Monday, 10 April 2017
Friday, 7 April 2017
Wednesday, 5 April 2017
Quote 6
Three things for peaceful life:
-Don't cry for what happened yesterday
-Don't fear for what happened today
-Don't expect anything from tomorrow
ಶಾಂತಿಯುತ ಜೀವನಕ್ಕಾಗಿ ಮೂರು ವಿಷಯಗಳು.
- ನೆನ್ನೆ ನೆಡೆದು ಹೋದ ಘಟನೆಗಳಿಗಾಗಿ ಅಳಬೇಡ/ ಮುಗಿದು ಹೋದ ವಿಷಯಗಳ ಬಗ್ಗೆ ಚಿಂತಿಸಬೇಡ
- ಇವತ್ತು ನೆಡೆಯುತ್ತಿರುವುದರ ಬಗ್ಗೆ ಭಯಬೇಡ
- ನಾಳೆಯಿಂದ ಏನು ಬಯಸಬೇಡ.

ನಕ್ಕುಬಿಡಿ 4
ಮದುಮಗ ಮದುವೆಯ ಮಂಟಪದಲ್ಲಿ!:
ಮದುಮಗ ಮದುವೆಯ ಮಂಟಪದಲ್ಲಿ ನಿಂತು ಕೆಳಗೆ ಕೂತಿರುವ ಹುಡುಗಿಯರನ್ನು ನೋಡಿ ಯೋಚನೆ ಮಾಡ್ತ ಇದ್ದ......ಏನಂತ ಗೊತ್ತಾ ?
ಇವರೆಲ್ಲಾ ಇಸ್ಟು ದಿನ ಎಲ್ಲಿದ್ದರು ಅಂತ..!!!

ವಚನಗಳು 2
ಸರ್ವಜ್ಞನ 21 ವಚನಗಳು.
1. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದ, ದೇಶ
ದಾಟವೇ ಕೆಡಗು, ಸರ್ವಜ್ಞ
2. ಊರಿಂಗೆ ದಾರಿಯನು , ಆರು ತೋರಿದೊಡೇನು
ಸಾರಾಯದ ನಿಜವ ತೋರುವ ಗುರುವು ತಾ
ನಾರಾದರೇನು ? ಸರ್ವಜ್ಞ
3. ಆರು ಬೆಟ್ಟವನೊಬ್ಬ ಹಾರಬಹುದೆಂದರೆ
ಹಾರಬಹುದೆಂದು ಎನಬೇಕು, ಮೂರ್ಕನೊಡ
ಹೋರಾಟ ಸಲ್ಲ ಸರ್ವಜ್ಞ
4. ಅನ್ನವನು ಇಕ್ಕುವನು ಉನ್ನತವ ಪಡೆಯುವನು
ಉನ್ನತನು ಅಪ್ಪಯತಿಗಿಕ್ಕಿದಾ ಲೋಬಿ ತಾ
ಕುನ್ನಿಗೂ ಕಿರಿಯ ಸರ್ವಜ್ಞ
5. ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ
6. ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗೆ
ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ
7. ಅನ್ಯಸತಿಯನ್ನು ಕಂಡು, ತನ್ನ ಹೆತ್ತವಳೆಂದು
ಮನ್ನಿಸಿ ನೆಡೆದ ಪುರುಷಂಗೆ, ಇಹಪರದಿ
ಮುನ್ನ ಭಯವಿಲ್ಲ ಸರ್ವಜ್ನ
8. ಅನ್ನ ದಾನಗಳಿಂತ ಮುನ್ನ ದಾನಗಳಿಲ್ಲ
ಅನ್ನಕೆ ಮಿಗಿಲು ಇನ್ನಿಲ್ಲ, ಜಗದೊಳಗೆ
ಅನ್ನವೇ ಪ್ರಾಣ ಸರ್ವಜ್ಞ
9. ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು
