Thursday, 24 May 2018

ಇಂಗ್ಲೀಷ್ ನಲ್ಲಿ ಬರೆಯಿರಿ; ಕನ್ನಡ ಅಕ್ಷರಗಳನ್ನು ಪಡೆಯಿರಿ! (Type English- Get Kannada fonts!)

ಇಂಗ್ಲೀಷ್ ನಲ್ಲಿ  ಬರೆಯಿರಿ; ಕನ್ನಡ ಅಕ್ಷರಗಳನ್ನು ಪಡೆಯಿರಿ: 
http://writekannadaonline.blogspot.com/

ಹವ್ಯಾಸಗಳು (Hobbies)

     ಹವ್ಯಾಸಗಳು ಒಂಥರಾ ಬಾಳ  ಸಂಗಾತಿಗಳೇ  ಸರಿ!  ಒಂದು ಮಾತಿದೆ  “A Hobby a day keeps the doldrums away” ಪ್ರತಿದಿನದ ಜಂಜಾಟಗಳ ನಡುವೆ ಒಂದು ಹವ್ಯಾಸವಿದ್ದಿದ್ದೇ  ಆದರೆ ಎಷ್ಟೋ ಸಂಕಟಗಳು ಮಾಯವಾಗಿ ಮನಸ್ಸಿನಲ್ಲಿ ಆಹ್ಲಾದ ಮೂಡುತ್ತದೆ. 
ಬಿಡುವಿನ ವೇಳೆಯಲ್ಲಿ ನಮ್ಮ ಮನಸ್ಸಿಗೆ ಹತ್ತಿರವಾದ, ಆಸಕ್ತಿಯಿಂದ ಮಾಡುವ, ಮನಸ್ಸನ್ನು ಸಂತೋಷಗೊಳಿಸುವ ಚಟುವಟಿಕೆಗಳೇ ಹವ್ಯಾಸಗಳು. ನಮ್ಮ ಇಂದಿನ ಜೀವನ ಶೈಲಿಯಲ್ಲಿ ಹವ್ಯಾಸಗಳಿಗೆ ಸ್ವಲ್ಪ ಸಮಯ ಕೊಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪ್ರಭಾವ ಬೀರಿ ಚೈತನ್ಯ ತಂದು ಕೊಡುತ್ತವೆ. ಹವ್ಯಾಸಗಳು ಆತ್ಮ ವಿಶ್ವಾಸ ಹೆಚ್ಚಿಸುವುದರ ಜೊತೆಗೆ ನಮ್ಮ ನಿತ್ಯ ಕಾರ್ಯಗಳಲ್ಲಿ ಉತ್ಸಾಹ ತುಂಬುತ್ತವೆ. ಉತ್ತಮ ಹವ್ಯಾಸಗಳು ನಮ್ಮ ಜೀವನವನ್ನು ಉತ್ತಮಗೊಳಿಸಿ ನಮ್ಮನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸುತ್ತವೆ.
ಇನ್ನೊಂದು ಮಾತಿದೆ “Happy is the man who is living by his hobby” ತನ್ನ ಇಷ್ಟವಾದ ಹವ್ಯಾಸಗಳೊಂದಿಗೇ  ಜೀವನ ಸಾಗಿಸುವಂತಿದ್ದರೆ  ಅವರಂತ ಅದೃಷ್ಟವಂತರು ಮತ್ತೊಬ್ಬರಿಲ್ಲ ! ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಹವ್ಯಾಸಗಳನ್ನು  ರೂಡಿಸಿಕೊಂಡು ಅವುಗಳಿಗೆ ಸ್ವಲ್ಪ ಸಮಯವನ್ನು ಮೀಸಲಿಡುತ್ತ ಸಂತೋಷ ಜೀವನ ಸಾಗಿಸೋಣ.




Monday, 30 April 2018

ತಮ್ಮನಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಬರೆದ ಸಾಲುಗಳು

ಜನ್ಮ ದಿನದ ಶುಭಾಶಯಗಳು ಪ್ರೀತಿಯ ತಮ್ಮನಿಗೆ

‘ತಮ್ಮ’ ಎಂಬೆರಡಕ್ಷರದ ಸಹೋದರ ಪ್ರಾಣ

ಪ್ರಸನ್ನ ವದನ ತಿಲಕ ನಾಮ ಹೊಂಗಿರಣ

ವೀರನಂ ಕಥೆ ಕೇಳಿ ಅದೆ ಪೆಸರ ಮಾಡಿಕೊಂಡೆ ನೀ ನಾಮಕರಣ!!

ಗುರುಕೋಟಿ ಪ್ರಿಯಪಾತ್ರ ಏ ಕಿರಣ

ಗುರುವಂ ಚಕಿತಗೊಳಿಸಿದ ಮಾತಿನ ಬಾಣ

ಇಂದಿಗೂ ನೆನೆವರಯ್ಯ ಆ ಪದ ಬಾಣ ಓ ಜಾಣ!!

