Monday, 30 April 2018

ತಮ್ಮನಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಬರೆದ ಸಾಲುಗಳು

ಜನ್ಮ ದಿನದ ಶುಭಾಶಯಗಳು ಪ್ರೀತಿಯ ತಮ್ಮನಿಗೆ

‘ತಮ್ಮ’ ಎಂಬೆರಡಕ್ಷರದ ಸಹೋದರ ಪ್ರಾಣ

ಪ್ರಸನ್ನ ವದನ ತಿಲಕ ನಾಮ ಹೊಂಗಿರಣ

ವೀರನಂ ಕಥೆ ಕೇಳಿ ಅದೆ ಪೆಸರ ಮಾಡಿಕೊಂಡೆ ನೀ ನಾಮಕರಣ!!

ಗುರುಕೋಟಿ ಪ್ರಿಯಪಾತ್ರ ಏ ಕಿರಣ

ಗುರುವಂ ಚಕಿತಗೊಳಿಸಿದ ಮಾತಿನ ಬಾಣ

ಇಂದಿಗೂ ನೆನೆವರಯ್ಯ ಆ ಪದ ಬಾಣ ಓ ಜಾಣ!!

ವೀರ ಹನುಮನ ಭಕ್ತ- ಅವನಂತೆ

ನಿನ್ನಲೂ ಇಹುದು ಅದ್ಭುತ ಶಕ್ತಿ ಕಾಣ|

ಬಯಸಿಹಳು ನಮ್ಮ ಭಾರತ ಮಾತೆ

ಆ ಶಕ್ತಿ ಚೈತನ್ಯದಾ ನಿನ್ನ ಸೇವಾ ಗುಣ|

ಇನ್ನೇಕೆ ತಡ! ಸಾಗಲಿ ಉದಯೋನ್ಮುಕ ಆ ನಿನ್ನ ಸ್ಪೂರ್ತಿ ಪಯಣ….

ಜಾಣ ಬಾಣ ಕಿರಣ ಏ ತಿಲಕ ಹೊಂಗಿರಣ..

ಸಂತೋಷ ಸಮೃದ್ದಿ ಚೈತನ್ಯ ನೆಮ್ಮದಿ ಜೊತೆಗೂಡಿ

ಶುಭವಾಗಲಿ ಯಶಸ್ಸು ನಿನ್ನದಾಗಲೆಂದು ಹರಸುವೆವು ಬೇಡುವೆವು ಓ ಮಿತ್ರ ಪ್ರಾಣ.

ಜನ್ಮ ದಿನದ ಶುಭಾಶಯಗಳು ಪ್ರೀತಿಯ ತಮ್ಮನಿಗೆ....


  :-ಕೃತಿ (ಕೃಷ್ಣತಿಲಕ್)

Tuesday, 24 April 2018

ವಾಲ್ಮೀಕಿಯ ಭಾಗ್ಯ: ಕುವೆಂಪು

ನನ್ನ ಗುರುಗಳಾದ ಜ್ಞಾನೇಶ್ವರರ ಜ್ಞಾನಲೋಕ ಬ್ಲಾಗ್ ನಲ್ಲಿ ವಿಹರಿಸುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಪುಸ್ತಕ ವಾಲ್ಮೀಕಿಯ ಭಾಗ್ಯ.
ಕೆ ವಿ ಪುಟ್ಟಪ್ಪ (ಕುವೆಂಪುವಿರಚಿತ ಒಂದು ಪುಟ್ಟ ಸಮೃದ್ಧ ನಾಟಕ.
 ನಾಟಕದಲ್ಲಿ ಪಾತ್ರಗಳು ಮೂರೇ  (ಪಾತ್ರಗಳುಸೀತಾಲಕ್ಷ್ಮಣ (ಸೌಮಿತ್ರಿ), ವಾಲ್ಮೀಕಿ.) ಆದರೂ  ಪಾತ್ರಗಳಿಂದ ಹೊರಹೊಮ್ಮುವ ಭಾವ ಸಂದೇಶ ಮಾತ್ರ ಅಪರಿಮಿತ
ಶ್ರೀ ರಾಮಚಂದ್ರನ ಪಿಸುಣ್ಗೆ ಕಿವಿಗೊಟ್ಟ ಕಟ್ಟಾಣತಿಯಂತೆ ಸೌಮಿತ್ರಿಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ಅರಣ್ಯದಲ್ಲಿ ಬಿಟ್ಟು ಹೋಗುವ ಹೃದಯ ವಿದ್ರಾವಕವಾದ ಸನ್ನಿವೇಶವನ್ನು ಕುವೆಂಪು ಅವರು ಅಮೋಘವಾಗಿ ಚಿತ್ರಿಸಿದ್ದಾರೆ. 
ಶ್ರೀ ರಾಮನು ಸೀತೆಯನ್ನು ಕಾಡಿಗೆ ಕಳುಹಿಸಿದ್ದಕ್ಕೆ ಲೋಕಾಪವಾದದ ನಿವಾರಣೆ, ರಘುಕುಲದ ಕೀರ್ತಿ ಸಂರಕ್ಷಣೆ , ಶ್ರೀ ರಾಮ ಸ್ವಕೀರ್ತಿಪಾಲನೆ ಮೊದಲಾದ ಕಾರಣಗಳಿದ್ದರೂ, ನಾಟಕದಲ್ಲಿ ವಾಲ್ಮೀಕಿಯ ಭಾಗ್ಯವಾಗಿ ಮೂಡಿಬಂದಿದೆ.
ಗಂಗಾತೀರದ ಘೋರಅರಣ್ಯದಲ್ಲಿ ಸೀತೆಯೊಬ್ಬಳನ್ನೇ ಬಿಟ್ಟುಹೋಗುವ ನಡುವೆ ನಡೆಯುವ ದೃಶ್ಯ 
ಹೃದಯಂಗಮವಾಗಿದೆನಾಟಕದ ಕೊನೆಯಲ್ಲಿ ವಾಲ್ಮೀಕಿಯ ನೀನೆನ್ನ ಮಹಾಕಾವ್ಯದ ಸವಿಗಣ್ಣಲ್ತೆಕಥನಾಯಕಿಯಲ್ತೆ?
ವಾಲ್ಮೀಕಿಯ ಭಾಗ್ಯಮಲ್ತೆ ? ಮಾತುಗಳೊಂದಿಗೆ ನಾಟಕ ತೆರೆಗೊಳ್ಳುತ್ತದೆ.

