ದ್ವಾಪರಯುಗದಲಿ ಕಾದಿದೆ ನೀನು!
ಕಲಿಯುಗದಲು ಕರೆಯುತಿಹೆ ಏನು?
ನಿನಗಲ್ಲದೆ ಇನ್ಯಾರಿಗೆ ಮುಕುಂದ
ನಿನ್ನೊಲವಲಿ ಪಡುವನು ಬಹು ಆನಂದ
ಬೇಸರ ಬೇಡ, ಬರುವನು ನೋಡ
ಪ್ರೆಮಧಾರೆಯನವನಿಗೆ ಹರಿಸಿ ನೀ ನೋಡ
ವಿಕಾಸದ ಒಲವು ದೇವರ ವರವು
ಪಸರಿಸಲಿ
ಜಗಕೆ ಬಾಂಧವ್ಯ ಪರಿಮಳವು|
ಅಂದಿನ ಅಗಲಿಕೆ, ಅನುಭವಿಸಿದ ವಿರಹ
ಇಂದಿನ ಬೆಸುಗೆ, ಚೈತನ್ಯದ ಸ್ನೇಹಾ
ಏನೀ ಬಂಧನ ನಿಮ್ಮೀ ಪ್ರೇಮಾನುಬಂಧನ
ಸರ್ವಕಾಲಕು ನಿಮ್ಮ ಬದುಕೇ ಬೃಂದಾವನ
ನಿನ್ನನು ಪಡೆದ ಕೃಷ್ಣನೇ ಧನ್ಯ!
ಅವನ ಹೃದಯವ
ಗೆದ್ದ ನೀನೇ ಮಾನ್ಯ!
:-ಕೃತಿ
No comments:
Post a Comment