Sunday, 2 December 2018

ಚುಟುಕು ಕವನಗಳು (Kannada chutuku kavanagalu 2)

ನೋಡಲೊಂದು ಸೊಗಸು ಗೀಜುಗನ ಗೂಡು
ಬದುಕಿ ಬಾಳಲು ಚಂದ ನಮ್ಮ ಕರುನಾಡು
ಬಂದೊಮ್ಮೆ ನೋಡು ಈ ಶೃಂಗಾರ ಕಲೆ ಬೀಡು
ಜೀವಿಗಳ ಉಳಿವಿಗೆ ಬೆಳೆಸಿ ಉಳಿಸಿ ಸಮೃದ್ಧ ಕಾಡು!


ಮೊಟ್ಟೆಯೊಂಡಿಡುವ ಕೋಳಿಯು
ತಟ್ಟನತ್ತಿನ್ದಿತ್ತ ನೋಡಿ
ಕೊಕ್ಕನೆತ್ತೊಮ್ಮೆ ಕ್ಕೊ-ಕ್ಕೊ ಎಂದು ಪಾಡಿ
ಮೂಲೆ ಸಂಧಿ ಗವಿಯಲ್ಲಿ ಕೂತು
ಇಟ್ಟಿತ್ತು ನೋಡಾ ಕೋಳಿಮೊಟ್ಟೆಯ!!


:-ಕೃತಿ

Friday, 16 November 2018

ಶರಣು ಆಂಜನೇಯ (Anjaneya song in kannada)

ಹೇ ಹನುಮಂತ ಹೇ ಶ್ರೀ ರಾಮಧೂತ
ಅಂಜನಿಪುತ್ರ ಪವನಸುತ
ಹೇ ಸಂಜೀವಿನಿ ಚಿರಂಜೀವಿ ಮಾರುತಿ
ಮಹಾವೀರ ಶಕ್ತಿ, ವಜ್ರಾಯುಧನೆ
ಶರಣೋ ನಿನಗೆ ಹೇ ವಾಯುಸುತನೆ
ಶರಣೋ ತೇಜವೇ ವೀರ ಹನುಮನೆ||

ವಿಧ್ಯಾ ಸಾಗರ, ಗುಣ ಪ್ರಭುಕರ
ಕಪಿಗಳ ನೇತಾರ ಅಸುರ ಸಂಹಾರೀ
ವಜ್ರಾಯುಧಿಯೇ ಶೋಭಿತ ಕುಂಡಲಿ
ಶಿವ ಅವತಾರಿ ಮಹಾಜಗ ವಂದಿಪನೆ
ಶರಣೋ ನಿನಗೆ ಹೇ ರಾಮ ಭಕ್ತನೆ
ಶರಣೋ ಸ್ಪೂರ್ತಿಯೇ ದೀರ ಹನುಮನೆ||

ಭಕ್ತರ ಕಷ್ಟ ಕೋಟಲೆಗಳ ಪರಿಹರಿಸೊ
ಸದ್ಭುದ್ಧಿ ಸಮೃದ್ಧಿ ದಯಪಾಲಿಸೋ
ದಯೆ ತೋರೋ ಹನುಮ ಕೃಪೆ ತೋರೋ
ನಿನ್ನನೇ ಭಜಿಸೊ ಮನ ನೀಡೋ ಪ್ರಭು
ಶರಣೋ ನಿನಗೆ ಹೇ ಮಹಾಪ್ರತಾಪನೆ
ಶರಣೋ ಕೀರ್ತಿಯೇ ಹೇ ಶೂರ ಹನುಮನೆ||

ಕೃಪೆ ಮಾಡೋ ಪ್ರಭು ದಯೆ ತೋರೋ
ಉದ್ಧರಿಸೋ ಪ್ರಭು ದಾರಿ ತೋರೋ
ಸಕಲವನರ್ಪಿಸಿದೆ ನಿನಗೇ ಹನುಮ
ಕೈ ಹಿಡಿದು ಮುನ್ನಡೆಸಿ ಗುರಿ ಸೇರಿಸೋ
ಶರಣೋ ಮಹಾಶಕ್ತಿ ಹೇ ವೀರಾಂಜನೇಯ
ಶರಣೋ ಭಜರಂಗಿ ಹೇ ಜಗವಂದಿತ

ರಚನೆ: ಕೃಷ್ಣಮೂರ್ತಿ ಕೆ ಎಸ್, ಕೆಂಪಸಾಗರ

Sunday, 14 October 2018

೪ ಅದ್ಭುತ ಮಾತು-ಮುತ್ತುಗಳು!


