ಮುದ್ದು ಒಲವೆ, ಮನದ ಗೆಲುವೆ
ವರವಾಗಿ ನೀನು ಬರುವೆಯಾ!
ಒಲವ ಗೆದ್ದು ವಿಕಾಸ ಪಡೆದು
ಬದುಕ ಉಜ್ವಲಗೊಳಿಸೆಯಾ
ವಿರಹ ಅಳಿಸಿ ಸೊಗದಿ ನೆಲೆಸಿ
ಮೊಗದಿ ನಗುವ ತರುವೆಯಾ
ಸಾಕು ನೋವು, ಬೇಕು ಚೆಲುವು
ಮಯೂರಿಯಂತೆ
ನಲಿವೆಯಾ...
ಬೃಂದಾವನದ ಏ ಚೆಲುವೆ..!
ಗೋಪಿಕಾ ಪ್ರೇಮದೊಲವೆ..!
ಮಾಧವನನೆ ಪ್ರೇಮ ಬಂಧನದಲಿರಿಸಿದೆ
ನಿಜ ಪ್ರೇಮದ ಅರ್ಥವ ಜಗಕೆ ಸಾರಿದೆ..
ಮನ-ಮನ ಪ್ರೀತಿಗೆ ಮಾದರಿ ಒಲವಾದೆ
ಜಗದಂತ್ಯದವರೆಗೊ ಅಮರ ತ್ಯಾಗಿಯಾದೆ!
ಮದುವೆಯ ಬಂಧ, ದೇಹ ಸಂಬಂಧ
ಮೀರಿದ ಮನಸುಗಳ ಮೀಲನಾನುಬಂಧ
ಆತ್ಮಗಳ ಐಕ್ಯತೆ ಸೊಗ ಪರಮಾನಂದ
ಕಲಿಯಲಿ
ಕಲಿಯುಗ ನಿಮ್ಮ ಪ್ರೇಮದಿಂದ!
:-ಕೃತಿ
No comments:
Post a Comment