ಪರದೇಶಿಯಂತೆ ಇರುತಿರ್ಪಯೋಗಿಯನು
ಪರಮಗುರುವೆಂಬೆ ಸರ್ವಜ್ಞ
10. ಉದ್ದಿನ ವಡೆ ಲೇಸು, ಬುದ್ಧಿಯ ನುಡಿ ಲೇಸು
ಬಿದ್ದೊಡನೆ ಕೈಗೆ ಬರಲೇಸು, ಶಿಶುವಿಗೆ
ಮುದ್ದಾಟ ಲೇಸು, ಸರ್ವಜ್ಞ
11. ಉಣಬಂದ ಜಂಗಮಗೆ ಉಣಬಡಿಸಲೋಲ್ಲದಲೆ
ಉಣದಿಪ್ಪ ಲಿಂಗಕುಣಬಡಿಸಿ , ಕೈ ಮುಗಿವ
ಬಣಗುಗಳ ನೋಡಾ, ಸರ್ವಜ್ಞ
12. ಇಂದ್ರನಾನೆಯ ನೇರಿ ಒಂದನೂ ಕೊಡಲರಿಯ
ಚಂದ್ರಶೇಕರನು ಮುದಿ ಎತ್ತನೇರಿ
ಬೇಕೆಂದುದನು ಕೊಡುವೆ - ಸರ್ವಜ್ಞ
13. ಅಲ್ಲಿಪ್ಪನಿಲ್ಲಿಪ್ಪನೆಲ್ಲಿಪ್ಪ ನೆನಬೇಡ
ಕಲ್ಲಿನಂತಿಪ್ಪ ಮಾನವನ, ಮನ ಕರಗೆ
ಅಲ್ಲಿಪ್ಪ ನೋಡ ಸರ್ವಜ್ಞ
14. ನಂದಿಯನು ಏರಿದನ
ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ
ಮುಂದೆ ಹೇಳುವೆನು ಸರ್ವಜ್ಞ
15. ಮುನ್ನ ಕಾಲದಲಿ ಪನ್ನಗಧರನಾಳು
ಎನ್ನೆಯ ಪೆಸರು, ಪುಷ್ಪದತ್ತನು ಎಂದು
ಮನಿಪರು ದಯದಿ ಸರ್ವಜ್ಞ
16. ಅಡಿಕೆ ಇಲ್ಲದ ವೀಳ್ಯ, ಕಿಡಕಿ ಇಲ್ಲದ ಮನೆಯು
ಒಡಕು ಬಾಯವಳ ಮನೆವಾರ್ತೇ ಎಣ್ಣೆಯ
ಕುಡಿಕೆಯೊಡೆದಂತೆ ಸರ್ವಜ್ಞ
17. ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ
18. ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣೆಸಿಬರೆದ ಪಟದೊಳಗೆಯಿರುವಾತ
ತಣ್ಣೊಳಗೆ ಇರನೇ ಸರ್ವಜ್ಞ
19. ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು
ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ
ಕುಲವನರಸುವರೆ ಸರ್ವಜ್ಞ
20. ಇಕ್ಕಿದಾತನು ಉಂಡು, ನಕ್ಕು ಸ್ವರ್ಗಕ್ಕೆ ಹೋದ
ಇಕ್ಕದನು ಹೋದ ನರಕಕ್ಕೆ, ಲೋಕದೊಳ್ಳ
ಗಿಕ್ಕಲೇಬೇಕು, ಸರ್ವಜ್ಞ
21. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ, ಮುಂದೆ
ಕಟ್ಟಿಹುದು ಬುತ್ತಿ, ಸರ್ವಜ್ಞ
ವಚನಗಳ
ಭಾಗ ಮುಂದುವರಿಯುವುದು...
Tuesday, 4 April 2017
ಶ್ರೀ ರಾಮನವಮಿಯ ಶುಭಾಶಯಗಳು.
ಎಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯಗಳು.
