Tuesday, 17 May 2022

ಕನ್ನಡ ಕಲಿ-01

ಕನ್ನಡ ವರ್ಣಮಾಲೆಯಲ್ಲಿ ೪೯ (49 ) ಅಕ್ಷರಗಳಿವೆ.

Kannada varnamale is the list of Kannada alphabets or letters or words.  

Total 49 letters are there in Kannada language.

ಕನ್ನಡ ಭಾಷೆಯಲ್ಲಿರುವ ಮೂಲಾಕ್ಷರಗಳನ್ನು ಕನ್ನಡ ವರ್ಣಮಾಲೆ ಎಂದು ಕರೆಯುತ್ತಾರೆ.

ಕನ್ನಡ ವರ್ಣಮಾಲೆ:

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

 

Grammar: ವ್ಯಾಕರಣ:

ಸ್ವರಗಳು - 13

ಸ್ವರಗಳ ವಿಧ :

1. ಹ್ರಸ್ವ ಸ್ವರಗಳು - 6 (ಅ,ಇ ಉ,ಋ,ಎ,ಒ)

2. ದೀರ್ಘ ಸ್ವರಗಳು. - 7 (ಆ,ಈ,ಊ,ಏ.ಐ.ಓ,ಔ)

3. ಯೋಗವಾಹಗಳು - 2  {ಅಂ(ಅನುಸ್ವಾರ),  ಅಃ(ವಿಸರ್ಗ)}


ವ್ಯಂಜನಗಳು - 34

ವ್ಯಂಜನಗಳಲ್ಲಿ ಎರಡು ವಿಧ :

1. ವರ್ಗೀಯ ವ್ಯಂಜನಗಳು - 25

ಕ-ವರ್ಗ = ಕ, ಖ, ಗ, ಘ, ಙ.

ಚ-ವರ್ಗ = ಚ, ಛ, ಜ, ಝ, ಞ.

ಟ-ವರ್ಗ = ಟ, ಠ, ಡ, ಢ, ಣ.

ತ-ವರ್ಗ = ತ, ಥ, ದ, ಧ, ನ.

ಪ-ವರ್ಗ= ಪ, ಫ, ಬ, ಭ, ಮ.

ಅಲ್ಪ ಪ್ರಾಣಗಳು: 

ಕ,ಚ,ಟ,ತ,ಪ

ಗ,ಜ,ಡ,ದ,ಬ

ಮಹಾಪ್ರಾಣಗಳು: 

ಖ,ಛ,ಠ,ಥ,ಫ

ಘ,ಝ,ಢ,ಧ,ಭ

ಅನುನಾಸಿಕಗಳು: 

 ಙ, ಞ, ಣ, ನ, ಮ


2. ಅವರ್ಗೀಯ ವ್ಯಂಜನಗಳು - 9

ಯ ರ ಲ ವ ಶ ಷ ಸ ಹ ಳ


Additional information:

ಸ್ವರಗಳು(Vowels):

ಅ -a, ಆ-aa, ಇ-i, ಈ-I, ಉ-u, ಊ-U, ಋ-Ru, ಎ-e, ಏ-E, ಐ-i, ಒ-o, ಓ-O, ಔ-ou, ಅಂ-am, ಅಃ-aHa.

ವರ್ಗೀಯ ವ್ಯಂಜನಗಳು (Grouped Consonants):

ಕ-ka, ಖ-Ka kha, ಗ-ga, ಘ-Ga gha, ಙ-~ga,

ಚ-ca, ಛ-Ca, ಜ-ja, ಝ-Ja jha, ಞ-~ja,

ಟ-Ta, ಠ-Tha, ಡ-Da, ಢ-Dha, ಣ-NA,

ತ-Ta, ಥ-Tha, ದ-Da, ಧ-Dha, ನ-Na,

ಪ-Pa, ಫ-PHA, ಬ-Ba, ಭ-BHA, ಮ-Ma,

ಅವರ್ಗೀಯ ವ್ಯಂಜನಗಳು (Miscellaneous Consonants):

ಯ-ya, ರ-ra, ಲ-la, ವ-wa va ಶ-sha, ಷ - Sha, ಸ-sa, ಹ-ha, ಳ-La

Saturday, 4 April 2020

ಕುವೆಂಪು ನುಡಿ-ಕಿಡಿ-೧ (Kuvempu Quotes)


v ಜಾತಿ ಮತ ಬಿಡಿ, ಮಾನವತೆಗೆ ಜೀವ ಕೊಡಿ

v ಕಡಲಿನ ಎದುರು ಹನಿಗೆ ಪ್ರದರ್ಶನ ಸಲ್ಲದು.