ವೀರ ಹನುಮನ ಭಕ್ತ- ಅವನಂತೆ

ನಿನ್ನಲೂ ಇಹುದು ಅದ್ಭುತ ಶಕ್ತಿ ಕಾಣ|

ಬಯಸಿಹಳು ನಮ್ಮ ಭಾರತ ಮಾತೆ

ಆ ಶಕ್ತಿ ಚೈತನ್ಯದಾ ನಿನ್ನ ಸೇವಾ ಗುಣ|

ಇನ್ನೇಕೆ ತಡ! ಸಾಗಲಿ ಉದಯೋನ್ಮುಕ ಆ ನಿನ್ನ ಸ್ಪೂರ್ತಿ ಪಯಣ….

ಜಾಣ ಬಾಣ ಕಿರಣ ಏ ತಿಲಕ ಹೊಂಗಿರಣ..

ಸಂತೋಷ ಸಮೃದ್ದಿ ಚೈತನ್ಯ ನೆಮ್ಮದಿ ಜೊತೆಗೂಡಿ

ಶುಭವಾಗಲಿ ಯಶಸ್ಸು ನಿನ್ನದಾಗಲೆಂದು ಹರಸುವೆವು ಬೇಡುವೆವು ಓ ಮಿತ್ರ ಪ್ರಾಣ.

ಜನ್ಮ ದಿನದ ಶುಭಾಶಯಗಳು ಪ್ರೀತಿಯ ತಮ್ಮನಿಗೆ....


  :-ಕೃತಿ (ಕೃಷ್ಣತಿಲಕ್)

Tuesday, 24 April 2018

ವಾಲ್ಮೀಕಿಯ ಭಾಗ್ಯ: ಕುವೆಂಪು

ನನ್ನ ಗುರುಗಳಾದ ಜ್ಞಾನೇಶ್ವರರ ಜ್ಞಾನಲೋಕ ಬ್ಲಾಗ್ ನಲ್ಲಿ ವಿಹರಿಸುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಪುಸ್ತಕ ವಾಲ್ಮೀಕಿಯ ಭಾಗ್ಯ.
ಕೆ ವಿ ಪುಟ್ಟಪ್ಪ (ಕುವೆಂಪುವಿರಚಿತ ಒಂದು ಪುಟ್ಟ ಸಮೃದ್ಧ ನಾಟಕ.
 ನಾಟಕದಲ್ಲಿ ಪಾತ್ರಗಳು ಮೂರೇ  (ಪಾತ್ರಗಳುಸೀತಾಲಕ್ಷ್ಮಣ (ಸೌಮಿತ್ರಿ), ವಾಲ್ಮೀಕಿ.) ಆದರೂ  ಪಾತ್ರಗಳಿಂದ ಹೊರಹೊಮ್ಮುವ ಭಾವ ಸಂದೇಶ ಮಾತ್ರ ಅಪರಿಮಿತ
ಶ್ರೀ ರಾಮಚಂದ್ರನ ಪಿಸುಣ್ಗೆ ಕಿವಿಗೊಟ್ಟ ಕಟ್ಟಾಣತಿಯಂತೆ ಸೌಮಿತ್ರಿಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ಅರಣ್ಯದಲ್ಲಿ ಬಿಟ್ಟು ಹೋಗುವ ಹೃದಯ ವಿದ್ರಾವಕವಾದ ಸನ್ನಿವೇಶವನ್ನು ಕುವೆಂಪು ಅವರು ಅಮೋಘವಾಗಿ ಚಿತ್ರಿಸಿದ್ದಾರೆ. 
ಶ್ರೀ ರಾಮನು ಸೀತೆಯನ್ನು ಕಾಡಿಗೆ ಕಳುಹಿಸಿದ್ದಕ್ಕೆ ಲೋಕಾಪವಾದದ ನಿವಾರಣೆ, ರಘುಕುಲದ ಕೀರ್ತಿ ಸಂರಕ್ಷಣೆ , ಶ್ರೀ ರಾಮ ಸ್ವಕೀರ್ತಿಪಾಲನೆ ಮೊದಲಾದ ಕಾರಣಗಳಿದ್ದರೂ, ನಾಟಕದಲ್ಲಿ ವಾಲ್ಮೀಕಿಯ ಭಾಗ್ಯವಾಗಿ ಮೂಡಿಬಂದಿದೆ.
ಗಂಗಾತೀರದ ಘೋರಅರಣ್ಯದಲ್ಲಿ ಸೀತೆಯೊಬ್ಬಳನ್ನೇ ಬಿಟ್ಟುಹೋಗುವ ನಡುವೆ ನಡೆಯುವ ದೃಶ್ಯ 
ಹೃದಯಂಗಮವಾಗಿದೆನಾಟಕದ ಕೊನೆಯಲ್ಲಿ ವಾಲ್ಮೀಕಿಯ ನೀನೆನ್ನ ಮಹಾಕಾವ್ಯದ ಸವಿಗಣ್ಣಲ್ತೆಕಥನಾಯಕಿಯಲ್ತೆ?
ವಾಲ್ಮೀಕಿಯ ಭಾಗ್ಯಮಲ್ತೆ ? ಮಾತುಗಳೊಂದಿಗೆ ನಾಟಕ ತೆರೆಗೊಳ್ಳುತ್ತದೆ.