ಶ್ರೀ ರಾಮಚಂದ್ರನ ಜನ್ಮದಿನವನ್ನು ರಾಮನವಮಿ ಎಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಇದು ವಿಷ್ಣುವು ತನ್ನ ಏಳನೇ ಅವತಾರ(ರಾಮ) ಆರಂಭದ ದಿನವಾಗಿದೆ. ಈ ದಿನವನ್ನು ಚೈತ್ರ ನವಮಿಯ ಕೊನೆ ಅಥವಾ ಒಂಬತ್ತನೇ ದಿನ (ಚೈತ್ರ ಮಾಸ (ಮಾರ್ಚ್-ಏಪ್ರಿಲ್)) ಆಚರಿಸಲಾಗುತ್ತದೆ. ಇನ್ನೂ ಕೆಲವರು, ಶ್ರೀ ರಾಮಚಂದ್ರನು ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗಿದ ದಿನವನ್ನು ಮತ್ತು ಶ್ರೀ ರಾಮ ಪಟ್ಟಾಭಿಷೇಕ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ ಎನ್ನುತ್ತಾರೆ. ಆದರೂ ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಶ್ರೀ ರಾಮನ ಅವತಾರದ ದಿನವನ್ನೇ ರಾಮನವಮಿ ಎಂದು ಆಚರಿಸುತ್ತಾರೆ. (ಕೃಷ್ಣನ ಜನ್ಮದಿನವನ್ನು ಕೃಷ್ಣಜನ್ಮಾಷ್ಟಮಿ ಎಂದು, ರಾಮನ ಜನ್ಮ ದಿನವನ್ನು ರಾಮನವಮಿ ಎಂದೂ, ಹಾಗೂ ಶಿವ ಪಾರ್ವತಿ ವಿವಾಹ ದಿನವನ್ನು ಶಿವರಾತ್ರಿ ಎಂದು ಆಚರಿಸುತ್ತಾರೆ ಎಂಬ ನಂಬಿಕೆ.)
ಶ್ರೀ ರಾಮಚಂದ್ರನು ಅಯೋಧ್ಯೆಯ ರಾಜ ಇಕ್ಷ್ವಾಕು (ರಘು ವಂಶ)ವಂಶದ ದಶರಥನ ಹಿರಿಯ ಮಡದಿ ಕೌಸಲ್ಯೆಗೆ ಅವರ ರಾಜ ಋಷಿ ವಸಿಷ್ಟರು ನೀಡಿದ ಸಲಹೆಯಂತೆ ಮಾಡಿದ ಪುತ್ರ ಕಾಮೇಷ್ಟಿ ಯಜ್ಞ ದಿಂದ ಜನಿಸಿದರು ಎಂದು ಹೇಳಲಾಗುತ್ತದೆ.
ರಾಮರಕ್ಷಾಸ್ತೋತ್ರವನ್ನು ಕೆಳಗಿನ ಲಿಂಕ್‌ನಲ್ಲಿ ಓದಬಹುದು.
http://www.vignanam.org/veda/rama-raksha-stotram-kannada.html
ಜೈ ಶ್ರೀ ರಾಮ್.

Monday, 3 April 2017
ಪ್ರಬಂಧ: ಕಪ್ಪುಹಣ (Essay on Black Money in kannada)
ಪ್ರಬಂಧ: ಕಪ್ಪುಹಣ (ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಒಂದು ಸಣ್ಣ ಕಾಣಿಕೆ!)
ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶವಾಗಿದ್ದು, ಅಪಾರ . ಸಂಪನ್ಮೂಲಗಳನ್ನು ಹೊಂದಿರುವ ಕೆಲವೇ ದೇಶಗಳಲ್ಲೊಂದಾಗಿದೆ. 120 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶ, ಸ್ವಾತಂತ್ರ ಬಂದು 70 ವರ್ಷಗಳೇ ಕಳೆದರೂ ಇನ್ನೂ ಅನೇಕ ಸಾಮಾಜಿಕ ಪಿಡುಗುಗಳು, ರಾಷ್ಟ್ರ ಅಭಿವೃದ್ದಿ ಮಾರಕ ಶಕ್ತಿಗಳಿಂದಾಗಿ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೇ ಆಗಿದೆ.
ಇಂತಹ ಅನೇಕ ಮಾರಕ ಶಕ್ತಿಗಳಲ್ಲಿ ಕಪ್ಪು ಹಣವೂ ಒಂದು. ಕಪ್ಪುಹಣವು, ದೇಶದ ಅಭಿವೃದ್ದಿಗೆ ಅಡ್ಡಗಾಲಕುತ್ತಿರುವ ಕಪ್ಪು ಚುಕ್ಕೆಯೇ ಆಗಿದೆ. ಸರ್ವೋಚ್ಚ ನ್ಯಾಯಾಲಯವು ಕಪ್ಪು ಹಣವನ್ನು ರಾಷ್ಟ್ರೀಯ ಸಂಪತ್ತಿನ ಲೂಟಿ ಎಂದೇ ಖಾರವಾಗಿ ಹೇಳಿದೆ.