v ಉತ್ಸಾಹವೆಂಬುದು ಕಲ್ಲಿದ್ದಲ ಒಳಗಿನ ಕಾವಾಗಬೇಕೆ ಹೊರತು ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು.

v ತನ್ನ ತಾನ್ ಇಲ್ಲಗೈವುದು ಎಲ್ಲ ಸಾಧನೆಯ ಕೊನೆಯ ಗುರಿ

v ಸೃಷ್ಟಿ ಸೌಂದರ್ಯವನ್ನು ಪ್ರೀತಿಸುವುದೇ ಸೃಷ್ಟಿಕರ್ತನ ನಿಜವಾದ ಪೂಜೆ

v ಪಾಪಿಗುದ್ದಾರಮಿಹುದೌ ಸೃಷ್ಟಿಯ ಬ್ರುಹದ್ವಿಶ್ವವ್ಯೂಹದೊಳ್

v ಸುಂದರ ವನ ಸಂಸ್ಕೃತಿಯ ಮುಂದೆ ನಾಗರೀಕ ಸಂಸ್ಕೃತಿಯು ದಾರಿದ್ರ್ಯವೇ ದಿಟ.

v ಗಿರಿವನ ಪ್ರೇಮ ಸುಮ್ಮನೆ ಅಲ್ಲ, ಅದಕೂ ದೈವ ಕೃಪೆ ಬೇಕು

v ನಿನ್ನ ಸಂಸ್ಕೃತಿಗೆ ನೀನಾದರೆ ಅನ್ಯ, ಅದಾವ ಸಂಸ್ಕೃತಿಗೆ ನೀ ಮಾನ್ಯ?

v ಸೂರ್ಯೋದಯ ಅಸ್ತಮಾನಗಳಿಗೆ ಮೈಚೆಲ್ಲಿ ಪಾವನಗೊಳ್ವುವು ಗಿರಿಶಿಖರಂಗಳ್..

v ತೊರೆ ಅವಿದ್ಯೆಯಂ ಆಗೋ ಕಾಣ್ ಕಣ್ ತೆರೆದುದತೀಂದ್ರಿಯಕೆ..

**
ಕವಿಯಮನ ನಂದನವನ
ಆನಂದದ ರಸನಿಕೇತನ
ಅಲ್ಲಿ ಪಾಪವೂ ಪುಣ್ಯದ ವಾಹನ
ಅಲ್ಲಿ ದುಃಖವೂ ಸುಖದ ಜವಾನ
ಅಲ್ಲಿ ಸಾವೂ ಅಮೃತಾಯಾನ
 (:-ಮಂತ್ರಾಕ್ಷತೆ ಕವನ ಸಂಕಲನ)



:- ವಿಶ್ವಮಾನವ ವಿವೇಕಾನಂದ ಮತ್ತು ಕುವೆಂಪು ವಿಚಾರ ವೇದಿಕೆ.

ಒಲವು-ಚೆಲುವು (ಕಿರುಗವನಗಳು)

ಮುದ್ದು ಒಲವೆ, ಮನದ ಗೆಲುವೆ
ವರವಾಗಿ ನೀನು ಬರುವೆಯಾ!
ಒಲವ ಗೆದ್ದು ವಿಕಾಸ ಪಡೆದು
ಬದುಕ ಉಜ್ವಲಗೊಳಿಸೆಯಾ
ವಿರಹ ಅಳಿಸಿ ಸೊಗದಿ ನೆಲೆಸಿ
ಮೊಗದಿ ನಗುವ ತರುವೆಯಾ
ಸಾಕು ನೋವು, ಬೇಕು ಚೆಲುವು
ಮಯೂರಿಯಂತೆ ನಲಿವೆಯಾ...


ಬೃಂದಾವನದ ಏ ಚೆಲುವೆ..!
ಗೋಪಿಕಾ ಪ್ರೇಮದೊಲವೆ..!
ಮಾಧವನನೆ ಪ್ರೇಮ ಬಂಧನದಲಿರಿಸಿದೆ
ನಿಜ ಪ್ರೇಮದ ಅರ್ಥವ ಜಗಕೆ ಸಾರಿದೆ..
ಮನ-ಮನ ಪ್ರೀತಿಗೆ ಮಾದರಿ ಒಲವಾದೆ
ಜಗದಂತ್ಯದವರೆಗೊ ಅಮರ ತ್ಯಾಗಿಯಾದೆ!
ಮದುವೆಯ ಬಂಧ, ದೇಹ ಸಂಬಂಧ
ಮೀರಿದ ಮನಸುಗಳ ಮೀಲನಾನುಬಂಧ
ಆತ್ಮಗಳ ಐಕ್ಯತೆ ಸೊಗ ಪರಮಾನಂದ
ಕಲಿಯಲಿ ಕಲಿಯುಗ ನಿಮ್ಮ ಪ್ರೇಮದಿಂದ!

