ನನ್ನ ಗುರುಗಳಾದ ಜ್ಞಾನೇಶ್ವರರ ಜ್ಞಾನಲೋಕ ಬ್ಲಾಗ್ ನಲ್ಲಿ ವಿಹರಿಸುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಪುಸ್ತಕ ವಾಲ್ಮೀಕಿಯ ಭಾಗ್ಯ.
ಕೆ ವಿ ಪುಟ್ಟಪ್ಪ (ಕುವೆಂಪು) ವಿರಚಿತ ಒಂದು ಪುಟ್ಟ ಸಮೃದ್ಧ ನಾಟಕ.
ಈ ನಾಟಕದಲ್ಲಿ ಪಾತ್ರಗಳು ಮೂರೇ (ಪಾತ್ರಗಳು: ಸೀತಾ, ಲಕ್ಷ್ಮಣ (ಸೌಮಿತ್ರಿ), ವಾಲ್ಮೀಕಿ.) ಆದರೂ ಆ ಪಾತ್ರಗಳಿಂದ ಹೊರಹೊಮ್ಮುವ ಭಾವ ಸಂದೇಶ ಮಾತ್ರ ಅಪರಿಮಿತ.
ಶ್ರೀ ರಾಮಚಂದ್ರನ ಪಿಸುಣ್ಗೆ ಕಿವಿಗೊಟ್ಟ ಕಟ್ಟಾಣತಿಯಂತೆ ಸೌಮಿತ್ರಿ, ಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ಅರಣ್ಯದಲ್ಲಿ ಬಿಟ್ಟು ಹೋಗುವ ಹೃದಯ
ವಿದ್ರಾವಕವಾದ ಸನ್ನಿವೇಶವನ್ನು ಕುವೆಂಪು ಅವರು ಅಮೋಘವಾಗಿ ಚಿತ್ರಿಸಿದ್ದಾರೆ.
ಶ್ರೀ ರಾಮನು ಸೀತೆಯನ್ನು ಕಾಡಿಗೆ ಕಳುಹಿಸಿದ್ದಕ್ಕೆ ಲೋಕಾಪವಾದದ ನಿವಾರಣೆ, ರಘುಕುಲದ ಕೀರ್ತಿ ಸಂರಕ್ಷಣೆ , ಶ್ರೀ ರಾಮ ಸ್ವಕೀರ್ತಿಪಾಲನೆ ಮೊದಲಾದ ಕಾರಣಗಳಿದ್ದರೂ, ಈ ನಾಟಕದಲ್ಲಿ ವಾಲ್ಮೀಕಿಯ ಭಾಗ್ಯವಾಗಿ ಮೂಡಿಬಂದಿದೆ.
ಗಂಗಾತೀರದ ಘೋರಅರಣ್ಯದಲ್ಲಿ ಸೀತೆಯೊಬ್ಬಳನ್ನೇ ಬಿಟ್ಟುಹೋಗುವ ನಡುವೆ ನಡೆಯುವ ದೃಶ್ಯ
ಹೃದಯಂಗಮವಾಗಿದೆ. ನಾಟಕದ ಕೊನೆಯಲ್ಲಿ ವಾಲ್ಮೀಕಿಯ ನೀನೆನ್ನ ಮಹಾಕಾವ್ಯದ ಸವಿಗಣ್ಣಲ್ತೆ? ಕಥನಾಯಕಿಯಲ್ತೆ?
ವಾಲ್ಮೀಕಿಯ ಭಾಗ್ಯಮಲ್ತೆ ? ಮಾತುಗಳೊಂದಿಗೆ ನಾಟಕ ತೆರೆಗೊಳ್ಳುತ್ತದೆ.
No comments:
Post a Comment