬದಿಯ  ಕೀಲು ಮುರಿದಂತೆ ಸರ್ವಜ್ಞ II

25. ಎಲ್ಲ  ಬಲ್ಲವರಿಲ್ಲ  ಬಲ್ಲವರು ಬಹಳಿಲ್ಲ
ಬಲವಿಲ್ಲ  ಬಲ್ಲವರಿದ್ದು 
ಸಾಹಿತ್ಯ ಎಲ್ಲರಿಗಲ್ಲ  ಸರ್ವಜ್ಞ II

26. ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ?
ಜಾತಿ - ವಿಜಾತಿ ಎನಬೇಡ , ದೇವನೊಲಿ
ದಾತದೇ  ಜಾತ ಸರ್ವಜ್ಞ||

27. ನಡೆವುದೊಂದೇ ಭೂಮಿ , ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು , ಕುಲಗೋತ್ರ
ನಡುವೆಯೆತ್ತಣದು ಸರ್ವಜ್ಞ||


28. ಆರು ಬೆಟ್ಟವನೊಬ್ಬ ಹಾರಬಹುದೆಂದರೆ
ಹಾರಬಹುದೆಂದು ಎನಬೇಕು , ಮೂರ್ಕನೊಡ
ಹೋರಾಟ ಸಲ್ಲ ಸರ್ವಜ್ಞ||



No comments:

Post a Comment

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...