Tuesday, 9 October 2018

ಜ್ಞಾನಭಂಡಾರ ಜ್ಞಾನೇಶ್ವರ ಗುರುವಿಗೆ ಶರಣು.


          ಮಹಾಲಯ ಅಮಾವಾಸ್ಯೆ -2018  ಹಬ್ಬದ ದಿನ, ನನ್ನ ಪ್ರೀತಿಯ ಗುರುಗಳಾದ ಜ್ಞಾನೇಶ್ವರರ ಮನೆಗೆ ಭೇಟಿ ಕೊಟ್ಟಿದ್ದೆ. ಅದೊಂದು ಅಮೂಲ್ಯ ಸಮಯ. ಎಷ್ಟೋ ವಿಚಾರಗಳನ್ನು ಚರ್ಚಿಸಿದೆವು. ಅವುಗಳಲ್ಲಿ ಪ್ರಸ್ತುತ ಸಂದರ್ಭದಲ್ಲಿನ  ಸಾರ್ವಜನಿಕ ಸೇವೆಗೆ  ಹಾಗೂ ಜೀವನಕ್ಕೆ ಸಂಬಂಧಿಸಿದಂತೆ  ಗುರುಗಳ ಕೆಲವು ಅಭಿಪ್ರಾಯಗಗಳು ಇಂತಿವೆ.
  • ಸಮಾಜದ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಮತ್ತು ಆಡಳಿತಾಧಿಕಾರಿಗಳಿಗೆ ಕಾಳಜಿ ಮತ್ತು ಇಚ್ಛಾ ಶಕ್ತಿ  ಇರಬೇಕು. ಜೊತೆಗೆ ಹೊಸ ಚಿಂತನೆಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ಧೈರ್ಯ ಇರಬೇಕು. ಪ್ರಾರಂಭಿಸುವ (Initiative) ಗುಣ ಇರಬೇಕು.
  • ಸದಾ ಅಧ್ಯಯನಶೀಲನಾಗಿರಬೇಕು, ಪ್ರತಿದಿನ ಬರೆಯುವ ಅಭ್ಯಾಸವನ್ನಿಟ್ಟುಕೊಳ್ಳಬೇಕು.
  • ಯಾವುದಕ್ಕೂ ಅಂಜಬಾರದು, ನಾವು ಸತ್ಯವಂತರು, ನೈತಿಕ  ಗುಣ ಉಳ್ಳವರು ಆಗಿದ್ದಾಗ ಯಾವುದಕ್ಕೂ ಹೆದರುವ ಅವಶ್ಯಕತೆಯಿಲ್ಲ.
  • ರೈತರು ಬಹುಬೆಳೆ ಪದ್ಧತಿ ಅನುಸರಿಸುವ ಜರೂರು ಅವಶ್ಯಕತೆ ಇದೆ. ಆಗ ಮಾತ್ರ ರೈತರ ಬದುಕು ಲಾಭದಾಯಕವಾಗಲು ಸಾಧ್ಯ.

ಇವುಗಳ ಜೊತೆಗೆ ಗುರುಗಳನ್ನು ನೋಡಿ ಕಲಿಯುವುದೇ ತುಂಬಾ ಇದೆ. ಹಿತ ಮಿತ ಮೃದು ಭಾಷಿ, ಸರಳತೆ. ನೇರ ನುಡಿ, ವಿಚಾರ ಮಾಡಿ ಮಾತಾಡುವ ಕಲೆ, ಬಿಡುವಿನ ಸಮಯವನ್ನು ಓದು ಮತ್ತು ಬರಹಗಳಲ್ಲಿ ತೊಡಗಿಸಿಕೊಳ್ಳುವುದು, ಶಿಷ್ಯವರ್ಗಕ್ಕೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುವುದು ಹೀಗೆ ಹಲವಾರು ವಿಷಯಗಳಿವೆ. ಹೆಸರಲ್ಲೇ ಜ್ಞಾನ ಇರುವಂತೆ ಅವರು ಜ್ಞಾನಭಂಡಾರವೆಂದರೆ ತಪ್ಪಿಲ್ಲ. ಅದನ್ನು ಸದ್ವಿನಿಯೋಗಪಡಿಸಿಕೊಂಡು ಯುವಜನತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದೇ ವಿಚಾರಗಳನ್ನು ವಿನಿಮಯಮಾಡಿಕೊಳ್ಳುತ್ತಿರುವ ಉದ್ದೇಶವಾಗಿದೆ.

No comments:

Post a Comment

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...