:-ಕೃತಿ

Friday, 3 April 2020

ಅದೇನು ಪ್ರೇಮ!


ದ್ವಾಪರಯುಗದಲಿ ಕಾದಿದೆ ನೀನು!
ಕಲಿಯುಗದಲು ಕರೆಯುತಿಹೆ ಏನು?
ನಿನಗಲ್ಲದೆ ಇನ್ಯಾರಿಗೆ ಮುಕುಂದ
ನಿನ್ನೊಲವಲಿ ಪಡುವನು ಬಹು ಆನಂದ
ಬೇಸರ ಬೇಡ, ಬರುವನು ನೋಡ
ಪ್ರೆಮಧಾರೆಯನವನಿಗೆ ಹರಿಸಿ ನೀ ನೋಡ
ವಿಕಾಸದ ಒಲವು ದೇವರ ವರವು
ಪಸರಿಸಲಿ ಜಗಕೆ ಬಾಂಧವ್ಯ ಪರಿಮಳವು|
ಅಂದಿನ ಅಗಲಿಕೆ, ಅನುಭವಿಸಿದ ವಿರಹ
ಇಂದಿನ ಬೆಸುಗೆ, ಚೈತನ್ಯದ ಸ್ನೇಹಾ
ಏನೀ ಬಂಧನ ನಿಮ್ಮೀ ಪ್ರೇಮಾನುಬಂಧನ
ಸರ್ವಕಾಲಕು ನಿಮ್ಮ ಬದುಕೇ ಬೃಂದಾವನ
ನಿನ್ನನು ಪಡೆದ ಕೃಷ್ಣನೇ ಧನ್ಯ!
ಅವನ ಹೃದಯವ ಗೆದ್ದ ನೀನೇ ಮಾನ್ಯ!


:-ಕೃತಿ

ಪ್ರಕೃತಿ-ಚಿಂತನಾ

ಕೋವಿಡ್-೧೯ (Corona virus India lockdown ಸಮಯದಲ್ಲಿ ಗೀಚಿದ ಕವನ)

ಓ ಮನುಜಾ….
ಏನಾಗುತಿದೆ, ಏನಾಗಲಿದೆ
ಕೊಲ್ಲುತಿದೆ, ಕುಣಿದಾಡುತಿದೆ
ಕಾಣದ ಜೀವಿಯು ಬಂದು
ಮನುಕುಲವನ್ನೇ ಸೋಲಿಸಿದೆ||
ಓ ಮನುಜಾ….
ಇನ್ನಾದರೂ ಕಲಿ ನೀ ಬುದ್ದಿ
ಇಡು ನೀ ಪ್ರಕೃತಿಯಾ ಶುದ್ದಿ
ನಾನು, ನನಗಷ್ಟೇ ಎಂಬುದ ಬಿಡು
ಇಂದೂ ಬಳಸಿ, ಮುಂದಕು ಉಳಿಸು
ನಿನ್ನುಳಿವು ನಿನ್ನ ಕೈಲಿದೆ ನೋಡು..
ಓ ಮನುಜಾ….
ಧರೆ ಎಂಬುದು ನಿನ್ನದೊಬ್ಬನದಲ್ಲ
ಸಕಲಜೀವರಾಶಿಗದು ಬೇಕಲ್ಲ
ಇದರಲಸಮಾನತೆ ಯಾಕೆ ಮಾಡಿದೆ
ನಿನ್ನಯ ಸ್ವಾರ್ಥವೇ ನಿನ್ನನು ತಿಂದಿದೆ
ಕಲಿಯಬಾರದೆ ನೀ ಇದರಿಂದೆ....
ಓ ಮನುಜಾ….
ಚಿಂತಿಸಿ ನೋಡು,  ಮ೦ಥಿಸಿ ನೋಡು
ಮಾನವೀಯತೆಯ ಬದುಕಲಿ ಓಡು
ಸುಸ್ಥಿರ ವಿಕಾಸ ಜೀವನ ಪಾಡು
ಇದುವೇ ನಿನ್ನಯ ರಕ್ಷಣ ಮಂತ್ರ
ಅನ್ಯತಾ ಬೇರಿಲ್ಲಾ ತಂತ್ರ….
ಓ ಮನುಜಾ….