ಮನಸ್ಸಿಟ್ಟು ಕಲಿತ ಅಕ್ಷರ,
ಕಷ್ಟಪಟ್ಟು ದುಡಿದು ತಿನ್ನುವ ಅನ್ನ,
ಕಷ್ಟಪಟ್ಟು ಗಳಿಸಿದ ಹಣ,
ಇಷ್ಟದಿಂದ ಮಾಡುವ ದೈವಭಕ್ತಿ,
ಯಾವತ್ತೂ ಯಾರನ್ನೂ ಕೈ ಬಿಡುವುದಿಲ್ಲ!

ಸಂತೆಯಲ್ಲಿದ್ದೂ ಏಕಾಂತತೆಯತ್ತ ಮುಖ ಮಾಡುವುದು ಸಜ್ಜನರ ಲಕ್ಷಣ!

ಯಾವುದೇ ಕಾರ್ಯವನ್ನು ಸರಿಯಾಗಿ ಆರಂಭಿಸಿದರೆ ಅರ್ಧದಷ್ಟು ಯಶಸ್ಸು ಕೈಗೊಂಡಿದಂತೆಯೇ ಸರಿ!

ಗುರಿ ಸಾಧನೆಯ ಹಾದಿಯಲ್ಲಿ ಕೆಲವಾದರೂ ಕಲ್ಲು ಬೀಳುವುದು ಸಹಜ, ಆದರೆ ಕಲ್ಲುಗಳಿಂದ ಗೋಡೆ ಕಟ್ಟಿಕೊಳ್ಳುತ್ತೇವೋ, ಸೇತುವೆ ನಿರ್ಮಿಸುತ್ತೇವೋ ಆಯ್ಕೆ ನಮ್ಮದು. ನಮ್ಮ ಬದುಕಿಗೆ ನಾವೇ ಶಿಲ್ಪಿಗಳು!

ಚುಟುಕು ಕವನಗಳು


ತಾಳಿದವನು ಬಾಳಿಯಾನು ಎಂಬುದಿದೆ
ಗಾದೆ ಮಾತೊಂದು|
ಇದನರಿತು ಸಾಗುತಿರೆ
ನಮ್ಮ ಬಾಳು ಬಂಗಾರವೆಂದು|
ಅದನರಿಯದೆ ಏಕೆ ಕೊರಗುವಿರಿ
ಜೀವನದಿ ನೊಂದು ನೊಂದು!|


ಆತುರಗಾರನಿಗೆ ಬುದ್ಧಿ ಮಟ್ಟವಂತೆ ಕೇಳ!
ನಿರಂತರ ಯತ್ನದಿ ಸಾಗಿ ನೀ ಬಾಳ!
ಸತತ ಪ್ರಯತ್ನ, ಸ್ಪಷ್ಟ ಗುರಿಯೇ ಜೀವನದ ದಾಳ!|
ಇನ್ನೇಕೆ ಚಿಂತೆ,
ಸಾಕು ಬೇಕುಗಳ ಸಂತೆ,
ಮೇಲ್ನುಡಿಗಳೇ ಸತ್ಯವಂತೆ!||
ಸುಗಮದಿ ಸಾಗಲಿ ನಿನ್ನ ಜೀವನ
ನಿಶ್ಚಿಂತೆಯಿಂ, ಸಂತೋಷದಿ ನಲಿಯಲಿ ನಿನ್ನ ಮನ,
ಅಮರ ಚೇತನವಾಗಲಿ ಜೀವಂಜ್ಯೋತಿ ಅನಿಕೇತನ!||

: ಕೃಷ್ಣ

Wednesday, 10 October 2018

ಕೆಲವು ಆಂಗ್ಲ ಪ್ರೇರಣಾತ್ಮಕ ನುಡಿಗಳು (ಆಂಗ್ಲ ಭಾಷೆಯಲ್ಲಿ )

A life without challenge would be like
going to school without lessons to learn.
Challenges come not to depress or get you down,
but to master and to grow and to unfold your abilities...

