ಎಂದಿಗೂ ಮುಗಿಯದ
ಒಮ್ಮೆಯೂ ಬಾಡದ
ಸ್ನೇಹದ ಹೂ ನೀನು|
ನಿತ್ಯದ ಬದುಕಲಿ
ನನ್ನೆದೆ ಶಾಶ್ವತ
ಪ್ರಜ್ವಲಿಸೋ ಜ್ಯೋತಿ ನೀನು|
ಆಪತ್ಕಾಲದಿ ನೆರವು ನೀಡಿ
ಅಂಧಕಾರದಿ ದಾರಿ ತೋರಿ
ಬೆಳಗೋ ನಕ್ಷತ್ರ ನೀನು|
ಭೇದವ ಎಣಿಸದೆ
ಸ್ವಾರ್ಥವ ಬಯಸದೆ
ಬಾಳುವ ತ್ಯಾಗಮೂರ್ತಿಯು ನೀನು|
ಪದಗಳೇ ಸಾಲದ
ಕವಿತೆಗೂ ನಿಲುಕದ
ಅನಂತ ಚೇತನ ನೀನು|
:-ಕೃಷ್ಣ (ಕೃತಿ)
No comments:
Post a Comment