Tuesday 17 May 2022

ಮಾತಿನ ಮಹತ್ವ: Importance of words/Speech

         ಮಾತು ಮನುಷ್ಯನಿಗೆ ದೊರೆತಿರುವ ಒಂದು ವರದಾನ. ಮಾತು ಎಂಬುದು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ. ಮಾತಿನಿಂ ನಗೆನುಡಿಯು ಮಾತಿನಿಂ ನಗೆನುಡಿಯು ಮಾತಿನಿಂ ಹಗೆ ಹತಿಯು ಮಾತಿನಿಂ ಸರ್ಪಸಂಪದವು ಲೋಕಕ್ಕೆ ಮಾತೆ ಮಾಣಿಕ್ಯವುಎಂದು ಸರ್ವಜ್ಞ ಕವಿ ಸಾರಿದ್ದಾರೆ. 

        ಈ ಮಾತನ್ನು ಉಪಾಯವಾಗಿ ಕ್ರಮವರಿತು ಬಳಸಿದರೆ ದೊಡ್ಡ ಉಪಕಾರಿಯಾಗುತ್ತದೆ.ಅದನ್ನು ಬಿಟ್ಟು ಕ್ರಮತಪ್ಪಿ ಬಳಸಿದರೆ ಅದಕ್ಕಿಂತ ಅಪಾಯಕಾರಿ ಇನ್ನೊಂದಿಲ್ಲ. ಮಾತಿನಿಂದ ಎಂತಹ ಮಿತ್ರನೂ ಕೂಡ ಶತ್ರುವಾಗುತ್ತಾನೆ, ಶತ್ರು ಕೂಡ ಮಿತ್ರ ನಾಗುತ್ತಾನೆ. ದುಃಖಿತರಿಗೆ ಸಾಂತ್ವಾನವನ್ನು, ನಿರಾಶೆಯಲ್ಲಿರುವವರಿಗೆ ಭರವಸೆಯನ್ನು, ಒಂಟಿತನ, ಬದುಕಿನ ಜಂಜಾಟಗಳಿಗೆ ನವ ಜೀವವನ್ನು ಕೊಡುವ ದಿವ್ಯ ಶಕ್ತಿ ಮಾತಿಗಿದೆ.

"ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು? ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮದೇವನೆಂತೊಲಿವನಯ್ಯ?" ಎಂದು ಬಸವಣ್ಣನವರು ಮಾತಿನ ಮಹತ್ವವನ್ನು ತಿಳಿಸಿದ್ದಾರೆ.

        ಆದ್ದರಿಂದ ನಮ್ಮ ಮಾತು ಸದಾ ಪರಿಶುದ್ಧವಾಗಿರಲಿ. ಸಮಾಜದ ಸ್ವಾಸ್ಥ್ಯ ಕಾಪಾಡುವಂತಿರಲಿ. ಸರ್ವರ ಸರ್ವೋದಯದ ಸಾಧನವಾಗಲಿ ಎಂದು ಆಶಿಸೋಣ.

ಮಾತಿನ ಮಹತ್ವವನ್ನು ತಿಳಿಸುವ ಗಾದೆ ಮಾತುಗಳು:

ü  ಮಾತು ಆಡಿದರೆ ಹೋಯಿತುಮುತ್ತು ಒಡೆದರೆ ಹೋಯಿತು.

ü  ನುಡಿದರೆ ಮುತ್ತಿನ ಹಾರದಂತಿರಬೇಕು

ü  ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ

ü  ಮಾತು ಬೆಳ್ಳಿಮೌನ ಬಂಗಾರ.

ü  ಮಾತು ಮನೆ ಕೆಡಿಸಿತುತೂತು  ಒಲೆ ಕೆಡಿಸಿತು.

ü  ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು

ü  ನುಡಿ ಜ್ಯೋತಿರ್ಲಿಂಗ

ü  ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ

ü  ಮೃದುವಚನ ಮೂಲೋಕ ಗೆಲ್ಲುವುದು ಗೆಳೆಯಾ

ü  ಮೃದುವಚನವೇ ಸಕಲ ಜಪಂಗಳಯ್ಯಾ

ü  ಮೃದುವಚನವೇ ಸಕಲ ತಪಂಗಳಯ್ಯಾ

ü  ರಸಿಕನಲ್ಲದವನ ಬರಿಮಾತು ಕೂರ್ದಸಿಯ ಬಡಿದಂತೆ

ü  ಮಾತು ಮಾತು ಮಥಿಸಿ ಬಂದ ನಾದದ ನವನೀತ

ü  ಮಾತೇ ಮುತ್ತುಮಾತೇ ಮೃತ್ಯು.

Power of words: ಮಾತಿನ ಕುರಿತ ಕೆಲವು ಆಂಗ್ಲ ನುಡಿಮುತ್ತುಗಳು:

v One kind word can change someone's entire day. –Unknown

v Be careful with your words. Once they are said, they can be only forgiven, not forgotten. -Unknown

v Words are free. It's how you use them that may cost you. –KushandWizdom

v Be mindful when it comes to your words. A string of some that don't mean much to you, may stick with someone else for a lifetime.-Rachel Wolchin

v Raise your words, not your voice. It is rain that grows flowers, not thunder. –Rumi

v Words have energy and power with the ability to help, to heal, to hinder, to hurt, to harm, to humiliate, and to humble. -Yehuda Berg

 

No comments:

Post a Comment

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...