To realize the value of ONE YEAR, ask a student who failed a grade.
To realize the value of ONE MONTH, ask a mother who gave birth to a premature baby.
To realize the value of ONE WEEK, ask the editor of a weekly newspaper.
To realize the value of ONE HOUR, ask the lovers who are waiting to meet.
To realize the value of ONE MINUTE, ask a person who missed the train.
To realize the value of ONE SECOND, ask a person who just avoided an accident.
To realize the value of ONE MILLISECOND, ask the person who won a silver medal in the Olympics.

Great minds discuss Ideas;
Average minds discuss Events;
Small minds discuss People.

Tuesday, 9 October 2018

ಜ್ಞಾನಭಂಡಾರ ಜ್ಞಾನೇಶ್ವರ ಗುರುವಿಗೆ ಶರಣು.


          ಮಹಾಲಯ ಅಮಾವಾಸ್ಯೆ -2018  ಹಬ್ಬದ ದಿನ, ನನ್ನ ಪ್ರೀತಿಯ ಗುರುಗಳಾದ ಜ್ಞಾನೇಶ್ವರರ ಮನೆಗೆ ಭೇಟಿ ಕೊಟ್ಟಿದ್ದೆ. ಅದೊಂದು ಅಮೂಲ್ಯ ಸಮಯ. ಎಷ್ಟೋ ವಿಚಾರಗಳನ್ನು ಚರ್ಚಿಸಿದೆವು. ಅವುಗಳಲ್ಲಿ ಪ್ರಸ್ತುತ ಸಂದರ್ಭದಲ್ಲಿನ  ಸಾರ್ವಜನಿಕ ಸೇವೆಗೆ  ಹಾಗೂ ಜೀವನಕ್ಕೆ ಸಂಬಂಧಿಸಿದಂತೆ  ಗುರುಗಳ ಕೆಲವು ಅಭಿಪ್ರಾಯಗಗಳು ಇಂತಿವೆ.
  • ಸಮಾಜದ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಮತ್ತು ಆಡಳಿತಾಧಿಕಾರಿಗಳಿಗೆ ಕಾಳಜಿ ಮತ್ತು ಇಚ್ಛಾ ಶಕ್ತಿ  ಇರಬೇಕು. ಜೊತೆಗೆ ಹೊಸ ಚಿಂತನೆಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ಧೈರ್ಯ ಇರಬೇಕು. ಪ್ರಾರಂಭಿಸುವ (Initiative) ಗುಣ ಇರಬೇಕು.
  • ಸದಾ ಅಧ್ಯಯನಶೀಲನಾಗಿರಬೇಕು, ಪ್ರತಿದಿನ ಬರೆಯುವ ಅಭ್ಯಾಸವನ್ನಿಟ್ಟುಕೊಳ್ಳಬೇಕು.
  • ಯಾವುದಕ್ಕೂ ಅಂಜಬಾರದು, ನಾವು ಸತ್ಯವಂತರು, ನೈತಿಕ  ಗುಣ ಉಳ್ಳವರು ಆಗಿದ್ದಾಗ ಯಾವುದಕ್ಕೂ ಹೆದರುವ ಅವಶ್ಯಕತೆಯಿಲ್ಲ.
  • ರೈತರು ಬಹುಬೆಳೆ ಪದ್ಧತಿ ಅನುಸರಿಸುವ ಜರೂರು ಅವಶ್ಯಕತೆ ಇದೆ. ಆಗ ಮಾತ್ರ ರೈತರ ಬದುಕು ಲಾಭದಾಯಕವಾಗಲು ಸಾಧ್ಯ.

