ಫುಡ್ ಮೇಳ !
ನಮ್ಮ ಆಫೀಸ್ ನಲ್ಲಿಂದು ಫುಡ್ ಮೇಳ
ವಿವಿಧ ರಾಜ್ಯಗಳ, ಹಲವು ಟೀಮ್ ಗಳ
ರುಚಿ ರುಚಿ ಸವಿ ತಿಂಡಿಗಳ ಗಾಳ!
ಬಣ್ಣ ಬಣ್ಣದ ಸೀರೆಯುಟ್ಟು
ಅಂದದ ಆಭರಣವ ತೊಟ್ಟು
ಚೆಂದದ ಮೊಗದಿ, ಮುಗುಳ್ನಗೆ ಸೊಗದಿ
ಕೌಂಟರ್ ಗಳಿಗೆ ಕೈ ಬೀಸಿ ಕರೆವರು
ವಿವಿಧ ಸಂಸ್ಕೃತಿಯ
ವಿವಿಧತೆಯಲಿ ಏಕತೆಯ
ಸಾರಲು ನಿಂತ ಸುಂದರಿಯರು!
ಅದೇನದು ಸೊಬಗು
ಅದೇನದು ಬೆರಗು!
ತಣಿದವು ನೇತ್ರಗಳು, ಕುಣಿದವು ಮನಗಳು
ಪ್ರತಿದಿನವೂ ಹೀಗೇ ಇರಬಾರದೆ ಎಂದು ಹರಸಿದವು!!!
ರಚನೆ:-ಕೃಷ್ಣ (ಕೃತಿ)
No comments:
Post a Comment