ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಈ ಹೊಸ ವರ್ಷದಲ್ಲಿ ನಮ್ಮೆಲ್ಲರ ಇಷ್ಟಾರ್ಥಗಳು ಈಡೇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.
ಬೇವು - ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||
ಅದರರ್ಥ
ಹೀಗಿದೆ - ನೂರು ವರುಷಗಳ ಆಯುಷ್ಯ,
ಸದೃಢ ಆರೋಗ್ಯ, ಸಕಲ ಸಂಪತ್ತುಗಳ
ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ
ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಯುಗಾದಿ
ಅಂದರೆ....
ಚಿಗುರಿನ
ಪಲ್ಲವಿ
ನೆನಪಿನ
ಚರಣ
ಹೊಸ ಠರಾವು
ಹಳೆಯ ಬೇಸರಕ್ಕೆ ವಿಚ್ಛೇದನ
ತೊಳೆದ
ಮನೆ
ಬೆಳಗುವ
ಮನಸ್ಸು
ಹೊಸ ಬಟ್ಟೆ
ಒಬ್ಬಟ್ಟಿನ
ತಟ್ಟೆ
ಸಂಕಲ್ಪಗಳ
ತೇರು
ಭಾವ ಪುನರುತ್ಥಾನ
ಪ್ರಕೃತಿಯ
ಪರಿಭ್ರಮಣೆ
ತನ್ನಿಂದ ತಾನೆ ನಡೆಯುವ
ಒಂದು ಮಾಯೆ
ಹಳೇ ಮಾತಿಗೆ ಹೊಸ ಮೌನ
ಇತಿಹಾಸದ
ಅಟ್ಟಹಾಸಕ್ಕೆ ಹೊಸ ಮಂದಹಾಸ
ತಾಳ್ಮೆಯ
ತಳಿರು
ಅರಿವಿನ
ಹೂರಣ
ತಿಳಿವಿನ
ರಂಗೋಲಿ
ಬದುಕಿನ
ಆರಂಭ
ನಂದನದ
ಜೊತೆಗಾತಿ
ಸಂಭ್ರಮದ
ದಿಬ್ಬಣ
ನವೋಲ್ಲಾಸಕ್ಕೆ
ನಾಂದಿ
ಕಾಲಕ್ಕೆ
ಕನ್ನಡಿ
ನವಯುಗದ
ಮುನ್ನುಡಿ
ಭರವಸೆ
ನೀಡುವ ಅಭಯ
ಹಸ್ತ ಜೀವಂತಿಕೆಯ ಪರಮಾವಧಿ
ಕನಸುಗಳ
ಆದಿ
ಪರಿಸರದಲ್ಲೆಲ್ಲ
ಪ್ರಸನ್ನತೆಯನ್ನು ಪ್ರಚೋದಿಸುವ ಪರ್ವಕಾಲ
ಅದಮ್ಯ
ಚೇತನದ ಸಂಕೇತ
ಪಂಚಾಂಗ
ಶ್ರವಣ
ನೂತನ ವಸ್ತ್ರಧಾರಣ
ಹೋಳಿಗೆ
ಪಾಯಸ ಭೋಜನ
ಬೇವು-ಬೆಲ್ಲ ಸೇವನ
ಶುಭಾಶಂಸನ
ವಸಂತನ
ಆಗಮನ
ಚೈತನ್ಯದ
ಆಗರ
ನೋವು ನಲಿವಿನ ಸಂಭ್ರಮ
ಜೀವಸಂಕುಲದ
ಸಂತಸ
ಚಿಗುರೆಲೆಗಳ
ಸೊಗಡು
ಹೂದುಂಬಿಯ
ರಸದೌತಣ
ಮತ್ತೊಂದು
ಸಂವತ್ಸರಕ್ಕೆ ಸ್ವಾಗತ ಬೀಳ್ಕೊಂಡ ವರ್ಷದ
ಸಿಂಹಾವಲೋಕನ
ಸೂರ್ಯೋದಯದ ಹರ್ಷೋದಯ!
ದ.ರಾ.ಬೇಂದ್ರೆಯವರ ಯುಗಾದಿ ಕವಿತೆ:
ವರಕವಿ ದ.ರಾ.ಬೇಂದ್ರೆಯವರ ಯುಗಾದಿ ಬಗೆಗಿನ ಈ ಕವಿತೆ ಸುಪ್ರಸಿದ್ಧವಾದುದು.
"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ"||ಯುಗ ಯುಗಾದಿ ಕಳೆದರು||
kavana Krupe: Online India: ಗುರುರಾಜ ಪೋಶೆಟ್ಟಿಹಳ್ಳಿ
No comments:
Post a Comment