ಇವುಗಳ ಜೊತೆಗೆ ಗುರುಗಳನ್ನು ನೋಡಿ ಕಲಿಯುವುದೇ ತುಂಬಾ ಇದೆ. ಹಿತ ಮಿತ ಮೃದು ಭಾಷಿ, ಸರಳತೆ. ನೇರ ನುಡಿ, ವಿಚಾರ ಮಾಡಿ ಮಾತಾಡುವ ಕಲೆ, ಬಿಡುವಿನ ಸಮಯವನ್ನು ಓದು ಮತ್ತು ಬರಹಗಳಲ್ಲಿ ತೊಡಗಿಸಿಕೊಳ್ಳುವುದು, ಶಿಷ್ಯವರ್ಗಕ್ಕೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುವುದು ಹೀಗೆ ಹಲವಾರು ವಿಷಯಗಳಿವೆ. ಹೆಸರಲ್ಲೇ ಜ್ಞಾನ ಇರುವಂತೆ ಅವರು ಜ್ಞಾನಭಂಡಾರವೆಂದರೆ ತಪ್ಪಿಲ್ಲ. ಅದನ್ನು ಸದ್ವಿನಿಯೋಗಪಡಿಸಿಕೊಂಡು ಯುವಜನತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದೇ ವಿಚಾರಗಳನ್ನು ವಿನಿಮಯಮಾಡಿಕೊಳ್ಳುತ್ತಿರುವ ಉದ್ದೇಶವಾಗಿದೆ.

Tuesday, 31 July 2018

ಸ್ನೇಹದ ಹೂ

ಎಂದಿಗೂ ಮುಗಿಯದ
ಒಮ್ಮೆಯೂ ಬಾಡದ
ಸ್ನೇಹದ ಹೂ ನೀನು|

ನಿತ್ಯದ ಬದುಕಲಿ
ನನ್ನೆದೆ ಶಾಶ್ವತ
ಪ್ರಜ್ವಲಿಸೋ ಜ್ಯೋತಿ ನೀನು|

ಆಪತ್ಕಾಲದಿ ನೆರವು ನೀಡಿ
ಅಂಧಕಾರದಿ ದಾರಿ ತೋರಿ
ಬೆಳಗೋ ನಕ್ಷತ್ರ ನೀನು|

ಭೇದವ ಎಣಿಸದೆ
ಸ್ವಾರ್ಥವ ಬಯಸದೆ
ಬಾಳುವ ತ್ಯಾಗಮೂರ್ತಿಯು ನೀನು|

ಪದಗಳೇ ಸಾಲದ
ಕವಿತೆಗೂ ನಿಲುಕದ
ಅನಂತ ಚೇತನ ನೀನು|

 :-ಕೃಷ್ಣ (ಕೃತಿ)



Monday, 11 June 2018

ಚುಟುಕು ಕವನಗಳು


1)
ಹಗಲು ರಾತ್ರಿಗಳು ಓಡುತಿರಲು
ಸುಖ-ದುಃಖಗಳು ಸಾಗುತಿರಲು
ಕಾಲ ಚಕ್ರವು ತಿರುಗುತಿರಲು..
ಬದಲಾವಣೆ ಪ್ರಕೃತಿಯ ನಿಯಮವಣ್ಣ
ಅದುವೇ ಜಗದ ಸೂತ್ರವಣ್ಣ
ಅದನರಿತು ನೀವೆಲ್ಲರೂ ಬಾಳಿರಣ್ಣ
ನಿಮ್ಮ ಬದುಕು ಬಂಗಾರವಾಗಲಣ್ಣ



2)
ಬೇಡ ಎಂಬುದು ಬೇಕು
ಬೇಕು ಎಂಬುದು ಬಯಕೆ
ಪರಿಣಾಮ ಅಶಾಂತಿ ಮನಕೆ|
ಇನ್ನೆಷ್ಟು ದಿನ ಇದರ ಕೇಕೆ?
ಇನ್ನಾದರೂ ತುಂಬಲಿ ಸಂತೋಷ ಮಡಿಕೆ
ಹಾರಾಡಲಿ ಜೀವನ ಸಮೃದ್ಧಿಯ ಪತಾಕೆ...


                                       :- ಕೃತಿ

Wednesday, 6 June 2018

ಪ್ರಥಮ ಯೋಜನೆ: ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕೆಂಪಸಾಗರ (LPS Kempasagara)