ಕಪ್ಪುಹಣವೆನ್ನುವುದು ಅಕ್ರಮವಾಗಿ ಸಂಪಾದಿಸಿದ ಸಂಪತ್ತು, ಅನೈತಿಕವಾಗಿ ಗಳಿಸಿದ ಸ್ವತ್ತು, ತೆರಿಗೆ ವಂಚಿಸಿ ಸಂಗ್ರಹಿಸಿಟ್ಟ ಕಾಳಧನವಾಗಿದೆ. ಇದು ಬೇನಾಮಿ ಖಾತೆಗಳಲ್ಲಿ, ಗುಪ್ತ ಸ್ತಳಗಳಲ್ಲಿ ಇಟ್ಟ ಹಣ ಮಾತ್ರವಲ್ಲದೆ, ಷೇರುಗಳು, ವಿವಿಧ ಭದ್ರತೆಗಳು, ರಿಯಲ್ ಎಸ್ಟೇಟ್ -ಮನೆ ಅಂಗಡಿಗಳು, ನಿವೇಶನ-ಕಾರುಗಳು, ಒಡವೆ ಆಭರಣಗಳು ಮತ್ತು ಇತರೆ ದಾಸ್ತಾವೇಜುಗಳ ಸ್ವರೂಪವನ್ನೂ ಸಹ ಹೊಂದಿದೆ. ಇತ್ತೀಚೆಗಿನ ಅಂದಾಜಿನಂತೆ ಭಾರತದಲ್ಲಿ ಸುಮಾರು ೨೦೦ ಮಿಲಿಯನ್ ಕೋಟಿ ರೂ ಕಪ್ಪು ಹಣವಿದೆಯೆಂದೂ, ಹಾಗೂ ಪ್ರತೀ ವರ್ಷ ೨೦೦ ಕೋಟಿ ಕಪ್ಪು ಹಣ ಸೃಷ್ಟಿಯಾಗುತ್ತಿದೆ ಎಂದು ಅಂದಾಜಿಸಲಾಗಿತ್ತು.
ಆದಾಯ ತೆರಿಗೆ ಮತ್ತು ಮಾರಾಟ ತೆರಿಗೆಗಳನ್ನು ವಂಚಿಸಿ ಸಂಗ್ರಹಿಸಲ್ಪಟ್ಟ ಈ ಕಪ್ಪು ಹಣ ಭಾರತದ ಆರ್ಥಿಕತೆಯ ಮೇಲೆ ಅನೇಕ ಋಣ ಪರಿಣಾಮವನ್ನು ಬೀರುತ್ತಿದೆ. ಕಪ್ಪು ಹಣವನ್ನುದೇಶದ್ರೋಹಿ ಕೆಲಸಗಳಿಗೆ, ದುಷ್ಟ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚಿ ಸಾಮಾಜಿಕ ಮತ್ತು ರಾಜಕೀಯ ಸ್ವಾಸ್ಥ್ಯ ಹಾಳಾಗುತ್ತಿದೆ.
ಈ ಕಪ್ಪು ಹಣವನ್ನು ನಿಯಂತ್ರಿಸಲು ಸರ್ಕಾರ ಅನೇಕ ಕಾರ್ಯಗಳನ್ನು ಕೈಗೊಂಡರೂ ಕಪ್ಪು ಹಣವನ್ನು ತಡೆಗಟ್ಟುವುದು ಕಷ್ಟಕರವಾಗಿದೆ. ಇತ್ತೀಚೆಗೆ ಸರಕಾರವು ಕಪ್ಪು ಹಣವನ್ನು ಮಟ್ಟ ಹಾಕಲು ಸರಳೀಕೃತ ಆದಾಯ ತೆರಿಗೆ ಪಾವತಿ ವ್ಯವಸ್ಥೆ, ೫೦೦ ಮತ್ತು ೧೦೦೦ ರೂ ಗಳ ನೋಟು ಅನಗಧೀಕರಣ, ಡಿಜಿಟಲ್ ಇಂಡಿಯಾ ಎಂಬ ಅನೇಕ ಯೋಜನೆಗಳ ಜೊತೆಗೆ, ವಿವಿಧ ದೇಶಗಳೊಂದಿಗೆ ಕಪ್ಪುಹಣ ಮಾಹಿತಿ ವಿನಿಮಯದಂತಹ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದೆ.
