Friday, 16 November 2018

ಶರಣು ಆಂಜನೇಯ (Anjaneya song in kannada)

ಹೇ ಹನುಮಂತ ಹೇ ಶ್ರೀ ರಾಮಧೂತ
ಅಂಜನಿಪುತ್ರ ಪವನಸುತ
ಹೇ ಸಂಜೀವಿನಿ ಚಿರಂಜೀವಿ ಮಾರುತಿ
ಮಹಾವೀರ ಶಕ್ತಿ, ವಜ್ರಾಯುಧನೆ
ಶರಣೋ ನಿನಗೆ ಹೇ ವಾಯುಸುತನೆ
ಶರಣೋ ತೇಜವೇ ವೀರ ಹನುಮನೆ||

ವಿಧ್ಯಾ ಸಾಗರ, ಗುಣ ಪ್ರಭುಕರ
ಕಪಿಗಳ ನೇತಾರ ಅಸುರ ಸಂಹಾರೀ
ವಜ್ರಾಯುಧಿಯೇ ಶೋಭಿತ ಕುಂಡಲಿ
ಶಿವ ಅವತಾರಿ ಮಹಾಜಗ ವಂದಿಪನೆ
ಶರಣೋ ನಿನಗೆ ಹೇ ರಾಮ ಭಕ್ತನೆ
ಶರಣೋ ಸ್ಪೂರ್ತಿಯೇ ದೀರ ಹನುಮನೆ||

ಭಕ್ತರ ಕಷ್ಟ ಕೋಟಲೆಗಳ ಪರಿಹರಿಸೊ
ಸದ್ಭುದ್ಧಿ ಸಮೃದ್ಧಿ ದಯಪಾಲಿಸೋ
ದಯೆ ತೋರೋ ಹನುಮ ಕೃಪೆ ತೋರೋ
ನಿನ್ನನೇ ಭಜಿಸೊ ಮನ ನೀಡೋ ಪ್ರಭು
ಶರಣೋ ನಿನಗೆ ಹೇ ಮಹಾಪ್ರತಾಪನೆ
ಶರಣೋ ಕೀರ್ತಿಯೇ ಹೇ ಶೂರ ಹನುಮನೆ||

ಕೃಪೆ ಮಾಡೋ ಪ್ರಭು ದಯೆ ತೋರೋ
ಉದ್ಧರಿಸೋ ಪ್ರಭು ದಾರಿ ತೋರೋ
ಸಕಲವನರ್ಪಿಸಿದೆ ನಿನಗೇ ಹನುಮ
ಕೈ ಹಿಡಿದು ಮುನ್ನಡೆಸಿ ಗುರಿ ಸೇರಿಸೋ
ಶರಣೋ ಮಹಾಶಕ್ತಿ ಹೇ ವೀರಾಂಜನೇಯ
ಶರಣೋ ಭಜರಂಗಿ ಹೇ ಜಗವಂದಿತ

ರಚನೆ: ಕೃಷ್ಣಮೂರ್ತಿ ಕೆ ಎಸ್, ಕೆಂಪಸಾಗರ

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...