ಪ್ರಥಮ ಯೋಜನೆ:ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕೆಂಪಸಾಗರ
ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿರುವ ಈ ಶಾಲೆ ತಾಲ್ಲೋಕಿಗೆ ಒಂದು ಮಾದರಿ ಶಾಲೆ. ಇಲ್ಲಿನ ಮುಖ್ಯಶಿಕ್ಷಕರು ಮತ್ತು ಸಹ ಶಿಕ್ಷಕರ ಶ್ರಮದಿಂದ ಶಾಲೆ ಹಸಿರಿನಿಂದ ಸಿಂಗರಿಸಿದ್ದು ಮಕ್ಕಳು ಜ್ಞಾನ ಲೋಕದಲ್ಲಿ ನೂರಾರು ಹೊಸ ಕನಸುಗಳೊಂದಿಗೆ ಕಂಗೊಳಿಸುತ್ತಿವೆ.
ಪ್ರಸ್ತುತ ಗ್ರಾಮದಲ್ಲಿ ಆಂಗ್ಲ ಶಾಲೆಗಳ ವ್ಯಾಮೋಹ ಜಾಸ್ತಿಯಾಗಿದ್ದು ದುಡಿದ ಬಹುಪಾಲನ್ನು ಪೋಷಕರು ಕಾನ್ವೆಂಟ್ ಶಾಲೆಗಳಿಗೆ ಸುರಿಯುತ್ತಿದ್ದಾರೆ. ಇಲ್ಲಿನ ಶಿಕ್ಷಕರು, ಸರ್ಕಾರೀ ಆಯೋಜಿತ ಶಿಕ್ಷಣದ ಜೊತೆಗೆ -ಇಲ್ಲಿನ ಹಳೇ ವಿದ್ಯಾರ್ಥಿಗಳು, ಇತರೆ ಸ್ನೇಹ ಸಹಾಯ ಹಸ್ತಗಳು ಸೇರಿದರೆ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದಾರೆ.

ಈ ನಿಟ್ಟಿನಲ್ಲಿ ಸಹಾಯಲೋಕ-Helping hands ನಿಂದ
 ಶನಿವಾರದಂದು ಶಾಲೆಗೆ ತೆರಳಿ ಅವರಿಗೆ ಆಂಗ್ಲ ಭಾಷೆ ಕಲಿಕೆ , ವಿಜ್ಞಾನ ಅನ್ವಯಗಳ ಪರಿಚಯ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಇತರ ಆಟ ಪಾಠಗಳ ಮೂಲಕ ಗ್ರಾಮೀಣ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಳಿಲ ಸೇವೆ ಮಾಡೋಣ...
Please share your ideas to mail id: krishnakempasagara@gmail.com








ಸಹಾಯಲೋಕ-Helping Hands


ಪೀಠಿಕೆ (Introduction):
ಬನ್ನಿ ಕೈಜೋಡಿಸಿ: ಗ್ರಾಮೀಣ ಸರ್ಕಾರಿ ಶಾಲೆಗಳ ಮತ್ತು ಅಲ್ಲಿನ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸೋಣ.
(Come, Lets join your hands for Rural school and Rural children overall developments)

) ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಕೊಡುಗೆ (Help to improve basic necessities of rural government schools)
) ಶನಿವಾರದಂದು ಶಾಲೆಗೆ ತೆರಳಿ ಅವರಿಗೆ ಆಂಗ್ಲ ಭಾಷೆ ಕಲಿಕೆ , ವಿಜ್ಞಾನ ಅನ್ವಯಗಳ ಪರಿಚಯ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಇತರ ಆಟ ಪಾಠಗಳ ಮೂಲಕ ಗ್ರಾಮೀಣ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಳಿಲ ಸೇವೆ ಮಾಡೋಣ..
(Will go to school on Saturday and help students for English learning, Science experiments, Cultural activities, sports etc. so that we can support teachers for overall children development)
) ಬಡ ಮಕ್ಕಳ ಶಿಕ್ಷಣ -ಯೋಗ ಕ್ಷೇಮಕ್ಕೆ ನೆರವಾಗೋಣ (We can support Rural poor children for their education and welfare)

ದೀಪದಿಂದ ದೀಪವ ಹಚ್ಚು ನೀನು ಮಾನವ: ಕೈಲಾದ ಮಟ್ಟಿಗೆ ಸೇವೆ ಮಾಡೋಣ: ನಾವು ಬದುಕೋಣ ಜೊತೆಗೆ ಇತರರಿಗೂ ಬದುಕಲು ನೆರವಾಗೋಣ...
(Instead of commenting on problems...lets take some initiative and start helping for those who really need)

Sunday, 3 June 2018

ಅಮರ ಸ್ನೇಹ: ಬಿಡಿಸಲಾರದ ಬಾಂಧವ್ಯ



ಆಕಾಶ ಭೂಮಿ ದೂರವೇ ಇದ್ದರೂ
ಅವುಗಳ ಸಂಬಂಧಗಳಿಗೆ ಮಿತಿಯುಂಟೇನಯ್ಯ..
ಮೋಡ- ಜಲಚಕ್ರ ಮಳೆ -ನೀರಾವಿ
ಬೆಳೆ- ಸಮೃದ್ಧಿ ತಾಪ- ಹವಾಮಾನ ..
ಹೀಗೆ ನೂರೆಂಟು ಬಂಧಗಳಿವೆ ಕಾಣಯ್ಯ!

