ಎಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯಗಳು.
ಶ್ರೀ ರಾಮಚಂದ್ರನ ಜನ್ಮದಿನವನ್ನು ರಾಮನವಮಿ ಎಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಇದು ವಿಷ್ಣುವು ತನ್ನ ಏಳನೇ ಅವತಾರ(ರಾಮ) ಆರಂಭದ ದಿನವಾಗಿದೆ. ಈ ದಿನವನ್ನು ಚೈತ್ರ ನವಮಿಯ ಕೊನೆ ಅಥವಾ ಒಂಬತ್ತನೇ ದಿನ (ಚೈತ್ರ ಮಾಸ (ಮಾರ್ಚ್-ಏಪ್ರಿಲ್)) ಆಚರಿಸಲಾಗುತ್ತದೆ. ಇನ್ನೂ ಕೆಲವರು, ಶ್ರೀ ರಾಮಚಂದ್ರನು ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗಿದ ದಿನವನ್ನು ಮತ್ತು ಶ್ರೀ ರಾಮ ಪಟ್ಟಾಭಿಷೇಕ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ ಎನ್ನುತ್ತಾರೆ. ಆದರೂ ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಶ್ರೀ ರಾಮನ ಅವತಾರದ ದಿನವನ್ನೇ ರಾಮನವಮಿ ಎಂದು ಆಚರಿಸುತ್ತಾರೆ. (ಕೃಷ್ಣನ ಜನ್ಮದಿನವನ್ನು ಕೃಷ್ಣಜನ್ಮಾಷ್ಟಮಿ ಎಂದು, ರಾಮನ ಜನ್ಮ ದಿನವನ್ನು ರಾಮನವಮಿ ಎಂದೂ, ಹಾಗೂ ಶಿವ ಪಾರ್ವತಿ ವಿವಾಹ ದಿನವನ್ನು ಶಿವರಾತ್ರಿ ಎಂದು ಆಚರಿಸುತ್ತಾರೆ ಎಂಬ ನಂಬಿಕೆ.)
ಶ್ರೀ ರಾಮಚಂದ್ರನು ಅಯೋಧ್ಯೆಯ ರಾಜ ಇಕ್ಷ್ವಾಕು (ರಘು ವಂಶ)ವಂಶದ ದಶರಥನ ಹಿರಿಯ ಮಡದಿ ಕೌಸಲ್ಯೆಗೆ ಅವರ ರಾಜ ಋಷಿ ವಸಿಷ್ಟರು ನೀಡಿದ ಸಲಹೆಯಂತೆ ಮಾಡಿದ ಪುತ್ರ ಕಾಮೇಷ್ಟಿ ಯಜ್ಞ ದಿಂದ ಜನಿಸಿದರು ಎಂದು ಹೇಳಲಾಗುತ್ತದೆ.
ರಾಮರಕ್ಷಾಸ್ತೋತ್ರವನ್ನು ಕೆಳಗಿನ ಲಿಂಕ್‌ನಲ್ಲಿ ಓದಬಹುದು.
http://www.vignanam.org/veda/rama-raksha-stotram-kannada.html
ಜೈ ಶ್ರೀ ರಾಮ್.

No comments:
Post a Comment