ಸರ್ಕಾರದ ಈ ಕಾರ್ಯಕ್ರಮಗಳ ಜೊತೆ ಜೊತೆಗೆ ಭಾರತೀಯರಾದ ನಾವುಗಳು ಸ್ವ ಪ್ರೇರಣೆಯಿಂದ ನಮ್ಮ ಆಸ್ತಿ ಸಂಪತ್ತುಗಳಿಗೆ ಆದಾಯ ತೆರಿಗೆ ಪಾವತಿಸುವುದರ ಮೂಲಕ ಕಪ್ಪು ಹಣಕ್ಕೆ ಕಡಿವಾಣ ಹಾಕಿ, ನಮ್ಮ ದೇಶದ ಆರ್ಥಿಕ ಅಭಿವೃದ್ದಿಗೆ ಶ್ರಮಿಸೋಣ. ಸ್ವಾಸ್ಥ್ಯ ಸಮಾಜ ನಿರ್ಮಿಸುವುದರ ಮೂಲಕ ನಮ್ಮ ದೇಶವನ್ನು ಭ್ರಷ್ಟಾಚಾರ ಮತ್ತು ಕಪ್ಪುಹಣ ಮುಕ್ತ ದೇಶಾವ್ನಾಗಿಸೋಣ. ಎಲ್ಲರೂ ಮನಸ್ಸು ಮಾಡಿ ದೇಶಪ್ರೇಮದಿಂದ ಶ್ರಮಿಸಿದ್ದೆ ಆದರೆ ಅಸಾಧ್ಯವಾದುದು ಯಾವುದು ಇಲ್ಲ ಎಂಬುದು ನನ್ನ ಅಭಿಪ್ರಾಯ.

Quote 4
ಸಹಜತೆ (ಸಾಮಾನ್ಯೀಕರಣ) ಎಂಬುದು ಜೀವನಕ್ಕೆ ತುಂಬಾ ಮುಖ್ಯ. ನಾವು ಜಾಸ್ತಿ ಭಾವನಾತ್ಮಕವಾದರೂ ಜೀವನ ನಡೆಸುವುದು ಕಷ್ಟ ಹಾಗೆಯೇ ತುಂಬಾ ಪ್ರಾಯೋಗಿಕಾತ್ಮಕವಾದರೂ ಸಂಬಂಧಗಳನ್ನು ಗೌರವಿಸುವುದು ಕಠಿಣ.
Sunday, 2 April 2017
ಉಪಾಯವಿದ್ದರೆ ಅಪಾಯವಿಲ್ಲ
ಜಾಣ ಮಂಗ ಮತ್ತು ಪೆದ್ದು ಮೊಸಳೆ:
ಒಂದು ಸುಂದರವಾದ ಕಾಡು. ಸದಾ ಹಚ್ಚ ಹಸಿರಿನಿಂದ ಕೂಡಿದ್ದು, ಹಣ್ಣುಗಳಿಂದ ತುಂಬಿರುವ ಗಿಡಮರಗಳಿದ್ದವು. ಸದಾ ತುಂಬಿ ಹರಿಯುವ ನದಿ ಪಕ್ಕದಲ್ಲಿ ಒಂದು ನೇರಲ ಹಣ್ಣಿನ ಮರವಿತ್ತು.