:-ಕೃತಿ

Tuesday, 23 April 2019

ವಿಶ್ವ ಪುಸ್ತಕ ದಿನದ ಶುಭಾಶಯಗಳು.(ಏಪ್ರಿಲ್-೨೩)

ಏ ಪುಸ್ತಕವೇ..

ಮಗುವಿಗೆ ಅಕ್ಷರಭಾಷೆ ಕಲಿಸಿ
ಮಕ್ಕಳಿಗೆ ವಿಧ್ಯಾಭ್ಯಾಸ ಕಲಿಸಿ
ಯುವಜನತೆಯ ಬಾಳಲ್ಲಿ ಜ್ಞಾನ ಧಾರೆ ಹರಿಸಿ
ವಯಸ್ಕರಿಗೆ ನೆಮ್ಮದಿ ಶಾಂತಿ ತರಿಸಿ
ವೃದ್ಧ ಜೀವಿಗಳಿಗೆ ಮೋಕ್ಷ ದಾರಿ ತೋರಿಸಿ
ಸಕಲರ ಬಾಳ ಬೆಳಗುವ ನಿನಗೆ ಸಾಟಿ ಯಾರಿಹರೋ!?..
ಮಸ್ತಕದ ಉದ್ಧಾರಕ
ಅಂಧಕಾರ ನಿವಾರಕ
ನೆಮ್ಮದಿಯ ಪ್ರತೀಕ
ಜಗಶ್ಯಾಂತಿ ಸೂಚಕ
ಜ್ಞಾನ ಸಾಗರ ಶಕ್ತಿ 'ಪುಸ್ತಕವೇ' ಶರಣು ನಿನಗೆ...

*ಮನುಜ ಮಣ್ಣು ಮಾಯೆ ಹೊನ್ನು ನಂಬಿ ಕೆಟ್ಟವರಿರಬಹುದು..
ಪುಸ್ತಕವ ನಂಬಿ ಕೆಟ್ಟವರುಂಟೆ ಜಗದೊಳು!??*

ವಿಶ್ವ ಪುಸ್ತಕ ದಿನದ ಶುಭಾಶಯಗಳು.(ಏಪ್ರಿಲ್-೨೩)

Monday, 25 March 2019

ಆಫೀಸ್ ನಲ್ಲಿಂದು ಫುಡ್ ಮೇಳ !

ಫುಡ್ ಮೇಳ !
ನಮ್ಮ ಆಫೀಸ್ ನಲ್ಲಿಂದು ಫುಡ್ ಮೇಳ
ವಿವಿಧ ರಾಜ್ಯಗಳ, ಹಲವು ಟೀಮ್ ಗಳ
ರುಚಿ ರುಚಿ ಸವಿ ತಿಂಡಿಗಳ ಗಾಳ!
ಬಣ್ಣ ಬಣ್ಣದ ಸೀರೆಯುಟ್ಟು
ಅಂದದ ಆಭರಣವ ತೊಟ್ಟು
ಚೆಂದದ ಮೊಗದಿ, ಮುಗುಳ್ನಗೆ ಸೊಗದಿ
ಕೌಂಟರ್ ಗಳಿಗೆ ಕೈ ಬೀಸಿ ಕರೆವರು
ವಿವಿಧ ಸಂಸ್ಕೃತಿಯ
ವಿವಿಧತೆಯಲಿ ಏಕತೆಯ
ಸಾರಲು ನಿಂತ ಸುಂದರಿಯರು!
ಅದೇನದು ಸೊಬಗು
ಅದೇನದು ಬೆರಗು!
ತಣಿದವು ನೇತ್ರಗಳು, ಕುಣಿದವು ಮನಗಳು
ಪ್ರತಿದಿನವೂ ಹೀಗೇ ಇರಬಾರದೆ ಎಂದು ಹರಸಿದವು!!!


ರಚನೆ:-ಕೃಷ್ಣ (ಕೃತಿ)

ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು

ಸರ್ವರಿಗೂ ಸ್ವಾಮಿ ವಿವೇಕಾನಂದರ ದಿನಾಚರಣೆಯ /ರಾಷ್ಟ್ರೀಯ ಯುವ ದಿನದ ಶುಭಾಶಯಗಳು 💐 ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು ನಿಮಗಾಗಿ. ಇಂದಿನ ಜಗತ...