Thursday, 24 May 2018
ಹವ್ಯಾಸಗಳು (Hobbies)
ಹವ್ಯಾಸಗಳು
ಒಂಥರಾ ಬಾಳ ಸಂಗಾತಿಗಳೇ ಸರಿ!
ಒಂದು
ಮಾತಿದೆ “A Hobby a day keeps the doldrums away” ಪ್ರತಿದಿನದ ಜಂಜಾಟಗಳ ನಡುವೆ
ಒಂದು ಹವ್ಯಾಸವಿದ್ದಿದ್ದೇ ಆದರೆ
ಎಷ್ಟೋ ಸಂಕಟಗಳು ಮಾಯವಾಗಿ ಮನಸ್ಸಿನಲ್ಲಿ
ಆಹ್ಲಾದ ಮೂಡುತ್ತದೆ.
ಬಿಡುವಿನ ವೇಳೆಯಲ್ಲಿ ನಮ್ಮ ಮನಸ್ಸಿಗೆ
ಹತ್ತಿರವಾದ, ಆಸಕ್ತಿಯಿಂದ ಮಾಡುವ, ಮನಸ್ಸನ್ನು ಸಂತೋಷಗೊಳಿಸುವ ಚಟುವಟಿಕೆಗಳೇ ಹವ್ಯಾಸಗಳು.
ನಮ್ಮ ಇಂದಿನ ಜೀವನ ಶೈಲಿಯಲ್ಲಿ ಹವ್ಯಾಸಗಳಿಗೆ
ಸ್ವಲ್ಪ ಸಮಯ ಕೊಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪ್ರಭಾವ ಬೀರಿ ಚೈತನ್ಯ
ತಂದು ಕೊಡುತ್ತವೆ. ಹವ್ಯಾಸಗಳು ಆತ್ಮ
ವಿಶ್ವಾಸ ಹೆಚ್ಚಿಸುವುದರ ಜೊತೆಗೆ ನಮ್ಮ ನಿತ್ಯ ಕಾರ್ಯಗಳಲ್ಲಿ ಉತ್ಸಾಹ ತುಂಬುತ್ತವೆ. ಉತ್ತಮ ಹವ್ಯಾಸಗಳು
ನಮ್ಮ ಜೀವನವನ್ನು ಉತ್ತಮಗೊಳಿಸಿ ನಮ್ಮನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸುತ್ತವೆ.
ಇನ್ನೊಂದು
ಮಾತಿದೆ “Happy is the man
who is living by his hobby” ತನ್ನ
ಇಷ್ಟವಾದ ಹವ್ಯಾಸಗಳೊಂದಿಗೇ ಜೀವನ
ಸಾಗಿಸುವಂತಿದ್ದರೆ ಅವರಂತ ಅದೃಷ್ಟವಂತರು ಮತ್ತೊಬ್ಬರಿಲ್ಲ
! ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡು
ಅವುಗಳಿಗೆ ಸ್ವಲ್ಪ ಸಮಯವನ್ನು ಮೀಸಲಿಡುತ್ತ
ಸಂತೋಷ ಜೀವನ ಸಾಗಿಸೋಣ.
Subscribe to:
Posts (Atom)
ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು
ಸರ್ವರಿಗೂ ಸ್ವಾಮಿ ವಿವೇಕಾನಂದರ ದಿನಾಚರಣೆಯ /ರಾಷ್ಟ್ರೀಯ ಯುವ ದಿನದ ಶುಭಾಶಯಗಳು 💐 ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು ನಿಮಗಾಗಿ. ಇಂದಿನ ಜಗತ...
-
ಸರ್ವಜ್ಞನ ವಚನಗಳು ಮುಂದುವರೆದಿದೆ ... 22. ಆಡದೆಲೆ ಕೊಡುವವನು ರೂಢಿಯೊಳಗುತ್ತಮನು ಆಡಿ ಕೊಡುವವನು ಮಧ್ಯಮನು ಅಧಮ ತಾನಾಡಿ ಕೊಡದವನು ಸರ್ವ...
-
ಹವ್ಯಾಸಗಳು ಒಂಥರಾ ಬಾಳ ಸಂಗಾತಿಗಳೇ ಸರಿ ! ಒಂದು ಮಾತಿದೆ “A Hobby a day keeps the doldrums away” ಪ್ರತಿದಿನದ ಜಂಜಾಟಗಳ ನಡುವೆ ಒಂದು ...
-
ಪ್ರಬಂಧ: ಕಪ್ಪುಹಣ (ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಒಂದು ಸಣ್ಣ ಕಾಣಿಕೆ!) ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶವಾಗಿದ್ದು, ಅಪಾರ ....