ತಾಳಿದವನು
ಬಾಳಿಯಾನು ಎಂಬುದಿದೆ
ಗಾದೆ ಮಾತೊಂದು|
ಇದನರಿತು ಸಾಗುತಿರೆ
ನಮ್ಮ ಬಾಳು ಬಂಗಾರವೆಂದು|
ಅದನರಿಯದೆ ಏಕೆ ಕೊರಗುವಿರಿ
ಜೀವನದಿ ನೊಂದು ನೊಂದು!|
ಆತುರಗಾರನಿಗೆ
ಬುದ್ಧಿ ಮಟ್ಟವಂತೆ ಕೇಳ!
ನಿರಂತರ ಯತ್ನದಿ ಸಾಗಿ ನೀ
ಬಾಳ!
ಸತತ ಪ್ರಯತ್ನ, ಸ್ಪಷ್ಟ ಗುರಿಯೇ
ಈ ಜೀವನದ ದಾಳ!|
ಇನ್ನೇಕೆ ಈ ಚಿಂತೆ,
ಸಾಕು ಬೇಕುಗಳ ಸಂತೆ,
ಮೇಲ್ನುಡಿಗಳೇ
ಸತ್ಯವಂತೆ!||
ಸುಗಮದಿ ಸಾಗಲಿ ನಿನ್ನ ಜೀವನ
ನಿಶ್ಚಿಂತೆಯಿಂ,
ಸಂತೋಷದಿ ನಲಿಯಲಿ ನಿನ್ನ ಮನ,
ಅಮರ ಚೇತನವಾಗಲಿ ಜೀವಂಜ್ಯೋತಿ ಅನಿಕೇತನ!||
: ಕೃಷ್ಣ
Gadhegala balake adhbuthavagi moodibandide .
ReplyDelete#amazing poetic lines .