ಮಾನವ ಸಂಬಂಧಗಳು ಜೊತೆ ಇರದಿದ್ದೊಡೆ
ಅವುಗಳು ಮುಗಿದೇ ಹೋದವು ಎಂದೇಕೆನ್ನುವಿರಿ..
ಮನಸ್ಸು- ನೆನಪು ಮುಗುಳ್ನಗೆ- ನಿಟ್ಟುಸಿರು
ಕನಸು- ಅಭಿವೃದ್ಧಿ ಕೋಪ- ಬಹುಮಾನ
ಹೀಗೆ ನೂರೆಂಟು ಅನುಬಂಧಗಳಿವೆ ಕಾಣಿರಯ್ಯ..

ನಿರ್ಲಿಪ್ತ ನಿಸ್ವಾರ್ಥ ನಿರಹಂಕಾರ..ವಿಕಾಸ ಒಳಿತು ಶ್ರೇಯಸ್ಸಿನ ಸ್ನೇಹ ಬಂಧವು ಎಂದಿಗೂ ಅಮರವಯ್ಯ...
ಇದೇ ಅಮರ ಸ್ನೇಹ ಚೇತನದ ಗುಟ್ಟು ಕಾಣಯ್ಯ...
 :-ಕೃತಿ (ಕೃಷ್ಣ ತಿಲಕ್)

Thursday, 24 May 2018

ಇಂಗ್ಲೀಷ್ ನಲ್ಲಿ ಬರೆಯಿರಿ; ಕನ್ನಡ ಅಕ್ಷರಗಳನ್ನು ಪಡೆಯಿರಿ! (Type English- Get Kannada fonts!)

ಇಂಗ್ಲೀಷ್ ನಲ್ಲಿ  ಬರೆಯಿರಿ; ಕನ್ನಡ ಅಕ್ಷರಗಳನ್ನು ಪಡೆಯಿರಿ: 
http://writekannadaonline.blogspot.com/

ಹವ್ಯಾಸಗಳು (Hobbies)

     ಹವ್ಯಾಸಗಳು ಒಂಥರಾ ಬಾಳ  ಸಂಗಾತಿಗಳೇ  ಸರಿ!  ಒಂದು ಮಾತಿದೆ  “A Hobby a day keeps the doldrums away” ಪ್ರತಿದಿನದ ಜಂಜಾಟಗಳ ನಡುವೆ ಒಂದು ಹವ್ಯಾಸವಿದ್ದಿದ್ದೇ  ಆದರೆ ಎಷ್ಟೋ ಸಂಕಟಗಳು ಮಾಯವಾಗಿ ಮನಸ್ಸಿನಲ್ಲಿ ಆಹ್ಲಾದ ಮೂಡುತ್ತದೆ. 
ಬಿಡುವಿನ ವೇಳೆಯಲ್ಲಿ ನಮ್ಮ ಮನಸ್ಸಿಗೆ ಹತ್ತಿರವಾದ, ಆಸಕ್ತಿಯಿಂದ ಮಾಡುವ, ಮನಸ್ಸನ್ನು ಸಂತೋಷಗೊಳಿಸುವ ಚಟುವಟಿಕೆಗಳೇ ಹವ್ಯಾಸಗಳು. ನಮ್ಮ ಇಂದಿನ ಜೀವನ ಶೈಲಿಯಲ್ಲಿ ಹವ್ಯಾಸಗಳಿಗೆ ಸ್ವಲ್ಪ ಸಮಯ ಕೊಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪ್ರಭಾವ ಬೀರಿ ಚೈತನ್ಯ ತಂದು ಕೊಡುತ್ತವೆ. ಹವ್ಯಾಸಗಳು ಆತ್ಮ ವಿಶ್ವಾಸ ಹೆಚ್ಚಿಸುವುದರ ಜೊತೆಗೆ ನಮ್ಮ ನಿತ್ಯ ಕಾರ್ಯಗಳಲ್ಲಿ ಉತ್ಸಾಹ ತುಂಬುತ್ತವೆ. ಉತ್ತಮ ಹವ್ಯಾಸಗಳು ನಮ್ಮ ಜೀವನವನ್ನು ಉತ್ತಮಗೊಳಿಸಿ ನಮ್ಮನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸುತ್ತವೆ.
ಇನ್ನೊಂದು ಮಾತಿದೆ “Happy is the man who is living by his hobby” ತನ್ನ ಇಷ್ಟವಾದ ಹವ್ಯಾಸಗಳೊಂದಿಗೇ  ಜೀವನ ಸಾಗಿಸುವಂತಿದ್ದರೆ  ಅವರಂತ ಅದೃಷ್ಟವಂತರು ಮತ್ತೊಬ್ಬರಿಲ್ಲ ! ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಹವ್ಯಾಸಗಳನ್ನು  ರೂಡಿಸಿಕೊಂಡು ಅವುಗಳಿಗೆ ಸ್ವಲ್ಪ ಸಮಯವನ್ನು ಮೀಸಲಿಡುತ್ತ ಸಂತೋಷ ಜೀವನ ಸಾಗಿಸೋಣ.