ನೇರಳೆ ಮರದ ಮೇಲೆ ಕೊಬ್ಬಿದ ಗಂಡು ಮಂಗ ವಾಸಿಸುತ್ತಿತ್ತು. ನದಿಯ ಆಳವಾದ ಮಡುವಿನಲ್ಲಿ ಮೊಸಳೆಗಳು ವಾಸಿಸುತ್ತಿದ್ದವು. ಅದು ಹೇಗೋ ಗಂಡು ಮೊಸಳೆಗೂ ಮಂಗನಿಗೂ ಪರಿಚಯವಾಗಿ ಸ್ನೇಃಕ್ಕೆ ತಿರುಗಿತು. ಮಂಗ ತಾನು ಸಂಗ್ರಹಿಸಿದ ಹಣ್ಣನ್ನು ಮೊಸಳೆಗೆ ಕೊಡತೊಡಗಿತು. ಇದು ಪ್ರತಿದಿನವೂ ಮುಂದುವರಿಯಿತು. ಗಂಡು ಮೊಸಳೆ ಮಂಗ ಕೊಟ್ಟ ಹಣ್ಣನ್ನು ಮನೆಗೆ ತೆಗೆದುಕೊಂಡು ಹೋಗಿ ಹೆಂಡತಿಗೂ ಕೊಡುತ್ತಿತ್ತು. ಹೆಣ್ಣು ಮೊಸಳೆ ಹಣ್ಣುರುಚಿಗೆ ಮನಸೋತಿತು. ಅದಕ್ಕೆ ಇನ್ನೊಂದು ಯೋಚನೆ ಬಂತು. "ಇಷ್ಟು ರುಚಿಯಾದ ಹಣ್ಣುಗಳನ್ನು ದಿನಾಲೂ ತಿಂದು ಕೊಬ್ಬಿದ ಮಂಗನ ಮಾಂಸ ಎಷ್ಟು ಸಿಹಿಯಾಗಿರಬಹುದು' ಎಂದು. ಅದು ಗಂಡು ಮೊಸಳೆಯನ್ನು ಕರೆದು ಹಣ್ಣು ಕೊಡುವ ಮಂಗನನ್ನು ಕರೆದು ತರಲು ಒತ್ತಾಯಿಸತೊಡಗಿತು. ಗಂಡು ಮೊಸಳೆ ಎಷ್ಟು ಪರಿ ಪರಿಯಾಗಿ ಬೇಡಿಕೊಂಡರೂ ಹಠ ಬಿಡಲಿಲ್ಲ. ಮಂಗನನ್ನು ತಂದುಕೊಡುವವರೆಗೆ ತಾನೇನೂ ತಿನ್ನೋದೇ ಇಲ್ಲ ಎಂದು ಉಪವಾಸ ಕೂತಿತು.
ಬೇರೆ ದಾರಿ ಕಾಣದ ಗಂಡು ಮೊಸಳೆ ನಿತ್ಯ ಮಂಗನನ್ನ ಭೇಟಿಯಾಗುತ್ತಿದ್ದ ಸ್ಥಳಕ್ಕೆ ಬಂತು. ಮಂಗಣ್ಣ ರುಚಿ ರುಚಿ ಹಣ್ಣುಗಳನ್ನು ಕೈಯಲ್ಲಿ ಹಿಡಿದು ಮೊಸಳೆಗೆ ಕೊಡಲು ಸಿದ್ಧವಾಗಿ ನಿಂತಿತ್ತು. ಆಗ ಮೊಸಳೆಯು, "ಮಂಗಣ್ಣ ದಿನವೂ ರುಚಿಯಾದ ಹಣ್ಣು ಕೊಡುವ ನಿನ್ನನ್ನು ಬೆನ್ನ ಮೇಲೆ ಕೂರಿಸಿಕೊಂಡು ಬರಲು ಹೆಂಡತಿ ಹೇಳಿದ್ದಾಳೆ. ಅವಳು ನಿನಗೆ ಧನ್ಯವಾದ ತಿಳಿಸಬೇಕಂತೆ' ಎಂದಿತು. ಕಪಟ ಅರಿಯದ ಮಂಗ ಮೊಸಳೆಯ ಬೆನ್ನೇರಿತು. ಅರ್ಧ ನದಿ ದಾಡುವ ಹೊತ್ತಿಗೆ ಮೊಸಳೆ ತನ್ನ ಹೆಂಡತಿಯ ಬಯಕೆಯನ್ನು, ತಾನು ಮಂಗನನ್ನು ಕರೆದೊಯ್ಯುತ್ತಿರುವ ಕಾರಣವನ್ನು ಹೇಳಿತು.
