ಪ್ರಥಮ ಯೋಜನೆ:ಸರ್ಕಾರಿ
ಕಿರಿಯ ಪ್ರಾಥಮಿಕ ಪಾಠಶಾಲೆ ಕೆಂಪಸಾಗರ
ಸುವರ್ಣ ಮಹೋತ್ಸವವನ್ನು
ಆಚರಿಸಿಕೊಂಡಿರುವ ಈ ಶಾಲೆ ತಾಲ್ಲೋಕಿಗೆ ಒಂದು ಮಾದರಿ ಶಾಲೆ. ಇಲ್ಲಿನ ಮುಖ್ಯಶಿಕ್ಷಕರು ಮತ್ತು ಸಹ
ಶಿಕ್ಷಕರ ಶ್ರಮದಿಂದ ಶಾಲೆ ಹಸಿರಿನಿಂದ ಸಿಂಗರಿಸಿದ್ದು ಮಕ್ಕಳು ಜ್ಞಾನ ಲೋಕದಲ್ಲಿ ನೂರಾರು ಹೊಸ ಕನಸುಗಳೊಂದಿಗೆ
ಕಂಗೊಳಿಸುತ್ತಿವೆ.
ಪ್ರಸ್ತುತ ಗ್ರಾಮದಲ್ಲಿ
ಆಂಗ್ಲ ಶಾಲೆಗಳ ವ್ಯಾಮೋಹ ಜಾಸ್ತಿಯಾಗಿದ್ದು ದುಡಿದ ಬಹುಪಾಲನ್ನು ಪೋಷಕರು ಕಾನ್ವೆಂಟ್ ಶಾಲೆಗಳಿಗೆ
ಸುರಿಯುತ್ತಿದ್ದಾರೆ. ಇಲ್ಲಿನ ಶಿಕ್ಷಕರು, ಸರ್ಕಾರೀ ಆಯೋಜಿತ ಶಿಕ್ಷಣದ ಜೊತೆಗೆ -ಇಲ್ಲಿನ ಹಳೇ ವಿದ್ಯಾರ್ಥಿಗಳು,
ಇತರೆ ಸ್ನೇಹ ಸಹಾಯ ಹಸ್ತಗಳು ಸೇರಿದರೆ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಬಹುದು ಎಂಬ ನಿರೀಕ್ಷೆಯನ್ನು
ಹೊಂದಿದ್ದಾರೆ.
ಈ ನಿಟ್ಟಿನಲ್ಲಿ ಸಹಾಯಲೋಕ-Helping hands ನಿಂದ
ಶನಿವಾರದಂದು ಶಾಲೆಗೆ ತೆರಳಿ ಅವರಿಗೆ ಆಂಗ್ಲ ಭಾಷೆ ಕಲಿಕೆ
, ವಿಜ್ಞಾನ ಅನ್ವಯಗಳ ಪರಿಚಯ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಇತರ ಆಟ ಪಾಠಗಳ ಮೂಲಕ ಗ್ರಾಮೀಣ
ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಳಿಲ ಸೇವೆ ಮಾಡೋಣ...
Please share your ideas to mail id: krishnakempasagara@gmail.com
No comments:
Post a Comment