Monday, 30 April 2018

ತಮ್ಮನಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಬರೆದ ಸಾಲುಗಳು

ಜನ್ಮ ದಿನದ ಶುಭಾಶಯಗಳು ಪ್ರೀತಿಯ ತಮ್ಮನಿಗೆ

‘ತಮ್ಮ’ ಎಂಬೆರಡಕ್ಷರದ ಸಹೋದರ ಪ್ರಾಣ

ಪ್ರಸನ್ನ ವದನ ತಿಲಕ ನಾಮ ಹೊಂಗಿರಣ

ವೀರನಂ ಕಥೆ ಕೇಳಿ ಅದೆ ಪೆಸರ ಮಾಡಿಕೊಂಡೆ ನೀ ನಾಮಕರಣ!!

ಗುರುಕೋಟಿ ಪ್ರಿಯಪಾತ್ರ ಏ ಕಿರಣ

ಗುರುವಂ ಚಕಿತಗೊಳಿಸಿದ ಮಾತಿನ ಬಾಣ

ಇಂದಿಗೂ ನೆನೆವರಯ್ಯ ಆ ಪದ ಬಾಣ ಓ ಜಾಣ!!

ವೀರ ಹನುಮನ ಭಕ್ತ- ಅವನಂತೆ

ನಿನ್ನಲೂ ಇಹುದು ಅದ್ಭುತ ಶಕ್ತಿ ಕಾಣ|

ಬಯಸಿಹಳು ನಮ್ಮ ಭಾರತ ಮಾತೆ

ಆ ಶಕ್ತಿ ಚೈತನ್ಯದಾ ನಿನ್ನ ಸೇವಾ ಗುಣ|

ಇನ್ನೇಕೆ ತಡ! ಸಾಗಲಿ ಉದಯೋನ್ಮುಕ ಆ ನಿನ್ನ ಸ್ಪೂರ್ತಿ ಪಯಣ….

ಜಾಣ ಬಾಣ ಕಿರಣ ಏ ತಿಲಕ ಹೊಂಗಿರಣ..

ಸಂತೋಷ ಸಮೃದ್ದಿ ಚೈತನ್ಯ ನೆಮ್ಮದಿ ಜೊತೆಗೂಡಿ

ಶುಭವಾಗಲಿ ಯಶಸ್ಸು ನಿನ್ನದಾಗಲೆಂದು ಹರಸುವೆವು ಬೇಡುವೆವು ಓ ಮಿತ್ರ ಪ್ರಾಣ.

ಜನ್ಮ ದಿನದ ಶುಭಾಶಯಗಳು ಪ್ರೀತಿಯ ತಮ್ಮನಿಗೆ....