ಪುಸ್ತಕವನ್ನು ಆರ್ಕೈವ್ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಲು  ಕೊಂಡಿ ಬಳಸಿ: http://bit.ly/2hdEIzK


Sunday, 15 April 2018

ಸರ್ವಜ್ಞನ ವಚನಗಳು 2

ಸರ್ವಜ್ಞನ ವಚನಗಳು ಮುಂದುವರೆದಿದೆ...

22. ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು 
ಅಧಮ ತಾನಾಡಿ ಕೊಡದವನು ಸರ್ವಜ್ಞ  II

23. ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ 
ದುರ್ಜನರ ಸಂಗ ಬಚ್ಚಲ
ಕೊಚ್ಚೆಯಂತಿಹದು ಸರ್ವಜ್ಞ II

24. ಸಾಲವನು ಕೊಂಬಾಗ  ಹಾಲೋಗರುಂಡಂತೆ
ಸಾಲಿಗರು ಕೊಂಡು ಎಳೆವಾಗ
ಕಿಬ್ಬದಿಯ  ಕೀಲು ಮುರಿದಂತೆ ಸರ್ವಜ್ಞ II

25. ಎಲ್ಲ  ಬಲ್ಲವರಿಲ್ಲ  ಬಲ್ಲವರು ಬಹಳಿಲ್ಲ
ಬಲವಿಲ್ಲ  ಬಲ್ಲವರಿದ್ದು 
ಸಾಹಿತ್ಯ ಎಲ್ಲರಿಗಲ್ಲ  ಸರ್ವಜ್ಞ II

26. ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ?
ಜಾತಿ - ವಿಜಾತಿ ಎನಬೇಡ , ದೇವನೊಲಿ
ದಾತದೇ  ಜಾತ ಸರ್ವಜ್ಞ||

27. ನಡೆವುದೊಂದೇ ಭೂಮಿ , ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು , ಕುಲಗೋತ್ರ
ನಡುವೆಯೆತ್ತಣದು ಸರ್ವಜ್ಞ||


28. ಆರು ಬೆಟ್ಟವನೊಬ್ಬ ಹಾರಬಹುದೆಂದರೆ
ಹಾರಬಹುದೆಂದು ಎನಬೇಕು , ಮೂರ್ಕನೊಡ
ಹೋರಾಟ ಸಲ್ಲ ಸರ್ವಜ್ಞ||



Sunday, 11 March 2018

ಸ್ವಾಮಿ ವಿವೇಕಾನಂದರ ಕೆಲವು ನುಡಿಮುತ್ತುಗಳು.


  • ನಮ್ಮ ನೈತಿಕ ಪ್ರಕೃತಿ ಎಷ್ಟು ಉನ್ನತ ಮಟ್ಟದ್ದಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ.
  • ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ.
  • ಪರನಿಂದನೆ ಮಹಾಪಾಪ. ಸಾಧ್ಯವಾದರೆ ಕೈ ಚಾಚಿ ಸಹಾಯ ಮಾಡಿ, ಇಲ್ಲವಾದಲ್ಲಿ ಅವರ ಪಾಲಿಗೆ ಅವರು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಲು ಬಿಡಿ.
  • ಶ್ರದ್ಧೆ, ಸಹನೆ, ಸತತ ಪ್ರಯತ್ನ ಜಯ ಸಾಧಿಸಲು ಅಗತ್ಯವಾಗಿ ಬೇಕಾದ ಮೂರು ಸಾಧನಗಳು. ಇವುಗಳ ಜೊತೆಗೆ ಆತ್ಮವಿಶ್ವಾಸವಿದ್ದರೆ ಮಾತ್ರವೇ ವಿಜಯಲಕ್ಷ್ಮಿ ಒಲಿಯುತ್ತಾಳೆ.


ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಸಂವಿಧಾನದ ತಿದ್ದುಪಡಿಗಳು

ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಸಂವಿಧಾನದ ತಿದ್ದುಪಡಿಗಳು:
೧) ಮೂಲಭೂತ ಕರ್ತವ್ಯ ಸೇರ್ಪಡೆ, ಸಮಾಜವಾದಿ ಜಾತ್ಯಾತೀತ, ಸಮಗ್ರವಾದಿ ಪದಗಳನ್ನು ಪ್ರಸ್ತಾವನೆಗೆ ಸೇರ್ಪಡೆ: 42 ನೇ ತಿದ್ದುಪಡಿ 1976
೨) ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ಕೈಬಿಟ್ಟಿದ್ದು: 44 ನೇ ತಿದ್ದುಪಡಿ 1978
೩) ಮತದಾನ ವಯಸ್ಸನ್ನು 21 ರಿಂದ 18 ಕ್ಕೆ ಇಳಿಕೆ: 61 ನೇ ತಿದ್ದುಪಡಿ 1989
೪) ರಾ. ಪ. ಜಾ ಮತ್ತು ಪ. ಪಂ ಆಯೋಗ ಅವಕಾಶ : 65 ನೇ ತಿದ್ದುಪಡಿ 1990
೫) ಗ್ರಾಮಪಂಚಾಯಿತಿ: 73 ನೇ ತಿದ್ದುಪಡಿ, ನಗರ ಸಂಸ್ಥೆಗಳು: 74 ನೇ ತಿದ್ದುಪಡಿ 1992
೬) 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ : 86 ನೇ ತಿದ್ದುಪಡಿ 2002
೭) ಸರ್ವ ಶಿಕ್ಷಣ ಅಭಿಯಾನ : 93 ನೇ ತಿದ್ದುಪಡಿ 2005
೮) ಹೈಕ. ವಿಶೇಷ ಮೀಸಲಾತಿ: 98 ನೇ ತಿದ್ದುಪಡಿ 2013
ಇತ್ತೀಚೆಗಿನ ತಿದ್ದುಪಡಿಗಳು:
  • 99 ನೇ ತಿದ್ದುಪಡಿ  2015: NJAC-national Judicial Appointment
  • 100 ನೇ ತಿದ್ದುಪಡಿ 2015: ಭಾರತ - ಬಾಂಗ್ಲಾ ಗಡಿ ಪ್ರದೇಶಗಳ ಹಸ್ತಾಂತರ
  • 101 ನೇ ತಿದ್ದುಪಡಿ 2017: GST 

Sunday, 14 January 2018

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Image result for makar sankranti kannada


ಎಳ್ಳು ಬೆಲ್ಲ ಸವಿಯುತ್ತಾ
ಕಬ್ಬಿನ ಸಿಹಿಯ ಹೀರುತ್ತಾ
ದ್ವೇಷ ಅಸೂಯೆ ಮರೆಯುತ್ತಾ
ಸವಿ ಮಾತುಗಳನ್ನು ನುಡಿಯುತ್ತಾ
ಮಕರ ಸಂಕ್ರಾಂತಿಗೆ ಸ್ವಾಗತ ಕೋರೋಣ. 

ಮೂಡಣದ ಅರಮನೆಯ ಕದವು ತೆರೆದು
ಪಡುವಣದ ಕತ್ತಲೆಯ ಪರದೆ ಸರಿದು 
ಹೊಂಬಣ್ಣದ ರವಿಯ ಕಿರಣ ಹರಿದು 
ಕೆಂಬಣ್ಣದ ತಂಬೆಳಕ ಸುರಿದು 
ತಂಪಾದ ತಂಗಾಳಿ ಸುಳಿದು
ಇಂಪಾದ ರಾಗ ಮಿಡಿದು 
ಹೂಕಂಪು ಸೂಸಿ 
ಹೇಳುತಿದೆ 
ನಿಮಗೆ 
"ಮಕರ ಸಂಕ್ರಾಂತಿ ಹಬ್ಬದ  ಶುಭಾಶಯಗಳು "
Image result for makar sankranti kannada

ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು

ಸರ್ವರಿಗೂ ಸ್ವಾಮಿ ವಿವೇಕಾನಂದರ ದಿನಾಚರಣೆಯ /ರಾಷ್ಟ್ರೀಯ ಯುವ ದಿನದ ಶುಭಾಶಯಗಳು 💐 ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು ನಿಮಗಾಗಿ. ಇಂದಿನ ಜಗತ...