ಪುಸ್ತಕವನ್ನು ಆರ್ಕೈವ್ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಲು  ಕೊಂಡಿ ಬಳಸಿ: http://bit.ly/2hdEIzK


Sunday, 15 April 2018

ಸರ್ವಜ್ಞನ ವಚನಗಳು 2

ಸರ್ವಜ್ಞನ ವಚನಗಳು ಮುಂದುವರೆದಿದೆ...

22. ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು 
ಅಧಮ ತಾನಾಡಿ ಕೊಡದವನು ಸರ್ವಜ್ಞ  II

23. ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ 
ದುರ್ಜನರ ಸಂಗ ಬಚ್ಚಲ
ಕೊಚ್ಚೆಯಂತಿಹದು ಸರ್ವಜ್ಞ II

24. ಸಾಲವನು ಕೊಂಬಾಗ  ಹಾಲೋಗರುಂಡಂತೆ
ಸಾಲಿಗರು ಕೊಂಡು ಎಳೆವಾಗ
ಕಿಬ್ಬದಿಯ  ಕೀಲು ಮುರಿದಂತೆ ಸರ್ವಜ್ಞ II

25. ಎಲ್ಲ  ಬಲ್ಲವರಿಲ್ಲ  ಬಲ್ಲವರು ಬಹಳಿಲ್ಲ
ಬಲವಿಲ್ಲ  ಬಲ್ಲವರಿದ್ದು 
ಸಾಹಿತ್ಯ ಎಲ್ಲರಿಗಲ್ಲ  ಸರ್ವಜ್ಞ II

26. ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ?
ಜಾತಿ - ವಿಜಾತಿ ಎನಬೇಡ , ದೇವನೊಲಿ
ದಾತದೇ  ಜಾತ ಸರ್ವಜ್ಞ||

27. ನಡೆವುದೊಂದೇ ಭೂಮಿ , ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು , ಕುಲಗೋತ್ರ
ನಡುವೆಯೆತ್ತಣದು ಸರ್ವಜ್ಞ||


28. ಆರು ಬೆಟ್ಟವನೊಬ್ಬ ಹಾರಬಹುದೆಂದರೆ
ಹಾರಬಹುದೆಂದು ಎನಬೇಕು , ಮೂರ್ಕನೊಡ
ಹೋರಾಟ ಸಲ್ಲ ಸರ್ವಜ್ಞ||



Sunday, 11 March 2018

ಸ್ವಾಮಿ ವಿವೇಕಾನಂದರ ಕೆಲವು ನುಡಿಮುತ್ತುಗಳು.


  • ನಮ್ಮ ನೈತಿಕ ಪ್ರಕೃತಿ ಎಷ್ಟು ಉನ್ನತ ಮಟ್ಟದ್ದಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ.
  • ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ.
  • ಪರನಿಂದನೆ ಮಹಾಪಾಪ. ಸಾಧ್ಯವಾದರೆ ಕೈ ಚಾಚಿ ಸಹಾಯ ಮಾಡಿ, ಇಲ್ಲವಾದಲ್ಲಿ ಅವರ ಪಾಲಿಗೆ ಅವರು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಲು ಬಿಡಿ.
  • ಶ್ರದ್ಧೆ, ಸಹನೆ, ಸತತ ಪ್ರಯತ್ನ ಜಯ ಸಾಧಿಸಲು ಅಗತ್ಯವಾಗಿ ಬೇಕಾದ ಮೂರು ಸಾಧನಗಳು. ಇವುಗಳ ಜೊತೆಗೆ ಆತ್ಮವಿಶ್ವಾಸವಿದ್ದರೆ ಮಾತ್ರವೇ ವಿಜಯಲಕ್ಷ್ಮಿ ಒಲಿಯುತ್ತಾಳೆ.


ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು

ಸರ್ವರಿಗೂ ಸ್ವಾಮಿ ವಿವೇಕಾನಂದರ ದಿನಾಚರಣೆಯ /ರಾಷ್ಟ್ರೀಯ ಯುವ ದಿನದ ಶುಭಾಶಯಗಳು 💐 ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು ನಿಮಗಾಗಿ. ಇಂದಿನ ಜಗತ...