  :-ಕೃತಿ (ಕೃಷ್ಣತಿಲಕ್)

Tuesday, 24 April 2018

ವಾಲ್ಮೀಕಿಯ ಭಾಗ್ಯ: ಕುವೆಂಪು

ನನ್ನ ಗುರುಗಳಾದ ಜ್ಞಾನೇಶ್ವರರ ಜ್ಞಾನಲೋಕ ಬ್ಲಾಗ್ ನಲ್ಲಿ ವಿಹರಿಸುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಪುಸ್ತಕ ವಾಲ್ಮೀಕಿಯ ಭಾಗ್ಯ.
ಕೆ ವಿ ಪುಟ್ಟಪ್ಪ (ಕುವೆಂಪುವಿರಚಿತ ಒಂದು ಪುಟ್ಟ ಸಮೃದ್ಧ ನಾಟಕ.
 ನಾಟಕದಲ್ಲಿ ಪಾತ್ರಗಳು ಮೂರೇ  (ಪಾತ್ರಗಳುಸೀತಾಲಕ್ಷ್ಮಣ (ಸೌಮಿತ್ರಿ), ವಾಲ್ಮೀಕಿ.) ಆದರೂ  ಪಾತ್ರಗಳಿಂದ ಹೊರಹೊಮ್ಮುವ ಭಾವ ಸಂದೇಶ ಮಾತ್ರ ಅಪರಿಮಿತ
ಶ್ರೀ ರಾಮಚಂದ್ರನ ಪಿಸುಣ್ಗೆ ಕಿವಿಗೊಟ್ಟ ಕಟ್ಟಾಣತಿಯಂತೆ ಸೌಮಿತ್ರಿಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ಅರಣ್ಯದಲ್ಲಿ ಬಿಟ್ಟು ಹೋಗುವ ಹೃದಯ ವಿದ್ರಾವಕವಾದ ಸನ್ನಿವೇಶವನ್ನು ಕುವೆಂಪು ಅವರು ಅಮೋಘವಾಗಿ ಚಿತ್ರಿಸಿದ್ದಾರೆ. 
ಶ್ರೀ ರಾಮನು ಸೀತೆಯನ್ನು ಕಾಡಿಗೆ ಕಳುಹಿಸಿದ್ದಕ್ಕೆ ಲೋಕಾಪವಾದದ ನಿವಾರಣೆ, ರಘುಕುಲದ ಕೀರ್ತಿ ಸಂರಕ್ಷಣೆ , ಶ್ರೀ ರಾಮ ಸ್ವಕೀರ್ತಿಪಾಲನೆ ಮೊದಲಾದ ಕಾರಣಗಳಿದ್ದರೂ, ನಾಟಕದಲ್ಲಿ ವಾಲ್ಮೀಕಿಯ ಭಾಗ್ಯವಾಗಿ ಮೂಡಿಬಂದಿದೆ.
ಗಂಗಾತೀರದ ಘೋರಅರಣ್ಯದಲ್ಲಿ ಸೀತೆಯೊಬ್ಬಳನ್ನೇ ಬಿಟ್ಟುಹೋಗುವ ನಡುವೆ ನಡೆಯುವ ದೃಶ್ಯ 
ಹೃದಯಂಗಮವಾಗಿದೆನಾಟಕದ ಕೊನೆಯಲ್ಲಿ ವಾಲ್ಮೀಕಿಯ ನೀನೆನ್ನ ಮಹಾಕಾವ್ಯದ ಸವಿಗಣ್ಣಲ್ತೆಕಥನಾಯಕಿಯಲ್ತೆ?
ವಾಲ್ಮೀಕಿಯ ಭಾಗ್ಯಮಲ್ತೆ ? ಮಾತುಗಳೊಂದಿಗೆ ನಾಟಕ ತೆರೆಗೊಳ್ಳುತ್ತದೆ.

ಪುಸ್ತಕವನ್ನು ಆರ್ಕೈವ್ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಲು  ಕೊಂಡಿ ಬಳಸಿ: http://bit.ly/2hdEIzK


ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು

ಸರ್ವರಿಗೂ ಸ್ವಾಮಿ ವಿವೇಕಾನಂದರ ದಿನಾಚರಣೆಯ /ರಾಷ್ಟ್ರೀಯ ಯುವ ದಿನದ ಶುಭಾಶಯಗಳು 💐 ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು ನಿಮಗಾಗಿ. ಇಂದಿನ ಜಗತ...