Friday, 3 April 2020

ಪ್ರಕೃತಿ-ಚಿಂತನಾ

ಕೋವಿಡ್-೧೯ (Corona virus India lockdown ಸಮಯದಲ್ಲಿ ಗೀಚಿದ ಕವನ)

ಓ ಮನುಜಾ….
ಏನಾಗುತಿದೆ, ಏನಾಗಲಿದೆ
ಕೊಲ್ಲುತಿದೆ, ಕುಣಿದಾಡುತಿದೆ
ಕಾಣದ ಜೀವಿಯು ಬಂದು
ಮನುಕುಲವನ್ನೇ ಸೋಲಿಸಿದೆ||
ಓ ಮನುಜಾ….
ಇನ್ನಾದರೂ ಕಲಿ ನೀ ಬುದ್ದಿ
ಇಡು ನೀ ಪ್ರಕೃತಿಯಾ ಶುದ್ದಿ
ನಾನು, ನನಗಷ್ಟೇ ಎಂಬುದ ಬಿಡು
ಇಂದೂ ಬಳಸಿ, ಮುಂದಕು ಉಳಿಸು
ನಿನ್ನುಳಿವು ನಿನ್ನ ಕೈಲಿದೆ ನೋಡು..
ಓ ಮನುಜಾ….
ಧರೆ ಎಂಬುದು ನಿನ್ನದೊಬ್ಬನದಲ್ಲ
ಸಕಲಜೀವರಾಶಿಗದು ಬೇಕಲ್ಲ
ಇದರಲಸಮಾನತೆ ಯಾಕೆ ಮಾಡಿದೆ
ನಿನ್ನಯ ಸ್ವಾರ್ಥವೇ ನಿನ್ನನು ತಿಂದಿದೆ
ಕಲಿಯಬಾರದೆ ನೀ ಇದರಿಂದೆ....
ಓ ಮನುಜಾ….
ಚಿಂತಿಸಿ ನೋಡು,  ಮ೦ಥಿಸಿ ನೋಡು
ಮಾನವೀಯತೆಯ ಬದುಕಲಿ ಓಡು
ಸುಸ್ಥಿರ ವಿಕಾಸ ಜೀವನ ಪಾಡು
ಇದುವೇ ನಿನ್ನಯ ರಕ್ಷಣ ಮಂತ್ರ
ಅನ್ಯತಾ ಬೇರಿಲ್ಲಾ ತಂತ್ರ….
ಓ ಮನುಜಾ….

:-ಕೃತಿ

No comments:

Post a Comment

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...