ಮನಸ್ಸಿಟ್ಟು
ಕಲಿತ ಅಕ್ಷರ,
ಕಷ್ಟಪಟ್ಟು
ದುಡಿದು ತಿನ್ನುವ ಅನ್ನ,
ಕಷ್ಟಪಟ್ಟು
ಗಳಿಸಿದ ಹಣ,
ಇಷ್ಟದಿಂದ
ಮಾಡುವ ದೈವಭಕ್ತಿ,
ಯಾವತ್ತೂ ಯಾರನ್ನೂ ಕೈ ಬಿಡುವುದಿಲ್ಲ!
ಸಂತೆಯಲ್ಲಿದ್ದೂ
ಏಕಾಂತತೆಯತ್ತ ಮುಖ ಮಾಡುವುದು ಸಜ್ಜನರ
ಲಕ್ಷಣ!
ಯಾವುದೇ ಕಾರ್ಯವನ್ನು ಸರಿಯಾಗಿ ಆರಂಭಿಸಿದರೆ ಅರ್ಧದಷ್ಟು
ಯಶಸ್ಸು ಕೈಗೊಂಡಿದಂತೆಯೇ ಸರಿ!
ಗುರಿ ಸಾಧನೆಯ ಹಾದಿಯಲ್ಲಿ ಕೆಲವಾದರೂ
ಕಲ್ಲು ಬೀಳುವುದು ಸಹಜ, ಆದರೆ
ಆ ಕಲ್ಲುಗಳಿಂದ ಗೋಡೆ
ಕಟ್ಟಿಕೊಳ್ಳುತ್ತೇವೋ, ಸೇತುವೆ ನಿರ್ಮಿಸುತ್ತೇವೋ ಆಯ್ಕೆ
ನಮ್ಮದು. ನಮ್ಮ ಬದುಕಿಗೆ ನಾವೇ
ಶಿಲ್ಪಿಗಳು!