v
ಜಾತಿ ಮತ ಬಿಡಿ, ಮಾನವತೆಗೆ ಜೀವ ಕೊಡಿ
v
ಕಡಲಿನ ಎದುರು ಹನಿಗೆ ಪ್ರದರ್ಶನ ಸಲ್ಲದು.
v
ಉತ್ಸಾಹವೆಂಬುದು ಕಲ್ಲಿದ್ದಲ ಒಳಗಿನ ಕಾವಾಗಬೇಕೆ ಹೊರತು ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು.
v
ತನ್ನ ತಾನ್ ಇಲ್ಲಗೈವುದು ಎಲ್ಲ ಸಾಧನೆಯ ಕೊನೆಯ ಗುರಿ
v
ಸೃಷ್ಟಿ ಸೌಂದರ್ಯವನ್ನು ಪ್ರೀತಿಸುವುದೇ ಸೃಷ್ಟಿಕರ್ತನ ನಿಜವಾದ ಪೂಜೆ
v
ಪಾಪಿಗುದ್ದಾರಮಿಹುದೌ ಸೃಷ್ಟಿಯ ಬ್ರುಹದ್ವಿಶ್ವವ್ಯೂಹದೊಳ್
v
ಸುಂದರ ವನ ಸಂಸ್ಕೃತಿಯ ಮುಂದೆ ನಾಗರೀಕ ಸಂಸ್ಕೃತಿಯು ದಾರಿದ್ರ್ಯವೇ ದಿಟ.
v
ಗಿರಿವನ ಪ್ರೇಮ ಸುಮ್ಮನೆ ಅಲ್ಲ, ಅದಕೂ ದೈವ ಕೃಪೆ ಬೇಕು
v
ನಿನ್ನ ಸಂಸ್ಕೃತಿಗೆ ನೀನಾದರೆ ಅನ್ಯ, ಅದಾವ ಸಂಸ್ಕೃತಿಗೆ ನೀ ಮಾನ್ಯ?
v
ಸೂರ್ಯೋದಯ ಅಸ್ತಮಾನಗಳಿಗೆ ಮೈಚೆಲ್ಲಿ ಪಾವನಗೊಳ್ವುವು ಗಿರಿಶಿಖರಂಗಳ್..
v
ತೊರೆ ಅವಿದ್ಯೆಯಂ ಆಗೋ ಕಾಣ್ ಕಣ್ ತೆರೆದುದತೀಂದ್ರಿಯಕೆ..
**
ಕವಿಯಮನ ನಂದನವನ
ಆನಂದದ ರಸನಿಕೇತನ
ಅಲ್ಲಿ ಪಾಪವೂ ಪುಣ್ಯದ ವಾಹನ
ಅಲ್ಲಿ ದುಃಖವೂ ಸುಖದ ಜವಾನ
ಅಲ್ಲಿ ಸಾವೂ ಅಮೃತಾಯಾನ
(:-ಮಂತ್ರಾಕ್ಷತೆ ಕವನ ಸಂಕಲನ)
:- ವಿಶ್ವಮಾನವ ವಿವೇಕಾನಂದ
ಮತ್ತು ಕುವೆಂಪು ವಿಚಾರ ವೇದಿಕೆ.