ಆಕಾಶ ಭೂಮಿ ದೂರವೇ ಇದ್ದರೂ
ಅವುಗಳ
ಸಂಬಂಧಗಳಿಗೆ ಮಿತಿಯುಂಟೇನಯ್ಯ..
ಮೋಡ-
ಜಲಚಕ್ರ ಮಳೆ -ನೀರಾವಿ
ಬೆಳೆ-
ಸಮೃದ್ಧಿ ತಾಪ- ಹವಾಮಾನ ..
ಹೀಗೆ
ನೂರೆಂಟು ಬಂಧಗಳಿವೆ ಕಾಣಯ್ಯ!
ಮಾನವ
ಸಂಬಂಧಗಳು ಜೊತೆ ಇರದಿದ್ದೊಡೆ
ಅವುಗಳು
ಮುಗಿದೇ ಹೋದವು ಎಂದೇಕೆನ್ನುವಿರಿ..
ಮನಸ್ಸು-
ನೆನಪು ಮುಗುಳ್ನಗೆ- ನಿಟ್ಟುಸಿರು
ಕನಸು-
ಅಭಿವೃದ್ಧಿ ಕೋಪ- ಬಹುಮಾನ
ಹೀಗೆ
ನೂರೆಂಟು ಅನುಬಂಧಗಳಿವೆ ಕಾಣಿರಯ್ಯ..
ನಿರ್ಲಿಪ್ತ
ನಿಸ್ವಾರ್ಥ ನಿರಹಂಕಾರ..ವಿಕಾಸ ಒಳಿತು ಶ್ರೇಯಸ್ಸಿನ ಸ್ನೇಹ ಬಂಧವು ಎಂದಿಗೂ ಅಮರವಯ್ಯ...
ಇದೇ
ಅಮರ ಸ್ನೇಹ ಚೇತನದ ಗುಟ್ಟು ಕಾಣಯ್ಯ...
:-ಕೃತಿ (ಕೃಷ್ಣ ತಿಲಕ್)
No comments:
Post a Comment