ಏ ಪುಸ್ತಕವೇ..
ಮಗುವಿಗೆ
ಅಕ್ಷರಭಾಷೆ ಕಲಿಸಿ
ಮಕ್ಕಳಿಗೆ
ವಿಧ್ಯಾಭ್ಯಾಸ ಕಲಿಸಿ
ಯುವಜನತೆಯ
ಬಾಳಲ್ಲಿ ಜ್ಞಾನ ಧಾರೆ ಹರಿಸಿ
ವಯಸ್ಕರಿಗೆ
ನೆಮ್ಮದಿ ಶಾಂತಿ ತರಿಸಿ
ವೃದ್ಧ
ಜೀವಿಗಳಿಗೆ ಮೋಕ್ಷ ದಾರಿ ತೋರಿಸಿ
ಸಕಲರ
ಬಾಳ ಬೆಳಗುವ ನಿನಗೆ ಸಾಟಿ ಯಾರಿಹರೋ!?..
ಮಸ್ತಕದ
ಉದ್ಧಾರಕ
ಅಂಧಕಾರ
ನಿವಾರಕ
ನೆಮ್ಮದಿಯ
ಪ್ರತೀಕ
ಜಗಶ್ಯಾಂತಿ
ಸೂಚಕ
ಜ್ಞಾನ
ಸಾಗರ ಶಕ್ತಿ 'ಪುಸ್ತಕವೇ' ಶರಣು ನಿನಗೆ...
*ಮನುಜ ಮಣ್ಣು ಮಾಯೆ ಹೊನ್ನು ನಂಬಿ ಕೆಟ್ಟವರಿರಬಹುದು..
ಪುಸ್ತಕವ
ನಂಬಿ ಕೆಟ್ಟವರುಂಟೆ ಜಗದೊಳು!??*
ವಿಶ್ವ
ಪುಸ್ತಕ ದಿನದ ಶುಭಾಶಯಗಳು.(ಏಪ್ರಿಲ್-೨೩)