ಮೊಸಳೆಯ ವಿಶ್ವಾಸದ್ರೋಹ ಕಂಡು ಮಂಗನಿಗೆ ಕಸಿವಿಸಿಯಾದರೂ ತೋರಿಸಿಕೊಳ್ಳಲಿಲ್ಲ. ಈ ಸಂಕಷ್ಟದಿಂದ ಪಾರಾಗುವ ಬಗೆಯನ್ನು ಯೋಚಿಸಿತು. ಕೂಡಲೇ ಅದಕ್ಕೊಂದು ಉಪಾಯ ಹೊಳೆಯಿತು. ಅದು ಮೊಸಳೆಯನ್ನು ಕರೆದು ಹೇಳಿತು, "ನೋಡು ನನ್ನ ಹೆಂಡತಿ ನನಗಿಂತ ಹೆಚ್ಚು ರುಚಿಯಾದ ಹಣ್ಣುಗಳು° ತಿಂದಿದ್ದಾಳೆ. ಅವಳ ಮಾಂಸ ನನಗಿಂತ ರುಚಿ. ವಾಪಾಸು ನನ್ನನ್ನು ಆ ಮರದ ಬಳಿ ಬಿಟ್ಟರೆ ನಾನವಳಲ್ಲಿ ಮಾತಾಡಿ ನಿನ್ನ ಜತೆ ಕಳುಹಿಸಿಕೊಡುತ್ತೇನೆ'ಮೊಸಳೆಗೆ ಹೌದಲ್ಲ! ಅನಿಸಿತು. ಅದು ಮಂಗಣ್ಣನ ಮಾತಿಗೆ ತಲೆದೂಗಿ ವಾಪಾಸು ಮರದ ಬಳಿ ಬಿಟ್ಟಿತು. ಮಂಗ ಛಂಗನೆ ದಡಕ್ಕೆ ನೆಗೆದು ಮರವೇರಿ ಬಿಟ್ಟಿತು. ಮಂಗಣ್ಣನ ಹೆಂಡತಿಗೆ ಕಾಯುತ್ತಿದ್ದ ಮೊಸಳೆಯನ್ನು ನೋಡಿ, "ನಿನ್ನಂಥ ವಿಶ್ವಾಸದ್ರೋಹಿ ಮೋಸಗಾರನನ್ನು ನಂಬಬಾರದಿತ್ತು. ಇಂದಿಗೆ ನನ್ನ ನಿನ್ನ ಸ್ನೇಃ ಕೊನೆಗೊಂಡಿತು. ಇಲ್ಲಿಂದ ತೊಲಗು' ಎಂದು ಛೀಮಾರಿ ಹಾಕಿತು.
ಮೊಸಳೆಗೆ ತಪ್ಪಿನ ಅರಿವಾಗಿ ಪಶ್ಚಾತಾಪ ಪಡುತ್ತಾ ಮರಳಿ ಹೋಯಿತು.
ನೀತಿ : ಉಪಾಯವಿದ್ದರೆ ಅಪಾಯವಿಲ್ಲ
ಕೃಪೆ: ಅಣ್ಣಾಜಿ ಫಡತಾರೆ (ಉದಯವಾಣಿ)

ತಮಾಷೆ 4
ಆಂಗ್ಲ ಟೀಚರ್: ನಂದು,ಟೆಲ್ ಮಿ ಯುವರ್ ಪೇರೆಂಟ್ಸ್ ನೇಮ್ ಇನ್ ಇಂಗ್ಲೀಷ್?
ನಂದು : ಮೈ ಫಾದರ್ ನೇಮ್ ಈಸ್ 'ಗೋಲ್ಡ್ ಫಾದರ್' (ಬಂಗಾರಪ್ಪ!)
ಅಂಡ್ ಮೈ ಮದರ್ ನೇಮ್ ಈಸ್ 'ಸ್ಟೋನ್ ಮದರ್' (ಕಲ್ಲಮ್ಮ!)
Subscribe to:
Posts (Atom)
ಕುವೆಂಪು ನುಡಿ ಸಂದೇಶ -02 | Kuvempu Quotes
ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...
-
ಹವ್ಯಾಸಗಳು ಒಂಥರಾ ಬಾಳ ಸಂಗಾತಿಗಳೇ ಸರಿ ! ಒಂದು ಮಾತಿದೆ “A Hobby a day keeps the doldrums away” ಪ್ರತಿದಿನದ ಜಂಜಾಟಗಳ ನಡುವೆ ಒಂದು ...
-
ಸರ್ವಜ್ಞನ ವಚನಗಳು ಮುಂದುವರೆದಿದೆ ... 22. ಆಡದೆಲೆ ಕೊಡುವವನು ರೂಢಿಯೊಳಗುತ್ತಮನು ಆಡಿ ಕೊಡುವವನು ಮಧ್ಯಮನು ಅಧಮ ತಾನಾಡಿ ಕೊಡದವನು ಸರ್ವ...
-
ಪ್ರಬಂಧ: ಕಪ್ಪುಹಣ (ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಒಂದು ಸಣ್ಣ ಕಾಣಿಕೆ!) ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶವಾಗಿದ್ದು, ಅಪಾರ ....